ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗ ಸಾವು: ಆತಂಕದಲ್ಲಿ ಗ್ರಾಮಸ್ಥರು

Last Updated 25 ಏಪ್ರಿಲ್ 2020, 14:36 IST
ಅಕ್ಷರ ಗಾತ್ರ

ಬೇಲೂರು: ತಾಲ್ಲೂಕಿನ ಅರೇಹಳ್ಳಿ ಹೋಬಳಿ ಹಿರಿಗದ್ದೆ ಗ್ರಾಮದ ರಾಮಶೆಟ್ಟಿ ಅವರ ಕಾಫಿ ತೋಟದಲ್ಲಿ ಮಂಗದ ಶವವೊಂದು ಪತ್ತೆಯಾಗಿದ್ದು ಜನರಲ್ಲಿ ಆತಂಕ ಮೂಡಿಸಿದೆ.

ಎರಡು ದಿನಗಳ ಹಿಂದೆ ಮೃತಪಟ್ಟಿರುವ ಮಂಗ ಕೊಳೆತ ಸ್ಥಿತಿಯಲ್ಲಿದ್ದು ತೋಟದಲ್ಲಿನ ಕಾರ್ಮಿಕರು ಕೆಲಸಕ್ಕೆಂದು ತೆರಳಿದ ಸಂದರ್ಭದಲ್ಲಿ ಮಂಗನ ಮೃತದೇಹ ಪತ್ತೆಯಾಗಿದೆ. ಬಳಿಕ ಈ ವಿಚಾರವನ್ನು ಪಶುವೈದ್ಯಾಧಿಕಾರಿಗಳಿಗೆ ತಿಳಿಸಿದ್ದಾರೆ. ಪಶು ವೈದ್ಯಾಧಿಕಾರಿಗಳಾದ ಮಮತಾ, ಗಂಗಾಧರ್ ನಾಯಕ್‌ , ಆರೋಗ್ಯ ಇಲಾಖೆಯ ತಹಶೀನಾ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಮರಣೋತ್ತರ ಪರೀಕ್ಷೆಯ ಬಳಿಕ ಮಂಗವನ್ನು ಸುಟ್ಟು ಹಾಕಲಾಯಿತು. ಮಂಗ ಸತ್ತು ಬಿದ್ದ ಸುತ್ತಲಿನ ಪರಿಸರಕ್ಕೆ ನಾರ್ವೆ ಗ್ರಾಮ ಪಂಚಾಯಿತಿಯಿಂದ ಔಷಧಿ ಸಿಂಪರಣೆ ಮಾಡಲಾಯಿತು.

ಮಂಗನ ಸಾವು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದ್ದು ಮಂಗನ ಕಾಯಿಲೆ ಭೀತಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT