ಕೊಣನೂರು (ಹಾಸನ ಜಿಲ್ಲೆ): ಸಮೀಪದ ಸಿದ್ಧಾಪುರ ಗೇಟ್ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ನಾಗರಾಜ ಕೋಟೆಕಾರ್ (47) ಅವರ ಮೃತದೇಹವು ಅವರು ವಾಸವಿದ್ದ ಇಲ್ಲಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಕೊಠಡಿಯಲ್ಲಿ ಸೋಮವಾರ ಕಂಡು ಬಂದಿದೆ. ಆದರೆ ಮೃತಪಟ್ಟ ಸಮಯ, ದಿನ ಗೊತ್ತಾಗಿಲ್ಲ. ದೇಹದಿಂದ ರಕ್ತಸ್ರಾವವಾಗಿದೆ.

ಕುಂದಾಪುರ ಸಮೀಪದ ಬಸೂರು ಗ್ರಾಮದವರಾದ ಅವರಿಗೆ ತಾಯಿ, ಇಬ್ಬರು ಅಣ್ಣಂದಿರು ಮತ್ತು ಅಕ್ಕ ಇದ್ದಾರೆ.

ಶನಿವಾರ ಶಾಲೆಯ ಅವಧಿ ಮುಗಿದ ನಂತರ ಅವರು ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಸೋಮವಾರ ಬೆಳಿಗ್ಗೆ ಶಾಲೆಗೂ ಬಂದಿರಲಿಲ್ಲ. ಸಿಬ್ಬಂದಿ ಅವರ ಮೊಬೈಲ್ ಫೋನ್ಗೆ ಕರೆ ಮಾಡಿದಾಗ ಸ್ಪಂದನೆಯೂ ದೊರಕಿರಲಿಲ್ಲ. ನಂತರ ಅವರ ಕೊಠಡಿಗೆ ತೆರಳಿದಾಗ ಪ್ರಕರಣ ಬೆಳಕಿಗೆ ಬಂತು.

ಈಶ್ವರೀಯ ವಿಶ್ವವಿದ್ಯಾಲಯದ ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಪಾಲ್ಗೊಳ್ಳುತ್ತಿದ್ದ ಅವರು ಸಮೀಪದ ಹಂಡ್ರಂಗಿ ಪ್ರೌಢಶಾಲೆಯಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಬಳಿಕ ಮುಖ್ಯ ಶಿಕ್ಷಕರಾಗಿ ಬಡ್ತಿ ಪಡೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.