ಗುರುವಾರ , ನವೆಂಬರ್ 14, 2019
18 °C

ಅ.17ರಿಂದ ಹಾಸನಾಂಬೆ ದರ್ಶನ‌

Published:
Updated:

ಹಾಸನ: ವರ್ಷಕ್ಕೊಮ್ಮೆ ದರ್ಶನ ಕರುಣಿಸುವ ಹಾಸನಾಂಬ ದೇವಿ ದೇವಾಲಯದ ಬಾಗಿಲನ್ನು ಅ.17ರಿಂದ ತೆರೆಯಲಾಗುತ್ತದೆ.

ಅಶ್ವಯುಜ ಮಾಸದ ಹುಣ್ಣಿಮೆ ಬಳಿಕ ಬರುವ ಮೊದಲ ಗುರುವಾರ ಬಾಗಿಲು ತೆರೆದು, ಬಲಿಪಾಡ್ಯಮಿ ಹಬ್ಬದ ಮಾರನೇ ದಿನ ಬಾಗಿಲು ಮುಚ್ಚಲಾಗುತ್ತದೆ. ಈ ವರ್ಷ ಅಂದು ಮಧ್ಯಾಹ್ನ 12.30ಕ್ಕೆ ಬಾಗಿಲು ತೆರೆದು ಅ. 29ರಂದು ಮುಚ್ಚಲಾಗುತ್ತದೆ. ಬಾಗಿಲು ತೆರೆಯುವ ಮತ್ತು ಮುಚ್ಚುವ ದಿನ ಸಾರ್ವಜನಿಕರಿಗೆ ದರ್ಶನವಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

18ರಿಂದ ಪ್ರತಿ ದಿನ ಮಧ್ಯಾಹ್ನ 1 ರಿಂದ 3ರವರೆಗೆ (ನೈವೇದ್ಯ, ಪೂಜಾ ಸಮಯ) ದೇವಿ ದರ್ಶನ ಇರುವುದಿಲ್ಲ. ಉಳಿದ ಅವಧಿಯಲ್ಲಿ ರಾತ್ರಿ 11ಗಂಟೆವರೆಗೆ ದರ್ಶನವಿರುತ್ತದೆ. ಧರ್ಮದರ್ಶನ ಮತ್ತು ನೇರ ದರ್ಶನ ಕ್ರಮವಾಗಿ ಟಿಕೆಟ್‌ ದರ ₹ 300, ₹ 1,000 ನಿಗದಿ ಪಡಿಸಲಾಗಿದೆ. ಹೊರ ಜಿಲ್ಲೆ ಮತ್ತು ರಾಜ್ಯಗಳಿಂದ ಬರುವ ಭಕ್ತರಿಗೆ ಸೌಲಭ್ಯ ಒದಗಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.

 

ಪ್ರತಿಕ್ರಿಯಿಸಿ (+)