ಶನಿವಾರ, ಜುಲೈ 31, 2021
23 °C
144 ಮಂದಿಗೆ ಕೊರೊನಾ ಪಾಸಿಟಿವ್, ಮತ್ತೆ ಇಬ್ಬರ ಸಾವು

ಹಾಸನ | ಸಾವಿರ ದಾಟಿದ ಗುಣಮುಖರ ಸಂಖ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಕೊರೊನಾ ಸೋಂಕಿತರಲ್ಲಿ ಶನಿವಾರ 101 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.
ಇದರೊಂದಿಗೆ ಗುಣಮುಖರಾದವರ ಸಂಖ್ಯೆ 1022 ತಲುಪಿದೆ.

ಹೊಸದಾಗಿ ಜಿಲ್ಲೆಯಲ್ಲಿ 144 ಜನಕ್ಕೆ ಕೋವಿಡ್‌ ದೃಢಪಟ್ಟಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಸೋಂಕಿತರ ಸಂಖ್ಯೆ 2275ಕ್ಕೆ ಏರಿಕೆಯಾಗಿದೆ. 1190 ಸಕ್ರಿಯ ಪ್ರಕರಣಗಳಿವೆ. 20 ರೋಗಿಗಳು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜ್ವರ, ಕೆಮ್ಮು ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಹಾಸನ ತಾಲ್ಲೂಕಿನ 55 ವರ್ಷದ ಮಹಿಳೆ ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 65 ವರ್ಷದ ಮಹಿಳೆ ಹಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಬ್ಬರಿಗೂ ಕೋವಿಡ್‌ ದೃಢಪಟ್ಟಿತ್ತು. ಚಿಕಿತ್ಸೆಗೆ ಸ್ಪಂದಿಸಲಿಲ್ಲ. ಸರ್ಕಾರದ ನಿಯಮಾನುಸಾರ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಈವರೆಗೆ ಕೋವಿಡ್‌ ಗೆ ಅಸುನೀಗಿದವರ ಸಂಖ್ಯೆ 63ಕ್ಕೆ ಏರಿಕೆಯಾಗಿದೆ.

ರಾಜಸ್ಥಾನದಿಂದ ಮರಳಿದ ಅರಸೀಕೆರೆ ವ್ಯಕ್ತಿ, ಮೈಸೂರು ಹಾಗೂ ಬೆಂಗಳೂರು ಪ್ರಯಾಣ ಬೆಳೆಸಿದ್ದ ನಾಲ್ವರು, ಹಾಸನ ಆರೋಗ್ಯ ಕೇಂದ್ರದ ಸಹಾಯಕಿಗೆ ಸೋಂಕು ತಗುಲಿದೆ. ಉಳಿದ ಪ್ರಕರಣಗಳು ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹಾಗೂ ಜ್ವರ, ಕೆಮ್ಮು ಶೀತ ಲಕ್ಷಣ ಇರುವವರಿಗೆ ಪಾಸಿಟಿವ್‌ ಬಂದಿದೆ. 18 ಪ್ರಕರಣಗಳಲ್ಲಿ ಸೋಂಕಿನ ಮೂಲ ಪತ್ತೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್‌ ತಿಳಿಸಿದರು.

ಹೊಸದಾಗಿ ಆಲೂರು ತಾಲ್ಲೂಕಿನಲ್ಲಿ 2, ಅರಕಲಗೂಡು 3, ಅರಸೀಕೆರೆ 9, ಬೇಲೂರು 15, ಚನ್ನರಾಯಪಟ್ಟಣ 8, ಹಾಸನ 94, ಹೊಳೆನರಸೀಪುರ 11 ಹಾಗೂ ಸಕಲೇಶಪುರ ತಾಲ್ಲೂಕಿನ ಒಬ್ಬರಿಗೆ ಸೋಂಕು ದೃಢವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು