ಪೌರಕಾರ್ಮಿಕರಿಗೂ ವಾರದ ರಜೆ ಕಡ್ಡಾಯಗೊಳಿಸಿ: ದಲಿತ ಸಂಘರ್ಷ ಸಮಿತಿ

7
40 ವರ್ಷ ಸೇವೆ ಸಲ್ಲಿಸಿದ ನಾಗಮ್ಮಗೆ ಸನ್ಮಾನ

ಪೌರಕಾರ್ಮಿಕರಿಗೂ ವಾರದ ರಜೆ ಕಡ್ಡಾಯಗೊಳಿಸಿ: ದಲಿತ ಸಂಘರ್ಷ ಸಮಿತಿ

Published:
Updated:
Deccan Herald

ಹಾಸನ: ‘ಪೌರಕಾರ್ಮಿಕರಿಗೆ ಸರ್ಕಾರ ಕಡ್ಡಾಯವಾಗಿ ವಾರದಲ್ಲಿ ಒಂದು ದಿನ ರಜೆ ನೀಡುವ ಪದ್ಧತಿ ಜಾರಿಗೊಳಿಸಬೇಕು’ ಎಂದು ದಲಿತ ಸಂಘರ್ಷ ಸಮಿತಿ (ಬೀಮವಾದ) ಸಂಚಾಲಕ ನಾಗರಾಜ್ ಹೆತ್ತೂರು ಆಗ್ರಹಿಸಿದರು.

ಇಲ್ಲಿನ ನಿರ್ಮಲ ನಗರದಲ್ಲಿ ಪೌರ ಕಾರ್ಮಿಕರ ಹಿತರಕ್ಷಣಾ ಸಮಿತಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಯೋನಿವೃತ್ತಿ ಹೊಂದಿದ ನಗರಸಭೆ ಪೌರಕಾರ್ಮಿಕರಾದ ನಾಗಮ್ಮ ಅವರನ್ನು ಅಭಿನಂದಿಸಿ ಮಾತನಾಡಿದರು.

ಪೌರ ಕಾರ್ಮಿಕರು ಕೆಲಸದ ಜತೆಗೆ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು. ಹಾಸನದಲ್ಲಿ ಪೌರ ಕಾರ್ಮಿಕರಿಗೆ ಇರುವ ಆರೋಗ್ಯ ಸೌಲಭ್ಯ ಕೇವಲ ಒಂದು ದಿನಕ್ಕೆ ಸೀಮಿತವಾಗುತ್ತಿದೆ. ನಗರದ ಗಲೀಜು ತೆಗೆದು, ಶುಚಿಗೊಳಿಸುವ ಪೌರ ಕಾರ್ಮಿಕರು ನಿವೃತ್ತಿಗೂ ಮುನ್ನವೇ ನಿಧನರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಕಾರ್ಮಿಕರಿಗೆ ಆರೋಗ್ಯ ಭಾಗ್ಯ ವ್ಯವಸ್ಥೆ ವರ್ಷ ಪೂರ್ತಿ ದೊರೆಯಬೇಕು ಎಂದು ಮನವಿ ಮಾಡಿದರು.

ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಸ್ಟೀಫನ್ ಪ್ರಕಾಶ್ ಮಾತನಾಡಿ, ನಾಗಮ್ಮ ಇಡೀ ಸಮಾಜದ ಕೊಳೆ ತೊಳೆದು ಸಮಾಜಕ್ಕೆ ಮಾದರಿಯಾಗಿದ್ದಾರೆ. ಸಮಾಜದಲ್ಲಿ ಪೌರ ಕಾರ್ಮಿಕರನ್ನು ಇನ್ನೂ ಕೇವಲವಾಗಿ ನೋಡುವ ಪದ್ಧತಿ ಇದೆ. ಅವರೂ ನಮ್ಮಂತೆ ಮನುಷ್ಯರು ಎಂಬಂತೆ ಗೌರವಿಸಬೇಕು. ಪೌರ ಕಾರ್ಮಿಕರು ಒಗ್ಗಟ್ಟಿನಿಂದ ಕೆಲಸ ಮಾಡುವುದರಿಂದ ಅವರಿಗೆ ಸಿಗಬೇಕಾದ ಸೌಲಭ್ಯ ಪಡೆದುಕೊಳ್ಳಬಹುದು ಎಂದರು.

ಹಿತರಕ್ಷಣಾ ಸಮಿತಿ ಅಧ್ಯಕ್ಷ ಲೋಕೇಶ್ ಮಾತನಾಡಿ, ಕಾರ್ಮಿಕರ ಹಕ್ಕುಗಳ ರಕ್ಷಣೆ ಹಿನ್ನೆಲೆಯಲ್ಲಿ ಸಮಿತಿ ಹುಟ್ಟು ಹಾಕಲಾಗಿದ್ದು, ಹಿರಿಯರನ್ನು ಗೌರವಿಸುವ ಜತೆಗೆ ಸರ್ಕಾರದ ಸೌಲಭ್ಯ ತಲುಪಿಸುವ ಕೆಲಸ ಮಾಡಲಿದೆ ಎಂದು ಹೇಳಿದರು.
ಸಮಿತಿ ಉಪಾಧ್ಯಕ್ಷ ನಲ್ಲಪ್ಪ, ಮಾರ, ಮುನಿಯಪ್ಪ, ಎ. ರಾಮ, ಬಾಬು, ಶಿವಪ್ಪ , ವಿಮಲ್ ಕುಮಾರ್, ಶೀಗೋಡು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !