ಪಕ್ಷೇತರರ ಬೆಂಬಲದೊಂದಿಗೆ ಮತ್ತೆ ಅಧಿಕಾರ: ರೇವಣ್ಣ

7

ಪಕ್ಷೇತರರ ಬೆಂಬಲದೊಂದಿಗೆ ಮತ್ತೆ ಅಧಿಕಾರ: ರೇವಣ್ಣ

Published:
Updated:
Deccan Herald

ಹಾಸನ: ಜಿಲ್ಲೆಯ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶಕ್ಕೆ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ಸಂತಸ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ‘ಜಿಲ್ಲೆಯ 5 ಕಡೆಗಳಲ್ಲೂ ಮತ್ತೆ ಜನರು ಜೆಡಿಎಸ್ ಪಕ್ಷವನ್ನು ಬೆಂಬಲಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಲಾಗುವುದು. ಹಾಸನ ನಗರಸಭೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಆದರೆ ಮೂವರು ಪಕ್ಷೇತರರ ಪೈಕಿ ಇಬ್ಬರು ನಮ್ಮ ಪಕ್ಷದವರೇ, ಈಗಾಗಲೇ ಅವರೊಂದಿಗೆ ಮಾತನಾಡಿದ್ದೇನೆ. ಅವರ ಬೆಂಬಲದಿಂದ ಜೆಡಿಎಸ್ ಬಲ 19ಕ್ಕೆ ಏರಲಿದ್ದು, ಮತ್ತೊಮ್ಮೆ ನಾವೇ ಅಧಿಕಾರ ಹಿಡಿಯುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಕೆಲವರು ಜೆಡಿಎಸ್ ಅಭಿವೃದ್ಧಿ ಕೇವಲ ಕಾಗದದಲ್ಲಿ ಇದೆ ಎನ್ನುತ್ತಾರೆ. ಆದರೆ ಅಂಥವರಿಗೆ ಜನರು ತಕ್ಕ ಪಾಠ ಕಲಿಸಿದ್ದಾರೆ’ ಎಂದು ಪರೋಕ್ಷವಾಗಿ ಬಿಜೆಪಿ ಶಾಸಕ ಪ್ರೀತಂ ಗೌಡರಿಗೆ ರೇವಣ್ಣ ಟಾಂಗ್ ನೀಡಿದರು.
‘ಇನ್ನು ಮುಂದೆ ರಾಜಕೀಯ ಬಿಟ್ಟು ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಹೊಳೆನರಸೀಪುರದಲ್ಲಿ ಎಲ್ಲಾ 23 ಸ್ಥಾನ ಪಕ್ಷಕ್ಕೆ ನೀಡಿರುವುದು ಅಭೂತಪೂರ್ವ ಗೆಲುವು. ರಾಜ್ಯದಲ್ಲೂ ಕಳೆದ ಬಾರಿಗಿಂತ ಜೆಡಿಎಸ್ ಹೆಚ್ಚು ಸ್ಥಾನಗಳಿಸಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !