ಶ್ರವಣಬೆಳಗೊಳ: ಶ್ರವಣಬೆಳಗೊಳದ ಚಂದ್ರಗಿರಿಯ ಚಿಕ್ಕಬೆಟ್ಟ, ವಿಂಧ್ಯಗಿರಿಯ ಬಾಹುಬಲಿ ಬೆಟ್ಟವು ಹೇಗೆ ಲೋಕಪ್ರಸಿದ್ಧಿಯಾಗಿದೆಯೋ ಹಾಗೆಯೇ ಕ್ಷೇತ್ರದಲ್ಲಿ 5 ದಶಕಗಳ ಕಾಲ ಧಾರ್ಮಿಕ ಶೈಕ್ಷಣಿಕ ಸಾಮಾಜಿಕ ಹಾಗು ಸಾಂಸ್ಕೃತಿಕವಾಗಿ ಅನನ್ಯ ಸೇವೆ ಸಲ್ಲಿಸಿ ಕ್ಷೇತ್ರಕ್ಕೆ ವಿಶ್ವ ಮನ್ನಣೆ ಗಳಿಸಿಕೊಟ್ಟಿರುವ ಚಾರುಕೀರ್ತಿ ಶ್ರೀಗಳ ನಿಷಿಧಿ ಮಂಟಪವನ್ನು 3ನೇ ಬೆಟ್ಟವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಜೈನಮಠಧ ಪೀಠಾಧಿಪತಿ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಶನಿವಾರ ಹೇಳಿದರು.

ಪಟ್ಟಣದ ಜೈನಮಠದ ರಸ್ತೆಯಲ್ಲಿರುವ ಕಾನಜಿ ಸ್ವಾಮಿ ಯಾತ್ರಿಕಾಶ್ರಮದಲ್ಲಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮಿಜಿಯವರ ನಿಷಿಧಿ ಮಂಟಪ ಲೋಕಾರ್ಪಣೆಯ ಕುರಿತು ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, 2,300 ವರ್ಷಗಳ ಪ್ರಾಚೀನ ಇತಿಹಾಸವನ್ನು ಹೊಂದಿರುವ ಶ್ರವಣಬೆಳಗೊಳ ಕ್ಷೇತ್ರದಲ್ಲಿ ಅಮೂಲ್ಯ 573 ಶಿಲಾ ಶಾಸನಗಳು ದಾಖಲಾಗಿದ್ದು, ರಾಷ್ಟ್ರದಲ್ಲಿಯೇ ಅತಿ ಹೆಚ್ಚು ಶಿಲಾ ಶಾಸನಗಳನ್ನು ಹೊಂದಿದ ಕ್ಷೇತ್ರ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಶ್ರೀಗಳ ಸ್ಮರಣೆಗಾಗಿ ಸಾರ್ವಜನಿಕರಿಗೆ ಅವರಿಗೆ ಪ್ರಿಯವಾದ ಮಾವಿನ ಹಣ್ಣಿನ 10 ಸಾವಿರ ಗಿಡಗಳನ್ನು ಮತ್ತು ತಾಂತ್ರಿಕ ಶಿಕ್ಷಣ ಪಡೆಯುತ್ತಿರುವ 54 ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸುವುದರೊಂದಿಗೆ. ಸುತ್ತಮುತ್ತಲಿನ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು, ಹೈಮಾಸ್ಟ್ ದೀಪಗಳನ್ನು ಸಹ ಕೊಡುಗೆಯಾಗಿ ನೀಡಲಾಗುತ್ತದೆ ಎಂದು ಹೇಳಿದರು.

ಚಾರುಕೀರ್ತಿ ಶ್ರೀಗಳ ನಿಷಿಧಿ ಮಂಟಪದ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಜೈನ ಮಠಗಳ ಎಲ್ಲಾ ಮಠಾಧೀಶರರು ಆದಿ ಚುಂಚನಗಿರಿ, ಪೇಜಾವರ, ಸಿದ್ಧಗಂಗಾ ಶ್ರೀಗಳು, ಧರ್ಮಸ್ಥಳದ ಧರ್ಮಾಧಿಕಾರಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ರಾಜಕೀಯ ಮುಖಂಡರುಗಳು ಸಾಕ್ಷಿಯಾಗಲಿದ್ದಾರೆ. 10 ಸಾವಿರಕ್ಕೂ ಅಧಿಕ ಸಂಖ್ಯೆಯ ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.