ನಗರ್ತಿ (ಹೊಳೆನರಸೀಪುರ): ತಾಲ್ಲೂಕಿನ ಹಳ್ಳಿಮೈಸೂರು ಹೋಬಳಿಯ ನಗರ್ತಿ ಗ್ರಾಮದಲ್ಲಿ ಇತ್ತೀಚೆಗೆ ಶ್ರೀ ಭೈರವೇಶ್ವರ ಸ್ವಾಮಿಯ ರಂಗದ ಹಬ್ಬ, ಜಾತ್ರಾ ಮಹೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.

ಗ್ರಾಮೀಣ ಪ್ರದೇಶಗಳಲ್ಲಿ ಜನರ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸಲು ಹಿಂದಿನವರು ರಂಗ ಕುಣಿತ, ಊರ ಹಬ್ಬಗಳನ್ನು ನಡೆಸಿಕೊಂಡು ಬಂದಿರುವುದು ಇಂದಿಗೂ ಸೌಹಾರ್ದದಿಂದ ಮುಂದುವರಿದಿದೆ. ಇದರೊಂದಿಗೆ ಹುಲಿ ವೇಷ, ವಿಭಿನ್ನ ರೀತಿಯ ವೇಷ ಭೂಷಣಗಳೊಂದಿಗೆ ಜಾತ್ರಾ ಮಹೋತ್ಸವ ನಡೆಯಿತು. 5 ಗ್ರಾಮಗಳ ರಂಗ ಕುಣಿತ ಪರಿಣತರು ಬಂದು ರಂಗಕುಣಿತದಲ್ಲಿ ಪಾಲ್ಗೊಂಡಿದ್ದರು. ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲ್ಲೂಕಿನ ಹುಲಿಕೆರೆ ಗ್ರಾಮ, ಚಿಕ್ಕಮಂದಗೆರೆ, ಹೊಳೆನರಸಿಪುರ ತಾಲ್ಲೂಕಿನ ಹರೇಹಳ್ಳಿ, ಶ್ರವಣೂರು, ಕಡವಿನ ಬಾಚನಹಳ್ಳಿ, ಹಾವಿನ ಮಾರನಹಳ್ಳಿಯ ರಂಗ ಕಲಾವಿದರು ಪಾಲ್ಗೊಂಡಿದ್ದರು. ರಾತ್ರಿ ಮತ್ತು ಬೆಳಿಗ್ಗೆ ಅನ್ನ ಸಂತರ್ಪಣೆಯನ್ನು ನಗರ್ತಿ ಗ್ರಾಮದ ಬೆಂಗಳೂರು ಬಾಯ್ಸ್ ತಂಡದವರು ನಡೆಸಿಕೊಟ್ಟರು. ಸುತ್ತಲ ಗ್ರಾಮದ ಸಾವಿರಾರು ಜನ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-36-1175976483

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.