ಹಾಸನ:ಕಳೆನಾಶಕ ಸಿಂಪಡಣೆ ವೇಳೆ ಮುಂಜಾಗ್ರತಾ ಕ್ರಮ ವಹಿಸದ ಕಾರಣ ಕಾರ್ಲೆ ಗ್ರಾಮದ ಯುವಕ ಕೀರ್ತಿ (23) ಮಂಗಳವಾರ ಮೃತಪಟ್ಟರು.
ಸತತವಾಗಿ ಒಂದು ವಾರ ತಮ್ಮ ಜಮೀನಿನ ಶುಂಠಿ ಬೆಳೆಗೆ ಕಳೆ ನಾಶಕ ಸಿಂಪಡಣೆ ಮಾಡಿದ್ದ ಅವರು ವಾಂತಿ, ಸುಸ್ತಿನಿಂದ ಬಳಲಿ ಅಸ್ಪತ್ರೆಗೆ ದಾಖಲಾಗಿದ್ದರು. ಬಹುಅಂಗಾಂಗ ವೈಫಲ್ಯದಿಂದ ಕೀರ್ತಿ ಸಾವನ್ನಪ್ಪಿದ್ದು, ರಕ್ತ ಪರೀಕ್ಷೆ ನಡೆಸಿದಾಗ ದೇಹದಲ್ಲಿ ಕಳೆನಾಶಕ ವಿಷ ಇರುವುದು ದೃಢಪಟ್ಟಿದೆ. ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.