ಮಂಗಳವಾರ, ಆಗಸ್ಟ್ 20, 2019
27 °C

ನಗರದಲ್ಲಿ ಅಬ್ಬರಿಸಿದ ವರುಣ

Published:
Updated:
Prajavani

ಹಾಸನ: ಹಲವು ದಿನಗಳ ವಿಶ್ರಾಂತಿ ಬಳಿಕ ನಗರದಲ್ಲಿ ಬುಧವಾರ ಮಧ್ಯಾಹ್ನ ವರುಣ ಅಬ್ಬರಿಸಿದ.

ಮಧ್ಯಾಹ್ನ 12ರ ಸುಮಾರಿಗೆ ಆರಂಭಗೊಂಡ ಜಿಟಿಜಿಟಿ ಮಳೆ ಕ್ರಮೇಣ ಜೋರಾಗಿ ಬೀಳಲು ಆರಂಭಿಸಿತು. ಸುಮಾರು ಒಂದು ತಾಸಿಗೂ ಹೆಚ್ಚು ಸುರಿದ ಕಾರಣ ರಸ್ತೆಯಲ್ಲಿ ನೀರು ನಿಂತು ಸಾರ್ವಜನಿಕರು ಹಾಗೂ ವಾಹನ ಸವಾರರು ಪರದಾಡಿದರು. ಜನಜೀವನವೂ ಅಸ್ತವ್ಯಸ್ತಗೊಂಡಿತು.

ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ಇತ್ತು.  ಬಿ.ಎಂ. ರಸ್ತೆ, ರೈಲ್ವೆ ನಿಲ್ದಾಣ ರಸ್ತೆ ಹಾಗೂ ಇತರ ಬಡಾವಣೆಗಳಲ್ಲಿ ರಸ್ತೆಯಲ್ಲಿ ನೀರು ನಿಂತ ಪರಿಣಾಮ ಸಾಕಷ್ಟು ತೊಂದರೆ ಆಯಿತು. ಮಾರುಕಟ್ಟೆಯಲ್ಲೂ ನೀರು ನಿಂತು ಕೆಸರು ಗದ್ದೆಯಂತೆ ಆಗಿತ್ತು. ಸಂಜೆ ಮತ್ತೆ ಜಿಟಿಜಿಟಿ ಮಳೆಯಾಯಿತು.

ದಿಢೀರ್‌ ಮಳೆಯಿಂದಾಗಿ ಹಲವರು ತೊಯ್ದುಕೊಂಡು ಮನೆಗೆ ಹೋಗಬೇಕಾಯಿತು. ಮರ ಹಾಗೂ ಕಟ್ಟಡಗಳ ಕೆಳಗೆ ಆಶ್ರಯ ಪಡೆದರೇ, ಇನ್ನು ಕೆಲವರು ಕೊಡೆ ಹಿಡಿದು ಸಾಗಿದರು.

 

Post Comments (+)