ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ಗಮನ ಸೆಳೆದ ಚಿತ್ರಕಲಾ ಪ್ರದರ್ಶನ

Last Updated 2 ಅಕ್ಟೋಬರ್ 2021, 16:33 IST
ಅಕ್ಷರ ಗಾತ್ರ

ಹಾಸನ: ನಗರದ ಎವಿಕೆ ಕಾಲೇಜು ಆವರಣದಲ್ಲಿ ಗೆಳೆಯರ ಬಳಗದ ವತಿಯಿಂದ ಚಿತ್ರಕಲೆ ಹಾಗೂ ಛಾಯಾಚಿತ್ರ ಪ್ರದರ್ಶನ ಆಯೋಜಿಸಲಾಗಿತ್ತು.

ವಿವಿಧ ಜಿಲ್ಲೆಗಳ 30 ಚಿತ್ರ ಕಲಾವಿದರು ಹಾಗೂ 8 ಜನ ಹವ್ಯಾಸಿ ಛಾಯಾಗ್ರಾಹಕರು ಭಾಗವಹಿಸಿದ್ದರು.
ಶಾಲೆ ಕಾಲೇಜು ವಿದ್ಯಾರ್ಥಿಗಳು, ಕಲಾ ಆಸಕ್ತರು ಹಾಗೂ ಸಾರ್ವಜನಿಕರು ಛಾಯಾಚಿತ್ರ ವೀಕ್ಷಿಸಿ
ಮೆಚ್ಚುಗೆ ವ್ಯಕ್ತಪಡಿಸಿದರು.

ಧನಂಜಯ್‌ ಜೀವಾಳ, ಪ್ರಕಾಶ್‌ ಅವರ ಛಾಯ ಚಿತ್ರಗಳು ನೋಡುಗರ ಮೆಚ್ಚುಗೆ ಗಳಿಸಿದವು.ಕಲಾವಿದ ಶಿವಶಂಕರ್‌ ಅವರು ರಚಿಸಿದ ಬುದ್ಧನ ಮೂರ್ತಿ, ಪ್ರಕೃತಿ, ಹೂವು, ಹೆಣ್ಣಿನ ಕಲಾಕೃತಿ ಗಮನಸೆಳೆದವು.

ಗೆಳೆಯರ ಬಳಗದ ಸಂಚಾಲಕ ಧನಂಜಯ ಜೀವಾಳ ಮಾತನಾಡಿ, ಹಳೇ ನ್ಯಾಯಾಲಯದ ಕಟ್ಟಡವನ್ನು ನಗರದ ಸಾಂಸ್ಕೃತಿಕ ಚಟುವಟಿಕೆಗೆ ಹಾಗೂ ಕಲಾ ಗ್ಯಾಲರಿಯನ್ನಾಗಿಪರಿವರ್ತಿಸಬಹುದು. ಜಾನಪದ, ಪುರಾತತ್ವ, ಕೌತುಕ, ಶೈಕ್ಷಣಿಕ, ಕರಕುಶಲ, ಜೀವವೈವಿಧ್ಯ ಮ್ಯೂಸಿಯಂ,ಶಾಶ್ವತ ಪುಸ್ತಕ ಮೇಳ,ಕಲಾ ಪ್ರದರ್ಶನ, ಗ್ರಂಥಾಲಯ,ಸಾವಯವ ಕೃಷಿ, ರಂಗಚಟುವಟಿಕೆ, ಸಾಹಿತ್ಯ, ಲಲಿತಕಲೆ, ಯೋಗ, ಒಳಾಂಗಣ ಕ್ರೀಡೆ, ಸಂಸ್ಕೃತಿಗೆ ಸಂಬಂಧಿಸಿದ ಚಟುವಟಿಕೆಗಳು ನಿರಂತರವಾಗಿ ನಡೆದುಕೊಂಡು ಹೋಗುವಂತೆ ಬಳಸಿಕೊಳ್ಳಲು ಸಾಧ್ಯವಿದೆ ಎಂದರು.

ಚಿತ್ರಕಲಾ ಪ್ರದರ್ಶನ ಭಾನುವಾರವೂ ನಡೆಯಲಿದೆ. ಇದಕ್ಕೂ ಮುನ್ನ ಕಾರ್ಯಕ್ರಮವನ್ನು ಕಲಾವಿದ ಶಿವಪ್ರಸಾದ್ ಉದ್ಘಾಟಿಸಿದರು.ಕಾಲೇಜಿನ ಪ್ರಾಂಶುಪಾಲ ಸುರೇಶ್ ಕುಮಾರ್, ಉಪಾನ್ಯಾಸಕ ಯತೀಶ್ವರ್, ಲೇಖಕಿ ಸುವರ್ಣ ಶಿವಪ್ರಸಾದ್, ನವೀನ್ ಕುಮಾರ್, ಮಹೇಶ್ ಚಂದ್ರ, ಚಿದಾನಂದ್,ಚಿನ್ನೇನಹಳ್ಳಿ ಸ್ವಾಮಿ, ಸೂರ್ಯ, ಪ್ರಕಾಶ್, ರವೀಂದ್ರ, ನಿಸರ್ಗ ಪ್ರವೀಣ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT