ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲೆಯೇ ಇಲ್ಲ: ಕುರಿಗಳಿಗೆ ಆಹಾರವಾದ ಎಲೆಕೋಸು

Last Updated 11 ಫೆಬ್ರುವರಿ 2021, 1:32 IST
ಅಕ್ಷರ ಗಾತ್ರ

ಚನ್ನರಾಯಪಟ್ಟಣ: ಹುಲುಸಾಗಿ ಬೆಳೆದ ಎಲೆಕೋಸಿಗೆ ಉತ್ತಮ ಬೆಲೆ ಸಿಗದ ಕಾರಣ ರೈತರೊಬ್ಬರು ಕುರಿಗಳನ್ನು ಹೊಲದಲ್ಲಿಯೇ ಮೇಯಿಸಲು ಬಿಟ್ಟಿದ್ದಾರೆ.

ತಾಲ್ಲೂಕಿನ ದಂಡಿಗನಹಳ್ಳಿ ಹೋಬಳಿ ಗೆಜ್ಜಗಾರನಹಳ್ಳಿಯ ರೈತ ನಾಗರಾಜು ಅವರೇ ಕುರಿಗಳನ್ನು ಮೇಯಿಸಲು ಬಿಟ್ಟವರು.

‘ಒಂದೂವರೆ ಎಕರೆ ಜಮೀನಿನಲ್ಲಿ ₹ 50 ಸಾವಿರ ವೆಚ್ಚ ಮಾಡಿ 30 ಟನ್ ಎಲೆ ಕೋಸು ಬೆಳೆದಿದ್ದಾರೆ. ಆದರೆ, ಮಾರುಕಟ್ಟೆಯಲ್ಲಿ ಒಂದು ಕೆ.ಜಿ.ಗೆ ₹ 3- 4 ಕ್ಕೆ ಕೇಳುತ್ತಿದ್ದಾರೆ. ಇಷ್ಟು ದರಕ್ಕೆ ಮಾರಾಟ ಮಾಡಿದರೆ ನಷ್ಠ ಅನುಭವಿಸಬೇಕಾಗುತ್ತದೆ. ಜಮೀನಿಗೆಬಂದ ಕೆಲ ವ್ಯಾಪಾರಿಗಳು ಕೇವಲ 10 ಸಾವಿರಕ್ಕೆ ಕೇಳಿದರು. ಇಷ್ಟು ದರಕ್ಕೆ ಮಾರಿದರೆ ಖರ್ಚು ಮಾಡಿದ ಆದಾಯ ಬರುವುದಿಲ್ಲ. ಹೀಗಾಗಿ ಬೆಳೆಯನ್ನು ಕೀಳುವ ಬದಲು ಕುರಿಗೆ ಆಹಾರವಾಗಿದೆ’ ಎಂದು ನಾಗರಾಜು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT