ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಕುಸಿತಕ್ಕೆ ಕಾಫಿ ತೋಟ, ಹೋಂ ಸ್ಟೇ ಕಾರಣವಲ್ಲ –ಸಿ.ಎಸ್‌. ಮಹೇಶ್‌ 

Last Updated 31 ಆಗಸ್ಟ್ 2018, 17:40 IST
ಅಕ್ಷರ ಗಾತ್ರ

ಸಕಲೇಶಪುರ: ‘ಮಲೆನಾಡಿನಲ್ಲಿ ಭೂ ಕುಸಿತಕ್ಕೆ ಕಾಫಿ ತೋಟಗಳು, ಕೆರೆಗಳು ಹಾಗೂ ಹೋಂ ಸ್ಟೇಗಳು ಕಾರಣವಲ್ಲ’ ಎಂದು ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಅಧ್ಯಕ್ಷ ಸಿ.ಎಸ್‌. ಮಹೇಶ್‌ ಹೇಳಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ, ಕೆಲ ಭೂವಿಜ್ಞಾನಿಗಳು, ಪರಿಸರವಾದಿಗಳು ಸಮಸ್ಯೆಗೆ ಕಾರಣ ಅಧ್ಯಯನ ಮಾಡದೆ ಅವೈಜ್ಞಾನಿಕವಾಗಿ ಹೇಳಿಕೆ ನೀಡುತ್ತಿದ್ದಾರೆ. ಇದು ನಿಲ್ಲಬೇಕು’ ಎಂದರು.

ಕಾಫಿ ತೋಟಕ್ಕಾಗಿ ಮರ ಬೆಳೆಸುತ್ತೇವೆ. ಕೆರೆಗಳ ನಿರ್ಮಾಣದಿಂದ ಅಂತರ್ಜಲ ವೃದ್ಧಿಸಲಿದೆ. ಹೋಂ ಸ್ಟೇ ಹಾಗೂ ರೆಸಾರ್ಟ್‌ಗಾಗಿ ಕಾಡು ನಾಶವಾಗಿಲ್ಲ. ವಾಸ ಮನೆಗಳನ್ನೇ ನವೀಕರಿಸಿಮಾಡಿದ್ದಾರೆ. ಹೀಗಾಗ, ಭೂಕುಸಿತಕ್ಕೆ ಇವೇ ಕಾರಣ ಎಂಬ ಹೇಳಿಕೆ ಹಾಸ್ಯಾಸ್ಪದ ಎಂದು ಪ್ರತಿಪಾದಿಸಿದರು.

ರಕ್ಷಿತಾರಣ್ಯದಲ್ಲಿ ಡ್ಯಾಂ ನಿರ್ಮಾಣ ಮಾಡಿ, ಬಂಡೆಗಳನ್ನು ಸ್ಪೋಟಿಸಿದ, ಎತ್ತಿನಹೊಳೆ ಸೇರಿ ವಿವಿಧ ಯೋಜನೆಗಳಿಂದ ಆಗುತ್ತಿರುವ ಹಾನಿಯ ಬಗ್ಗೆ ಅಧ್ಯಯನ ನಡೆಸಲಿಎಂದು ಒತ್ತಾಯಿಸಿದರು.

ಪ್ರಸಕ್ತ ಮುಂಗಾರಿನಲ್ಲಿ ವಾಡಿಕೆಗಿಂತಲೂ ಅಧಿಕ ಮಳೆಯಾಗಿದೆ. ಅತಿಯಾದ ಮಳೆ, ದೊಡ್ಡ ಯೋಜನೆಗಳು ಭೂಕುಸಿತಕ್ಕೆ ಕಾರಣ. ವೈಜ್ಞಾನಿಕ ತಳಹದಿಯಲ್ಲಿ ಹೇಳಿಕೆ ನೀಡುವುದು ಒಳಿತು ಎಂದು ಆಗ್ರಹಪಡಿಸಿದರು.

ಕಾಫಿ ತೋಟಗಳಿಂದ ಲಕ್ಷಾಂತರ ಮಂದಿಗೆ ಉದ್ಯೋಗ ದೊರೆತಿದೆ. ಕಾಫಿ ಬೆಳೆಗಾರರ ಮೇಲೆ ವಿನಾಕಾರಣ ಆರೋಪದ ಸಲ್ಲದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT