ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲಾಖೆಯಿಂದ ತೋಟಗಾರಿಕೆಗೆ ಹಲವು ಯೋಜನೆ: ಯೋಗೇಶ್

Last Updated 15 ಜೂನ್ 2022, 3:01 IST
ಅಕ್ಷರ ಗಾತ್ರ

* ನಾಗೇಂದ್ರಪ್ರಸಾದ್‌, ಅಡಗೂರು
2–3 ವರ್ಷದಿಂದ ತೋಟಗಾರಿಕೆ ಇಲಾಖೆಯಿಂದ ಸಬ್ಸಿಡಿಯಲ್ಲಿ ಔಷಧಿಗಳು ಸಿಗುತ್ತಿಲ್ಲ.

– ಕೋವಿಡ್–19 ನಿಂದಾಗಿ ಎರಡು ವರ್ಷ ಈ ಯೋಜನೆ ನಿಂತು ಹೋಗಿತ್ತು. ಈಗ ಯೋಜನೆ ಮತ್ತೆ ಶುರುವಾಗಿದೆ. ಕಳೆದ ವರ್ಷ ₹15 ಲಕ್ಷದ ಔಷಧಿ ನೀಡಲಾಗಿತ್ತು. ಈ ಬಾರಿ ಇನ್ನೂ ಹೆಚ್ಚಿನ ಮೊತ್ತ ಕೊಡಲಾಗುತ್ತಿದೆ.

* ಯೋಗೇಶ್‌, ಸಂತೆಮೊರಳು – ಕಿರಣ್‌ ಕೊಣನೂರು
ಆಲೂಗಡ್ಡೆ ಬಿತ್ತನೆ ಮಾಡಿದ್ದು, ಅರ್ಧ ಹಾಳಾಗಿದೆ. ಏಕೆ?

– ಮಳೆ ಹೆಚ್ಚಾಗಿದ್ದರಿಂದ ನೀರು ನಿಂತು ಕೆಲವೆಡೆ ಆಲೂಗಡ್ಡೆ ಹಾಳಾಗಿದೆ. ಪಂಜಾಬ್‌ನಿಂದ ಬಂದ ಬೀಜಗಳು ನೇರವಾಗಿ ಮಾರಾಟ ಆಗಿವೆ. ರೈತರು ಅದನ್ನು ಒಣಗಿಸಿ ಬಿತ್ತನೆ ಮಾಡಬೇಕಿತ್ತು. ಒಣಗದೇ ಬಿತ್ತನೆ ಮಾಡಿದ್ದರಿಂದಲೂ ಕೆಲವೆಡೆ ಆಲೂಗಡ್ಡೆ ಹಾಳಾಗಿದೆ.

* ನಾಗಭೂಷಣ, ಹಾಸನ
ತೆಂಗಿನ ಗಿಡಗಳಿಗೆ ಕಾಡು ಹಂದಿಗಳ ಕಾಟ ಹೆಚ್ಚಾಗಿದೆ.

– ಸೌರ ವಿದ್ಯುತ್ ಬೇಲಿ ಹಾಕಬೇಕು. ಇದಕ್ಕೆ ಸಬ್ಸಿಡಿ ಇದ್ದು, ಇನ್ನೂ ಯೋಜನೆಯ ಬಂದಿಲ್ಲ. ಬಂದ ತಕ್ಷಣ ಕೆಲಸ ಆರಂಭಿಸಬಹುದು.

* ನಾಗೇಶ್‌, ಗಂಡಸಿ
ತೆಂಗಿನ ತೋಟದಲ್ಲಿ ಗರಿಗಳು ಹಾಳಾಗುತ್ತಿವೆ. ಏನು ಮಾಡಬೇಕು?

– ಅಣಬೆ ರೋಗ ಬರುತ್ತಿದ್ದು, ಮರದ ಬೇರಿಗೆ ತೊಂದರೆ ನೀಡಬೇಡಿ. ಆ ಮರದಿಂದ ಇನ್ನೊಂದು ಮರಕ್ಕೆ ನೀರು ಹೋಗದಂತೆ ನೋಡಿಕೊಳ್ಳಿ. ಹಸಿರೆಲೆ ಗೊಬ್ಬರ ಹಾಕಿ. ಬೇರಿನ ಸುತ್ತ 8 ಅಡಿ ಉಳುಮೆ ಮಾಡಬೇಡಿ. ಬೇವಿನ ಹಿಂಡಿ, ಬೇವಿನ ಎಲೆ ಹಾಕಿ. ಎರಡು ವರ್ಷ ಈ ರೀತಿ ಮಾಡಿ. ಹತೋಟಿಗೆ ಬರುತ್ತದೆ.

* ರಾಮಣ್ಣ, ದೊಡ್ಡಮೇಟಿಕುರ್ಕೆ
ನೇರಳೆ ಗಿಡ ಹಾಕುವ ವಿಚಾರವಿದೆ. ಯಾವ ತಳಿ ಉತ್ತಮ

– ಧೂಪ್‌ದಾಳ್ ತಳಿ ಸಿಗುತ್ತದೆ. ಉತ್ತಮ ಇಳುವರಿ ಬರಲಿದೆ. ಅರಸೀಕೆರೆ ತಾಲ್ಲೂಕು ಕಚೇರಿ ಸಂಪರ್ಕಿಸಿದಲ್ಲಿ ಅಗತ್ಯ ಮಾಹಿತಿ ಸಿಗಲಿದೆ.

* ಯೋಗೇಶ್‌, ಸೀಬೇಹಳ್ಳಿ
ತೆಂಗಿಗೆ ಸುಳಿಕೊಳೆ ರೋಗ ಬಂದಿದೆ. ಏನು ಮಾಡಬೇಕು?

– ಮಳೆ ಹೆಚ್ಚಾಗಿ ಇದ್ದಾಗ, ಸುಳಿಯಲ್ಲಿ ಕೊಳೆ ಇದ್ದರೆ, ಈ ರೀತಿಯ ರೋಗ ಬರುತ್ತದೆ. ಫೋರೇಟ್ ಪುಡಿಯನ್ನು ಮರಳಿನೊಂದಿಗೆ ಮಿಶ್ರಣ ಮಾಡಿ, ಸುಳಿಗೆ ಹಾಕಿ.

* ತುಳಸೀರಾಜು, ನುಗ್ಗೇನಳ್ಳಿ
ತೋಟಗಾರಿಕೆ ಇಲಾಖೆಯ ಯೋಜನೆಗಳ ಬಗ್ಗೆ ಹೆಚ್ಚಿನ ಪ್ರಚಾರ ಬೇಕು.

– ಈಗಾಗಲೇ ಇಲಾಖೆಯಿಂದ ಪ್ರಚಾರ ಕಾರ್ಯ ಆರಂಭಿಸಲಾಗಿದೆ. ರೈತರ ಜೊತೆ ಸೇರಿ ಇನ್ನಷ್ಟು ಚುರುಕುಗೊಳಿಸಲಾಗುವುದು.

* ಸದಾನಂದ, ಹೆತ್ತೂರು
ಬೆಳೆವಿಮೆಯ ಸಮಸ್ಯೆ ಇದೆ. 2–3 ವರ್ಷದಿಂದ ಪರಿಹಾರ ಬಂದಿಲ್ಲ.

– ಬ್ಯಾಂಕ್‌ ಖಾತೆಯೊಂದಿಗೆ ಆಧಾರ್ ಜೋಡಣೆ ಆಗದಿರುವುದು. ಖಾತೆ ಸಂಖ್ಯೆಯಲ್ಲಿ ವ್ಯತ್ಯಾಸ ಮುಂತಾದ ತಾಂತ್ರಿಕ ತೊಂದರೆಗಳಿಂದಾಗಿ ದುಡ್ಡು ಬಂದು ವಾಪಸ್ ಹೋಗಿದೆ. ಇದೀಗ ಸಮಸ್ಯೆಗಳನ್ನು ಪರಿಹರಿಸಲಾಗುತ್ತಿದ್ದು, ವಾರದಲ್ಲಿ ನಿಮಗೆ ಪರಿಹಾರ ಸಿಗಲಿದೆ.

* ನಾಗೇಂದ್ರ, ಶೆಟ್ಟಿಹಳ್ಳಿ
ತೆಂಗಿನ ತೋಟದಲ್ಲಿ ಶುಂಠಿ ಬೆಳೆಯಬಹುದೇ?

– ತೆಂಗಿನ ಗಿಡದ ಸುತ್ತ 3–4 ಅಡಿ ಏನೂ ಹಾಕಿಸಬೇಡಿ. ಶುಂಠಿ ಬೆಳೆಯಲು ಯಾವುದೇ ತೊಂದರೆ ಇಲ್ಲ.

* ಗಣೇಶ್‌ಮೂರ್ತಿ, ಹಗರೆ ಮಲ್ಲಾಪುರ
ತೋಟದಲ್ಲಿ ಕೆಸುವಿನ ಗಿಡ ಹೆಚ್ಚಾಗಿದೆ. ನಿಯಂತ್ರಣಕ್ಕೆ ಬರುತ್ತಿಲ್ಲ

– ನಿಮ್ಮ ತೋಟದ ಚಿತ್ರಗಳನ್ನು ತೆಗೆದು ಕಳುಹಿಸಿ. ಇಲಾಖೆಯ ಅಧಿಕಾರಿಗಳನ್ನು ತೋಟಕ್ಕೆ ಕಳುಹಿಸಲಾಗುವುದು.

* ಉಮೇಶ್‌, ಮತ್ತಿಹಳ್ಳಿ
ನಮ್ಮ ತೋಟದಲ್ಲಿ ಕಾಳುಮೆಣಸು, ಕಾಫಿ ಇದೆ. ಇಲಾಖೆಯಿಂದ ಯಾವ ಯೋಜನೆಗಳಿವೆ?

–ರಾಷ್ಟ್ರೀಯ ತೋಟಗಾರಿಕೆ ಮಿಷನ್‌ ಅಡಿಯಲ್ಲಿ ಕಾಳುಮೆಣಸಿನ ಹಳೆಯ ತೋಟದ ಪುನಶ್ಚೇತನಕ್ಕೆ ಸಹಾಯಧನವಿದೆ. ಇಲಾಖೆಯನ್ನು ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT