ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಳೆನರಸೀಪುರ: ಸಂಸದ ಪ್ರಜ್ವಲ್‌ ರೇವಣ್ಣರಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ

Last Updated 28 ಫೆಬ್ರುವರಿ 2022, 3:09 IST
ಅಕ್ಷರ ಗಾತ್ರ

ಹೊಳೆನರಸೀಪುರ: ಪಟ್ಟಣದ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯದ ಮುಂಭಾಗದಿಂದ ಭಾನುವಾರ ಬೆಳಿಗ್ಗೆ ಸಂಸದ ಪ್ರಜ್ವಲ್‌ ರೇವಣ್ಣ ಹಾಗೂ ನೂರಾರು ಭಕ್ತರು ಮಹಾಶಿವರಾತ್ರಿ ನಿಮಿತ್ತ ಧರ್ಮಸ್ಥಳಕ್ಕೆ ಪಾದಯಾತ್ರೆ ಆರಂಭಿಸಿದರು.

‘ಪಾದಯಾತ್ರೆಯಿಂದ ನಮ್ಮ ಆರೋಗ್ಯದ ಸಮತೋಲನ ಕಾಪಾಡಿಕೊಳ್ಳಬಹುದು. ಜೊತೆಗೆ ದೇವರ ಮೇಲಿನ ನಂಬಿಕೆ ಹೆಚ್ಚುತ್ತದೆ. ನಂಬಿಕೆಯಿಂದ ಮಾಡುವ ಕೆಲಸ ಸದಾ ಯಶಸ್ಸನ್ನು ತಂದು ಕೊಡುತ್ತದೆ. ನಾನು ನಂಬಿಕೆಯಿಂದ ಎಲ್ಲ ಜನರಿಗೆ ಉತ್ತಮ ಜೀವನ ಸಿಗಲಿಎನ್ನುವ ಉದ್ದೇಶದಿಂದ ಧರ್ಮಸ್ಥಳ ಪಾದಯಾತ್ರೆ ಹೊರಟಿದ್ದೇನೆ’ ಎಂದು ಸಂಸದ ಪ್ರಜ್ವಲ್‌ ರೇವಣ್ಣ ಹೇಳಿದರು.

‘ಕ್ಷೇತ್ರದ ಯುವಕರು ಪಾದಯಾತ್ರೆ ಮೂಲಕ ಮಂಜುನಾಥಸ್ವಾಮಿಯ ದರ್ಶನ ಪಡೆಯುವ ಇಂಗಿತ ವ್ಯಕ್ತಪಡಿಸಿದ್ದರು. ಪಾದಯಾತ್ರೆಗೆ ಜಿಲ್ಲೆಯ ವಿವಿಧ ತಾಲ್ಲೂಕುಗಳ 1,850ಕ್ಕೂ ಹೆಚ್ಚು ಭಕ್ತರು ನೋಂದಣಿ ಮಾಡಿಸಿ ನನ್ನೊಂದಿಗೆ ಪಾದಯಾತ್ರೆ ಮಾಡುತ್ತಿದ್ದಾರೆ’ ಎಂದರು.

‘ಪಾದಯಾತ್ರಿಗಳ ಕ್ಷೇಮದ ದೃಷ್ಟಿಯಿಂದ ಮಾರ್ಗದಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ದಿನಕ್ಕೆ 50 ಕಿ.ಮೀ. ನಡೆದು ವಿಶ್ರಾಂತಿ ಪಡೆದು ಪ್ರಯಾಣ ಮುಂದುವರೆಸುತ್ತೇವೆ’ ಎಂದರು.

ಪ್ರಜ್ವಲ್ ಯುವ ಬ್ರಿಗೇಡ್ ರಾಜ್ಯ ಅಧ್ಯಕ್ಷ ನರೇಂದ್ರಬಾಬು, ಭರತ್, ಮಂಜುನಾಥ್, ಪಟ್ಟಣದ ಎಸ್‍ಎಲ್‍ಎನ್‍ಸಿ ಸಂಘದ ರಾಜು, ಚಲುವರಾಜು, ಮುರಳಿ, ರಾಘವೇಂದ್ರ, ಅರುಣ್, ಚಂದ್ರು, ಸಂತೋಷ್, ಕಿರಣ್, ಪೃಥ್ವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT