ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಸನ | ಮಗುವಿಗೆ ನರ ತೊಂದರೆ: ಯಶಸ್ವಿ ಶಸ್ತ್ರಚಿಕಿತ್ಸೆ

Published 5 ಸೆಪ್ಟೆಂಬರ್ 2024, 0:19 IST
Last Updated 5 ಸೆಪ್ಟೆಂಬರ್ 2024, 0:19 IST
ಅಕ್ಷರ ಗಾತ್ರ

ಹಾಸನ: 6 ತಿಂಗಳ ಮಗುವಿನ ಬೆನ್ನಿನಲ್ಲಿ ಕಂಡು ಬರುವ ಸ್ಪ್ಲಿಟ್‌ ಕಾರ್ಡ್‌ ಮಾಲ್‌ಫಾರ್ಮೆಷನ್‌ ಎಂಬ ಕಾಯಿಲೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಗುಣಪಡಿಸಲಾಗಿದೆ ಎಂದು ಮಂಜುನಾಥ ಆಸ್ಪತ್ರೆಯ ನರರೋಗ ತಜ್ಞ ಡಾ. ಅಮೋಘಗೌಡ ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ‘ಜು. 30ರಂದು ಹೊರರೋಗಿ ವಿಭಾಗದಲ್ಲಿ ಮಗುವಿನ ಪರೀಕ್ಷೆ ಮಾಡಿದ್ದು, ಬೆನ್ನಿನಲ್ಲಿ ಕೂದಲು ಇರುವ ಬಗ್ಗೆ ತಿಳಿಯಿತು. ನಂತರ ಎಂಆರ್‌ಐ ಸ್ಕ್ಯಾನ್ ಮಾಡಿಸಿದಾಗ ಕಾಯಿಲೆ ಇರುವುದು ಪತ್ತೆಯಾಗಿತ್ತು’ ಎಂದರು.

ಮಕ್ಕಳ ತಜ್ಞ ಡಾ. ಪ್ರೀತಂ ಅವರ ಸಲಹೆ ಪಡೆದು ಮಗುವನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು. ಸತತ 8 ಗಂಟೆಗಳ ಶಸ್ತ್ರಚಿಕಿತ್ಸೆ ಮೂಲಕ ಮಗುವಿನ ಬೆನ್ನೆಲುಬಿನ ನರದೊಂದಿಗೆ ಹೆಚ್ಚುವರಿ ನರ ಹಾದು ಹೋಗಿರುವುದು ಕಂಡುಬಂತು. ಅದಕ್ಕೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಯಿತು ಎಂದರು.

ಅರವಳಿಕೆ ತಜ್ಞ ಡಾ. ಸುಹಾಸ್ ಬಿ.ಎಂ. ಸೇರಿದಂತೆ 8 ವೈದ್ಯರ ತಂಡ ನರ್ವ್ ಮಾನಿಟರಿಂಗ್ ಟೆಕ್ನಾಲಜಿ ಮತ್ತು ಮೈಕ್ರೋಸ್ಕೋಪಿ ಸಹಾಯದೊಂದಿಗೆ ಶಸ್ತ್ರಚಿಕಿತ್ಸೆ ನಡೆಸಿದೆ ಎಂದರು.

ಗರ್ಭಿಣಿಯರಲ್ಲಿ ಹೆಚ್ಚಾಗಿ ಕಬ್ಬಿಣ ಹಾಗೂ ಫೋಲಿಕ್ ಆ್ಯಸಿಡ್ ಕೊರತೆಯಿಂದ ಹುಟ್ಟುವ ಮಗುವಿನಲ್ಲಿ ಈ ರೀತಿಯ ತೊಂದರೆ ಕಂಡು ಬರುತ್ತದೆ. ಮಕ್ಕಳಲ್ಲಿ ಕಂಡುಬರುವ ಗೂನಬೆನ್ನು, ಬೆನ್ನಿನಲ್ಲಿ ಕಪ್ಪು ಚುಕ್ಕೆ, ಕೂದಲು ಇರುವುದು ರೋಗ ಲಕ್ಷಣಗಳು ಎಂದು ವಿವರಿಸಿದ ಅವರು, ನಿಗದಿತ ಸಮಯದಲ್ಲಿ ಚಿಕಿತ್ಸೆ ಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಕಾಲಿನ ಸ್ವಾಧೀನ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ ಎಂದರು.

ಮಗುವಿನ ಪೋಷಕರು ಹಾಗೂ ವೈದ್ಯರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT