ಹಾಸನ: ಜಿಲ್ಲೆಯ ಹೊಳೆನರಸೀಪುರದಲ್ಲಿ ಮಾ.1 ರಂದು ಪ್ರಜಾಧ್ವನಿ ಯಾತ್ರೆಯ ಕಾರ್ಯಕ್ರಮಕ್ಕೆ ಅನುಮತಿ ನೀಡುವ ವಿಷಯದಲ್ಲಿ ಪುರಸಭಾ ಅಧಿಕಾರಿಗಳ ಮೂಲಕ ರೇವಣ್ಣ ಕುಟುಂಬದಿಂದ ಗೊಂದಲ ಮೂಡಿಸಲಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಶ್ರೇಯಸ್ ಪಟೇಲ್ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರಜಾಧ್ವನಿ ಯಾತ್ರೆ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರಕ್ಕೆ ಮಾ.1 ರಂದು ಬರುತ್ತಿದ್ದಾರೆ ಎಂದರು.

ಅಂದಿನ ಕಾರ್ಯಕ್ರಮಕ್ಕೆ ಹೊಳೆನರಸೀಪುರದ ಬಯಲು ರಂಗಮಂದಿರದಲ್ಲಿ ಆಯೋಜನೆ ಮಾಡಲು ಪುರಸಭೆಯಿಂದ ಅನುಮತಿ ಪಡೆಯಲಾಗಿತ್ತು. ನಂತರ ನಡೆದ ಬೆಳವಣಿಗೆಯಲ್ಲಿ ಅದೇ ಸ್ಥಳದಲ್ಲಿ ಪ್ರಜ್ವಲ್ ರೇವಣ್ಣ ಬೆಂಬಲಿಗರು ಕ್ರಿಕೆಟ್ ಪಂದ್ಯಾವಳಿ ನಡೆಸಲು ಅನುಮತಿ ಪಡೆದಿದ್ದಾರೆ ಎಂದು ಹೇಳುವ ಮೂಲಕ ಸ್ಥಳೀಯ ಆಡಳಿತ ಗೊಂದಲ ಮೂಡಿಸುತ್ತಿದೆ ಎಂದು ದೂರಿದರು.

ಜಿಲ್ಲಾಡಳಿತ ಈ ಸಂಬಂಧ ಅಧಿಕಾರಿಗಳಿಗೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಯಾವುದೇ ಕಾರಣಕ್ಕೂ ಪ್ರಜಾಧ್ವನಿ ಯಾತ್ರೆಯ ಕಾರ್ಯಕ್ರಮವನ್ನು ಬಯಲು ರಂಗಮಂದಿರದಲ್ಲಿಯೇ ಮಾಡಲಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿರುವ ಪುಟ್ಟರಾಜು ವಿರುದ್ಧ ಸಂಚು ರೂಪಿಸಲಾಗುತ್ತಿದ್ದು, ಸಾಮಿಲ್ ಮೇಲೆ ದಾಳಿ ಮಾಡಿ ತೊಂದರೆ ನೀಡಲು ಮುಂದಾಗಿದ್ದಾರೆ. ಮುಂದಿನ ದಿನಗಳಲ್ಲಿ ಪುಟ್ಟರಾಜು ಅವರಿಗೆ ತೊಂದರೆಯಾದರೆ ರೇವಣ್ಣ ಕುಟುಂಬವೇ ಹೊಣೆ ಎಂದು ತಿಳಿಸಿದರು.

ಪುಟ್ಟರಾಜು ಮಾತನಾಡಿ, ದೇವರಂತಹ ದೇವೇಗೌಡರ ಜೊತೆ ಕೆಲಸ ಮಾಡುವಾಗ ನೆಮ್ಮದಿ ಇತ್ತು. ಆದರೆ ರೇವಣ್ಣ ಹಾಗೂ ಅವರ ಮಕ್ಕಳು ಬೇಕಾಬಿಟ್ಟಿ ಆಡಳಿತ ನಡೆಸುತ್ತಿದ್ದಾರೆ. ಆಡುವ ಹುಡುಗರಿಗೆ ಅಧಿಕಾರ ಕೊಟ್ಟರೆ ಹೀಗೆ ಎಂದು ಟೀಕಿಸಿದರು.

13 ವರ್ಷದಿಂದ ಆ ಕುಟುಂಬದಿಂದ ಸಾಕಷ್ಟು ನೋವು ಅನುಭವಿಸಿದ್ದು, ಬಡವರ ಬಗ್ಗೆ ಕರುಣೆ ಇಲ್ಲದ ರೇವಣ್ಣ ಕುಟುಂಬದ ಸಹವಾಸವೇ ಬೇಡ ಎಂದು ಹೊರಬಂದಿದ್ದು ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಸೋಲಿಸುವುದೇ ನಮ್ಮ ಮುಖ್ಯ ಉದ್ದೇಶ ಎಂದು ಹೇಳಿದರು.

ಸುನಿಲ್, ವಿಶ್ವನಾಥ್, ಮುಜಾಹಿದ್, ಬಸವರಾಜ್, ಗೋವಿಂದರಾಜ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.