ಚನ್ನರಾಯಪಟ್ಟಣ: ‘ತಾಲ್ಲೂಕಿನಲ್ಲಿ ಪ್ರಸಕ್ತ ಸಾಲಿಗೆ ರೈತರು ಪೂರ್ವ ಹಂಗಾಮಿನ ಸಿದ್ಧತೆಯಲ್ಲಿದ್ದು, ಅಗತ್ಯ ಕೃಷಿ ಬಿತ್ತನೆ ಬೀಜ ದಾಸ್ತಾನು ಇದೆ’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ. ಮೋಹನ್ಕುಮಾರ್ ತಿಳಿಸಿದ್ದಾರೆ.

‘ಪೂರ್ವ ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನ ರೈತ ಬಾಂಧವರು ಪ್ರಮುಖವಾಗಿ ಬೆಳೆಯುವ ಬೆಳೆಗಳಾದ ಅಲಸಂದೆ 1,650 ಹೆಕ್ಟೇರ್ ಪ್ರದೇಶ, ಜೋಳ 75 ಹೆಕ್ಟೇರ್, ಹೆಸರುಕಾಳು 175 ಹೆಕ್ಟೇರ್, ಉದ್ದು 110 ಹೆಕ್ಟೇರ್, ತೊಗರಿ 175 ಹೆಕ್ಟೇರ್, ನೆಲಗಡಲೆ 25 ಹೆಕ್ಟೇರ್ ಮತ್ತು ಎಳ್ಳು 75 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕೈಗೊಳ್ಳುವ ಗುರಿ ಹೊಂದಲಾಗಿದೆ. ಒಟ್ಟು 2,285 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕೈಗೊಳ್ಳುವ ಗುರಿ ಹೊಂದಲಾಗಿದೆ’ ಎಂದರು.

‘ಅದೇ ರೀತಿ ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನಲ್ಲಿ ಮೇ 3 ರವರೆಗೆ ವಾಡಿಕೆ ಮಳೆ 71.7 ಮಿ.ಮೀ ಆಗಬೇಕಿತ್ತು. ಪ್ರಸ್ತುತ 130.8 ಮಿ.ಮೀ ಮಳೆಯಾಗಿದೆ. ಈ ಹಿನ್ನೆಲೆಯಲ್ಲಿ ತಾಲ್ಲೂಕಿನ ರೈತರು ಬಿತ್ತನೆಗಾಗಿ ಭೂಮಿ ಹದ ಮಾಡುವ ಕಾರ್ಯಕ್ಕೆ ಮುಂದಾಗಿದ್ದಾರೆ. ತಾಲ್ಲೂಕಿನಲ್ಲಿ ಖಾಸಗಿ ರಸಗೊಬ್ಬರ ಮಾರಾಟ ಮಳಿಗೆಗಳು ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ 2,262 ಟನ್ ವಿವಿಧ ರಸಗೊಬ್ಬರ ದಾಸ್ತಾನು ಹೊಂದಿವೆ. ತಾಲ್ಲೂಕಿನಲ್ಲಿರುವ ಎಲ್ಲಾ 135 ರಸಗೊಬ್ಬರ ಮಾರಾಟಗಾರರು ಹಾಗೂ 84 ಬಿತ್ತನೆ ಬೀಜ ಮಾರಾಟಗಾರರು ಸರ್ಕಾರ ನಿಗದಿಪಡಿಸಿರುವ ದರಕ್ಕೆ ಕೃಷಿ ಪರಿಕರಗಳನ್ನು ಮಾರಾಟ ಮಾಡಬೇಕು, ರೈತರಿಗೆ ಕಡ್ಡಾಯವಾಗಿ ರಸೀದಿಯನ್ನು ನೀಡಬೇಕು. ಒಂದು ವೇಳೆ ಉಲ್ಲಂಘನೆ ಮಾಡುವುದು ಕಂಡು ಬಂದಲ್ಲಿ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಸುದ್ದಿಗಾರರಿಗೆ ಎಂದರು. ಮುಸುಕಿನ ಜೋಳ, ಅಲಸಂದೆ, ಹೆಸರು, ತೊಗರಿ, ಉದ್ದು ಬಿತ್ತನೆ ಬೀಜ ದಾಸ್ತಾನು ಇದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.