ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಸೇರಿಸಲು ಪೋಷಕರ ಆಸಕ್ತಿ

32 ಇಂಗ್ಲಿಷ್ ಮಾಧ್ಯಮ ಸರ್ಕಾರಿ ಶಾಲೆಗಳು ಶುರು
Last Updated 2 ಜೂನ್ 2019, 10:02 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯಲ್ಲಿ ಪ್ರಸಕ್ತ ವರ್ಷದಿಂದ 10 ಕರ್ನಾಟಕ ಪಬ್ಲಿಕ್‌ ಶಾಲೆ (ಕೆಪಿಎಸ್‌) ಸೇರಿದಂತೆ ಒಟ್ಟು 32 ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಶಿಕ್ಷಣ ಆರಂಭಗೊಂಡಿದೆ.

ಕರ್ನಾಟಕ ಪಬ್ಲಿಕ್‌ ಶಾಲೆಯಲ್ಲಿ ಇಂಗ್ಲಿಷ್‌ ಕಲಿಕೆಯ ಎಲ್‌ಕೆಜಿ ತರಗತಿಗಳು ಆರಂಭವಾಗಿದ್ದು, ಇತರೆ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮದ ಒಂದನೇ ತರಗತಿಗೆ ದಾಖಲಾತಿ ಶುರುವಾಗಿದೆ.

ಆಂಗ್ಲ ಮಾಧ್ಯಮ ಶಾಲೆಗಳಿಗೆ ಮಕ್ಕಳನ್ನು ದಾಖಲು ಮಾಡಲು ಪೋಷಕರು ಆಸಕ್ತಿ ತೋರಿದ್ದಾರೆ. ಆದರೆ ಸರ್ಕಾರ ಪ್ರತಿ ಶಾಲೆಯಲ್ಲಿಯೂ 30 ಮಕ್ಕಳ ದಾಖಲಾತಿಯ ಮಿತಿ ನಿಗದಿಪಡಿಸಿದೆ.

ಮೊದಲ ಎರಡು ದಿನದಲ್ಲಿ 280 ಮಕ್ಕಳು ದಾಖಲಾಗಿದ್ದಾರೆ. ಆಲೂರು–48, ಅರಸೀಕೆರೆ–35, ಅರಕಲಗೂಡು– 24, ಬೇಲೂರು– 33, ಹೊಳೆನರಸೀಪುರ–34, ಸಕಲೇಶಪುರ– 29, ಚನ್ನರಾಯಪಟ್ಟಣ– 27, ಹಾಸನ– 50 .

‘ಇನ್ನೂ ಹೆಚ್ಚು ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ತೆರೆಯಬೇಕೆಂಬ ಬೇಡಿಕೆಗಳೂ ಬರುತ್ತಿವೆ. ಆದರೆ ಸರ್ಕಾರ ಈ ಬಾರಿ ಒಂದೊಂದು ಶಾಲೆಗೂ ದಾಖಲಾತಿಯನ್ನು ಮಿತಿಗೊಳಿಸಿದೆ. ಮುಂದಿನ ವರ್ಷ ಒಂದು ಮತ್ತು ಎರಡನೇ ತರಗತಿ ಇಂಗ್ಲಿಷ್‌ ಮಾಧ್ಯಮ ನಡೆಯುತ್ತದೆ. ಹಾಗೆಯೇ ಪ್ರತಿ ವರ್ಷ ಹತ್ತನೇ ತರಗತಿವರೆಗೂ ಮುಂದುವರೆಯುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಂಜುನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇಂಗ್ಲಿಷ್ ಮಾಧ್ಯಮದ ತರಗತಿಗಳಿಗೆ ಬೋಧಿಸಲು 44 ಶಿಕ್ಷಕರಿಗೆ ಡಯಟ್‌ ವತಿಯಿಂದ ತರಬೇತಿ ನೀಡಲಾಗಿದೆ. ಮುಂದಿನ ವರ್ಷಕ್ಕೆ ಇಂಗ್ಲಿಷ್ ಬೋಧನೆಗೆ ತರಬೇತಿ ಪಡೆದ ಹೆಚ್ಚು ಶಿಕ್ಷಕರು ಬರಲಿದ್ದಾರೆ. ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿಯೂ 4 ರಿಂದ 5 ಆಂಗ್ಲ ಶಾಲೆಗಳು ಆರಂಭವಾಗಿವೆ’ ಎಂದು ವಿವರಿಸಿದರು.

ಅರಕಲಗೂಡು ವಿಧಾನಸಭಾ ಕ್ಷೇತ್ರ: ಬಸವಾಪಟ್ಟಣ (ಕೆಪಿಎಸ್‌), ದೊಡ್ಡಮಗ್ಗೆ, ಅರಕಲಗೂಡು ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು, ಹಳ್ಳಿ ಮೈಸೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.

ಅರಸೀಕೆರೆ ವಿಧಾನಸಭಾ ಕ್ಷೇತ್ರ: ಬಾಣಾವರ, ಕುರುವಂಕ (ಕೆಪಿಎಸ್‌), ಚಿಂದೇನಹಳ್ಳಿ ಗಡಿ (ಕೆಪಿಎಸ್), ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಸೀಕೆರೆ.

ಬೇಲೂರು ವಿಧಾನಸಭಾ ಕ್ಷೇತ್ರ: ಹಳೇಬೀಡು (ಕೆಪಿಎಸ್‌) ಹಲ್ಮಿಡಿ, ಅರೇಹಳ್ಳಿ, ಹಗರೆ, ಬೇಲೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.

ಹಾಸನ ವಿಧಾನಸಭಾ ಕ್ಷೇತ್ರ: ಹಾಸನದ ವಾಣಿ ವಿಲಾಸ ಹಿರಿಯ ಪ್ರಾಥಮಿಕ ಶಾಲೆ, ಹಿರಿಯ ಪ್ರಾಥಮಿಕ ಶಾಲೆ ಪ್ರಧಾನ, ಪೆನಷನ್‌ ಮೊಹಲ್ಲಾ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.

ಹೊಳೆನರಸೀಪುರ ವಿಧಾನಸಭಾ ಕ್ಷೇತ್ರ: ಮೊಸಳೆ ಹೊಸಹಳ್ಳಿ (ಕೆಪಿಎಸ್‌), ಹರಿಹರಪುರ (ಕೆಪಿಎಸ್‌), ಕೋಟೆ ಹೊಳೆನರಸೀಪುರ, ಆನೆಕೆರೆ.

ಸಕಲೇಶಪುರ ವಿಧಾನಸಭಾ ಕ್ಷೇತ್ರ: ಸರ್ಕಾರಿ ನೂತನ ಹಿರಿಯ ಪ್ರಾಥಮಿಕ ಶಾಲೆ ಆಲೂರು, ರಾಯರಕೊಪ್ಪಲು (ಕೆಪಿಎಸ್‌), ಹೆತ್ತೂರು (ಕೆಪಿಎಸ್‌), ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಕಲೇಶಪುರ, ಹಾನುಬಾಳು (ಕೆಪಿಎಸ್‌).

ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರ: ನುಗ್ಗೇಹಳ್ಳಿ, ಚನ್ನರಾಯಪಟ್ಟಣ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮೇಗಲಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT