ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಸಂಸ್ಥೆಗೆ ಆಮ್ಲಜನಕದ ಜವಾಬ್ದಾರಿ

Last Updated 3 ಮೇ 2021, 8:35 IST
ಅಕ್ಷರ ಗಾತ್ರ

ಹಾಸನ: ಪ್ರಸ್ತುತ ಬೇಡಿಕೆಗೆ ಅನುಗುಣವಾಗಿ ಜಿಲ್ಲೆಯಲ್ಲಿ ಆಮ್ಲಜನಕ ಸಿಲಿಂಡರ್‌ಲಭ್ಯವಾಗುತ್ತಿದ್ದೆಯಾದರೂ ಕೋವಿಡ್‌ 19 ಪ್ರಕರಣಗಳು ಹೆಚ್ಚುತ್ತಿರುವುದರಿಂದಮುಂದಿನ ದಿನಗಳಲ್ಲಿ ಅಭಾವ ಎದುರಾಗುವ ಸಾಧ್ಯತೆಯಿದೆ.

ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಹಿಮ್ಸ್‌) ಆಸ್ಪತ್ರೆಯ ಮುಖ್ಯ ಕಟ್ಟಡವನ್ನು ಕೋವಿಡ್‌ ಆಸ್ಪತ್ರೆಯಾಗಿ ಪರಿವರ್ತಿಸಿ, 400 ಹಾಸಿಗೆಗಳನ್ನು ರೋಗಿಗಳಿಗೆಮೀಸಲಿಡಲಾಗಿದೆ. ಹಿಮ್ಸ್‌ನಲ್ಲಿ 13 ಸಾವಿರ ಕಿಲೋ ಲೀಟರ್‌ ಸಾಮರ್ಥ್ಯದಆಮ್ಲಜನಕ ಘಟಕ ಇರುವುದರಿಂದ ಆಮ್ಲಜನಕ ಖಾಸಗಿಯವರಿಂದ ಪಡೆಯುವಅವಶ್ಯಕತೆ ಇಲ್ಲ.

ಏಳು ತಾಲ್ಲೂಕು ಕೇಂದ್ರಗಳ ಆಸ್ಪತ್ರೆಗಳಲ್ಲಿ 235 ಹಾಸಿಗೆ ಹಾಗೂ ಆರುಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 220 ಹಾಸಿಗೆ ವ್ಯವಸ್ಥೆ ಮಾಡಲಾಗಿದೆ.ಆಕ್ಸಿಜನ್‌ ಕೊರತೆ ನೀಗಿಸಲು ನಗರದ ಕೈಗಾರಿಕಾ ಪ್ರದೇಶದಲ್ಲಿರುವ ಅನಘ ಎಂಟರ್‌ಪ್ರೈಸಸ್‌ (ಮಲ್ನಾಡ್‌ ಗ್ಯಾಸ್‌) ಗೆ ನಿತ್ಯ 500 ಸಿಲಿಂಡರ್‌ ಪೂರೈಸುವಜವಾಬ್ದಾರಿ ನೀಡಲಾಗಿದೆ.

ತಾಲ್ಲೂಕು ಆಸ್ಪತ್ರೆ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಿಗೆ ಅನಘಎಂಟರ್‌ಪ್ರೈಸಸ್‌ನಿಂದ ವೈದ್ಯಕೀಯ ಆಮ್ಲಜನಕ (ಜಂಬೊ) ಸಿಲಿಂಡರ್ದೊರೆಯುತ್ತಿದ್ದು, ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ.

ಜಿಲ್ಲೆಯಲ್ಲಿ ಕೊರೊನಾ ಸೋಂಕು ತೀವ್ರವಾಗಿ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಆಮ್ಲಜನಕ ಬಳಕೆ ಹೆಚ್ಚುತ್ತಿದೆ. ಯಾವುದೇ ಕಾರಣಕ್ಕೂ ಕೈಗಾರಿಕಾ ಉದ್ದೇಶಕ್ಕೆ ಆಮ್ಲಜನಕ ಸಿಲಿಂಡರ್‌ಗಳನ್ನು ಪೂರೈಸದಂತೆ ಆಮ್ಲಜನಕ ಉತ್ಪಾದಕರು, ಪೂರೈಕೆದಾರರಿಗೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್‌ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.

ಹಾಸನದಲ್ಲಿ ಉತ್ಪಾದನೆಯಾಗುವ ಆಮ್ಲಜನಕವನ್ನು ಜಿಲ್ಲೆಯ ಬಳಕೆಗೆ ಮೊದಲುಪೂರೈಸಿದ ನಂತರವಷ್ಟೇ ಇತರ ಜಿಲ್ಲೆಗಳಿಗೆ ಕೇವಲ ವೈದ್ಯಕೀಯ ಬಳಕೆಗೆ ಒದಗಿಸಬೇಕು. ಕೋವಿಡ್ ಕೇರ್ ಕೇಂದ್ರ ಹಾಗೂ ತಾಲ್ಲೂಕು ಆಸ್ಪತ್ರೆಗಳ ಬಳಕೆಗೆ150 ಸಿಲಿಂಡರ್‌ಗಳು ಅಗತ್ಯವಿದೆ. ಕೈಗಾರಿಕಾ ಉದ್ದೇಶಕ್ಕೆ ನೀಡಲಾಗಿರುವಸಿಲಿಂಡರ್‌ಗಳನ್ನು ವಶಕ್ಕೆ ತೆಗೆದುಕೊಂಡು, ಅವುಗಳನ್ನು ವೈದ್ಯಕೀಯ ಉದ್ದೇಶಕ್ಕೆಬಳಸುವಂತೆ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT