ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಠಾಣೆ ಎದುರು ಶಾಸಕ ಲಿಂಗೇಶ್‌ ಧರಣಿ

ಗ್ರಾಮ ಪಂಚಾಯಿತಿ ಅಧ್ಯಕ್ಷರ ಮೇಲೆ ಪಿಎಸ್‌ಐ ಹಲ್ಲೆ ಆರೋಪ
Last Updated 6 ಮೇ 2022, 15:52 IST
ಅಕ್ಷರ ಗಾತ್ರ

ಬೇಲೂರು: ‘ದೂರು ನೀಡಲು ಬಂದ ಹೆಬ್ಬಾಳು ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜುಅವರ ಮೇಲೆ ಪಿಎಸ್ಐ ಶಿವನಗೌಡ ಪಾಟೀಲ್ ನಿಂದಿಸಿ, ಹಲ್ಲೆ ನಡೆಸಿದ್ದಾರೆ’ ಎಂದು ಆರೋಪಿಸಿಆಗ್ರಹಿಸಿ ಶಾಸಕ ಕೆ.ಎಸ್.ಲಿಂಗೇಶ್ ನೇತೃತ್ವದಲ್ಲಿ ಶಿವಾಲದಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಇಲ್ಲಿಯ ಪೊಲೀಸ್ ಠಾಣೆ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

‘ತಾಲ್ಲೂಕಿನ ಶಿವಾಲದಹಳ್ಳಿ ಗ್ರಾಮದ ಯುವತಿ ನಾಪತ್ತೆ ಹಿನ್ನೆಲೆಯಲ್ಲಿ ನಾಗರಾಜು ಹಾಗೂ ಯುವತಿ ಪೋಷಕರು ಬಂದಿದ್ದರು. ಈ ವೇಳೆ ಪಿಎಸ್‌ಐ ದೂರಿನ ಪ್ರತಿ ಹರಿದು ಹಾಕಿ, ನಾಗರಾಜು ಮೇಲೆ ಹಲ್ಲೆ ನಡೆಸಿದ್ದಾರೆ. ಕೂಡಲೇ ಅವರನ್ನು ಅಮಾನತುಗೊಳಿಸಬೇಕು’ ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ಲಿಂಗೇಶ್ ಮಾತನಾಡಿ, ‘ಬೇಲೂರು ಪೊಲೀಸ್ ಠಾಣೆಯಲ್ಲಿ ಮರಳು ಇತರೆ ದಂಧೆ ಮಾಡುವವರಿಗೆ ಸಿಗುವ ಗೌರವ ಜನಪ್ರತಿನಿಧಿಗಳಿಗೆ ಹಾಗೂ ಸಾರ್ವಜನಿಕರಿಗೆ ಸಿಗುತ್ತಿಲ್ಲ‌. ಪೊಲೀಸ್ ವರಿಷ್ಠಾಧಿಕಾರಿಜತೆ ದೂರವಾಣಿಯಲ್ಲಿ ಮಾತನಾಡಿದ್ದು, ತಾವೇ ಖುದ್ದಾಗಿ ಬಂದು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ. ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ಮಾಡಲಾಗುವುದು’ ಎಂದು ಎಚ್ಚರಿಸಿದರು.

ವೃತ್ತ ನೀರಿಕ್ಷಕ ಶ್ರೀಕಾಂತ್ ಸಮ್ಮುಖದಲ್ಲಿ ಶಾಸಕ ಕೆ.ಎಸ್. ಲಿಂಗೇಶ್ ಅವರುಶಿವನಗೌಡರನ್ನು ತರಾಟೆಗೆ ತೆಗೆದುಕೊಂಢರು. ‘ಕ್ಷೇತ್ರದ ಮಾರ್ಯಾದೆ ಕಳೆಯುತ್ತಿದ್ದೀರಾ. ಜನಪ್ರತಿನಿಧಿ ಮೇಲೆ ಕೈ ಮಾಡಿರುವವರು ಸಾಮಾನ್ಯ ಜನರನ್ನು ಬೀಡುತ್ತಿರಾ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಆಕಸ್ಮಿಕವಾಗಿಘಟನೆ ನಡೆದಿದೆ. ಅದಕ್ಕಾಗಿ ಕ್ಷಮೆ ಕೇಳುತ್ತೇನೆ. ಮುಂದೆ ಈ ರೀತಿ ಮಾಡುವುದಿಲ್ಲ’ ಎಂದು ನಾಗರಾಜು ಅವರಿಗೆ ಪಿಎಸ್‌ಐ ಹಸ್ತಲಾಘವ ಮಾಡಿದರು.

ಕೆಪಿಸಿಸಿ ಉಪಾಧ್ಯಕ್ಷ ಬಿ.ಶಿವರಾಂ, ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಕೋರಟಿಗೆರೆ ಪ್ರಕಾಶ್, ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ಎಂ.ಆರ್. ವೆಂಕಟೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೈ.ಎನ್.ಕೃಷ್ಣೇಗೌಡ, ಎಪಿಎಂಸಿ ಅಧ್ಯಕ್ಷ ಸಿ.ಎಚ್.ಮಹೇಶ್, ವೀರಶೈವ, ಲಿಂಗಾಯತ ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಬಲ್ಲೇನಹಳ್ಳಿ ರವಿಕುಮಾರ್, ಹೆಬ್ಬಾಳು ಗ್ರಾ.ಪಂ. ಸದಸ್ಯ ಗಿರೀಶ್, ಬಂಟೇನಹಳ್ಳಿ ಗ್ರಾ.ಪಂ. ಅಧ್ಯಕ್ಷ ದಾಸಪ್ಪ, ಮುಖಂಡರಾದ ಎಂ.ಜಿ.ವೆಂಕಟೇಶ್, ದೇವೆಂದ್ರ, ಬಿ.ಎಂ.ರಂಗನಾಥ್, ಶಿವಾಲದಹಳ್ಳಿ ಗ್ರಾಮಸ್ಥರಾದ ರೇವಣ್ಣಸಿದ್ದಪ್ಪ, ಮಂಜೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT