ನುಗ್ಗೇಹಳ್ಳಿ: ಇಲ್ಲಿನ ಗ್ರಾಮ ದೇವತೆ ನುಗ್ಗೇಹಳ್ಳಿ ಅಮ್ಮನವರ (ಶ್ರೀ ಕೆಂಪಮ್ಮ ದೇವಿ, ಶ್ರೀ ಕೊಲ್ಲಾಪುರದಮ್ಮ ದೇವಿ) ಬ್ರಹ್ಮರಥೋತ್ಸವ ಭಾನುವಾರ ರಾತ್ರಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಪ್ರತಿ ವರ್ಷದಂತೆ ಈ ವರ್ಷವೂ ದೇವಿಯ ಜಾತ್ರಾ ರಥೋತ್ಸವದ ಅಂಗವಾಗಿ ಭಾನುವಾರ ಬೆಳಿಗ್ಗೆಯಿಂದಲೇ ದೇವಾಲಯದಲ್ಲಿ ಅಭಿಷೇಕ, ಪೂಜೆ, ಹೂವಿನ ಅಲಂಕಾರ ಸೇರಿ ವಿವಿಧ ಪೂಜೆಗಳು ನೆರವೇರಿದವು. ಸಂಪ್ರದಾಯದಂತೆ ರಥದ ಸುತ್ತ ದೇವರ ಪ್ರದಕ್ಷಿಣೆಯ ನಂತರ ರಥದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ರಥಕ್ಕೆ ಪೂಜಾ ವಿಧಿ ವಿಧಾನಗಳು ನೆರವೇರಿದ ನಂತರ ಅಮ್ಮನವರಿಗೆ ಮಹಾಮಂಗಳಾರತಿಯೊಂದಿಗೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ರಥೋತ್ಸವದ ಅಂಗವಾಗಿ ಬಾರಿ ಮದ್ದುಗುಂಡಿನ ಪ್ರದರ್ಶನ, ಅನ್ನಸಂಪರ್ಪಣೆ ಮತ್ತು ಆರ್ಕೆಸ್ಟ್ರಾ ಕಾರ್ಯಕ್ರಮವನ್ನು ನುಗ್ಗೇಹಳ್ಳಿ ಯುವಕ ಸಂಘದ ವತಿಯಿಂದ ಏರ್ಪಡಿಸಲಾಗಿತ್ತು.

ಶಾಸಕ ಸಿ.ಎನ್. ಬಾಲಕೃಷ್ಣ, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ. ಗೋಪಾಲಸ್ವಾಮಿ, ಬಿಜೆಪಿ ಮುಖಂಡ ಸಿ.ಆರ್. ಚಿದಾನಂದ್ ಸೇರಿ ಹಲವು ಗಣ್ಯರು ರಥೋತ್ಸವದಲ್ಲಿ ಪಾಲ್ಗೊಂಡು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ರಥೋತ್ಸವದಲ್ಲಿ ಬೆಂಗಳೂರು ಸೇರಿ ರಾಜ್ಯದ ನಾನಾ ಭಾಗಗಳಿಂದ ಹಾಗೂ ದೇವರ ಒಕ್ಕಲಿನ ಊರುಗಳಾದ ನುಗ್ಗೇಹಳ್ಳಿ, ಬಸವನಪುರ, ಮುದ್ದನಹಳ್ಳಿ, ಅಕ್ಕನಹಳ್ಳಿ ಕ್ರಾಸ್, ಹೂವಿನಹಳ್ಳಿ, ಜಿ.ಎನ್. ಕೊಪ್ಪಲು, ವಿರೂಪಾಕ್ಷಪುರ, ಸಮುದ್ರವಳ್ಳಿ ಸೇರಿ ಅನೇಕ ಗ್ರಾಮಗಳಿಂದ ಸಾವಿರಾರು ಭಕ್ತರು ಪಾಲ್ಗೊಂಡು ಭಕ್ತಿ ಸಮರ್ಪಿಸಿದರು.

ವಿದ್ಯುತ್ ದೀಪಾಲಂಕಾರ:

ಜಾತ್ರಾ ಹಾಗೂ ರಥೋತ್ಸವದ ಪ್ರಯುಕ್ತ ಗ್ರಾಮದ ಮುಖ್ಯ ರಸ್ತೆಗಳು ಸೇರಿ ಹಿರೀಸಾವೆ ಮುಖ್ಯರಸ್ತೆಯಲ್ಲಿರುವ ನುಗ್ಗೇಹಳ್ಳಿ ಅಮ್ಮನವರ ದೇವಾಲಯ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿತ್ತು. ಸಮುದ್ರಹಳ್ಳಿ ಗ್ರಾಮದ ಮಹಿಳಾ ಕೋಲಾಟ ತಂಡದಿಂದ ವಿಶೇಷ ಕೋಲಾಟ ಮತ್ತು ಸೋಮನ ಕುಣಿತ ಭಕ್ತರ ಗಮನ ಸೆಳೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.