ನುಗ್ಗೇಹಳ್ಳಿ: ಗ್ರಾಮದ ಆದಿಶಕ್ತಿ ಅರೇಕಲ್ಲಮ್ಮ ದೇವರ 15ನೇ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವ ಅಂಗವಾಗಿ ಏಪ್ರಿಲ್ 23, 24ರಂದು ವಿಶೇಷ ಪೂಜೆ ಹೋಮ ಹವನಗಳು ನಡೆಯಲಿವೆ ಎಂದು ದೇವಾಲಯದ ಧರ್ಮದರ್ಶಿ ಪ್ರವೀಣ್ ಗುರೂಜಿ ತಿಳಿಸಿದರು.

ಪ್ರತಿ ವರ್ಷದಂತೆ ಈ ವರ್ಷವೂ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವ ಅಂಗವಾಗಿ ಏ.23ರ ಗುರುವಾರ ಬೆಳಿಗ್ಗೆ ಮಹಾ ಚಂಡಿಕಾ ಹೋಮ ಮಧ್ಯಾಹ್ನ 12 ಗಂಟೆವರೆಗೆ ನೆರವೇರಲಿದೆ. ರಥೋತ್ಸವ ಅಂಗವಾಗಿ ಬೆಳಿಗ್ಗೆಯಿಂದಲೇ ಅಮ್ಮನವರಿಗೆ ವಿಶೇಷ ಪೂಜೆ ಅಲಂಕಾರ ನೆರವೇರಿದ ನಂತರ ಗುರು ಪೂಜೆ ಗೋಪೂಜೆ ಧ್ವಜಾರೋಹಣ, ಮಧ್ಯಾಹ್ನ ಗ್ರಾಮದ ರಾಜಬೀದಿಗಳಲ್ಲಿ ಮಹಿಳೆಯರಿಂದ ಮಡೆ ಆರತಿಯೊಂದಿಗೆ ಅಮ್ಮನವರ ಮಹಾ ಶಕ್ತಿ ಕಳಸಗಳ ಹೊಂಬಾಳೆ ಕರಗಗಳ ಉತ್ಸವ ನಡೆಯಲಿದೆ. ರಾತ್ರಿ 8 ಗಂಟೆಗೆ ಅಗ್ನಿ ಕೊಂಡೋತ್ಸವ, ಅಮ್ಮನವರ ಮಹಾ ರಥೋತ್ಸವ, ದೂತರಾಯ ಸ್ವಾಮಿ ದೇವರಿಗೆ ಮಣೆವು ನೆರವೇರಲಿದೆ.

ಏ.24ರಂದು ದೇವಾಲಯದ ಮಹಾ ಮಂಗಳಾರತಿಯೊಂದಿಗೆ ಬಲಿ ಪೂಜೆ ನಡೆಯಲಿದೆ. ಗುರುವಾರ ನಡೆಯುವ ಜಾತ್ರಾ ಮಹೋತ್ಸವದ ಅಂಗವಾಗಿ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260422-36-955302332

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.