ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜ್ವಲ್ ಆಸ್ತಿ ₹ 9 .78 ಕೋಟಿ

ತಂದೆ, ತಾಯಿ, ಅತ್ತೆಯಿಂದ ₹ 3.41 ಕೋಟಿ ಸಾಲ
Last Updated 22 ಮಾರ್ಚ್ 2019, 14:18 IST
ಅಕ್ಷರ ಗಾತ್ರ

ಹಾಸನ: ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆರ್‌. ಪ್ರಜ್ವಲ್ ಅವರು ತಮ್ಮ ಸ್ಥಿರ ಹಾಗೂ ಚರಾಸ್ತಿಗಳ ಒಟ್ಟು ಮೌಲ್ಯ ₹ 9.78 ಕೋಟಿ ಎಂದು ಆಫಿಡವಿಟ್‌ನಲ್ಲಿ ಘೋಷಣೆ ಮಾಡಿಕೊಂಡಿದ್ದಾರೆ.

₹ 15.58 ಲಕ್ಷ ನಗದು, ಒಂದು ಕೆ ಜಿ, 100 ಗ್ರಾಂ ಚಿನ್ನಾಭರಣ, 23 ಕೆ. ಜಿ ಬೆಳ್ಳಿ ಆಭರಣ, ₹ 4.5 ಲಕ್ಷ ಮೌಲ್ಯದ 18 ಹಸುಗಳು,₹ 30 ಸಾವಿರ ಮೌಲ್ಯದ ಒಂದು ಜೊತೆ ಎತ್ತು, ಒಂದು ಟ್ರ್ಯಾಕ್ಟರ್ ಸೇರಿ ₹ 1,64,86,632 ಚರಾಸ್ತಿ ಹಾಗೂ ₹ 4, 89,15,029 ಸ್ಥಿರಾಸ್ತಿ ಘೋಷಣೆ ಮಾಡಿದ್ದಾರೆ.

ಸ್ಥಿರಾಸ್ತಿಯಲ್ಲಿ ನೆಲಮಂಗಲದ ಸಮೀಪ 8 ಕಡೆ, ಹೊಳೆನರಸೀಪುರ ತಾಲ್ಲೂಕು ಮಾರಗೊಂಡನಹಳ್ಳಿಯಲ್ಲಿ 4 ಕಡೆ, ಹಾಸನ ತಾಲ್ಲೂಕು ದುದ್ದ ಹೋಬಳಿ ಗೌರಿಪುರ ಬಳಿ ಸೇರಿ 41 ಎಕರೆಗೂ ಹೆಚ್ಚು ಕೃಷಿ ಭೂಮಿ ಹೊಂದಿದ್ದಾರೆ. ₹ 91.10 ಲಕ್ಷ ಗಳನ್ನು ಹೂಡಿಕೆ ಮಾಡಿರುವುದಾಗಿ ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ.

₹ 3.72 ಕೋಟಿ ಸಾಲ ಹೊರೆ ಇದೆ ಎಂದು ಮಾಹಿತಿ ನೀಡಿರುವ ಪ್ರಜ್ವಲ್ ಅವರು, ತಮ್ಮ ತಂದೆ ಎಚ್.ಡಿ.ರೇವಣ್ಣ ಅವರ ಬಳಿ ₹ 1.26 ಕೋಟಿ ಸಾಲ, ತಾಯಿ ಭವಾನಿ ರೇವಣ್ಣ ಬಳಿ ₹ 43.75 ಲಕ್ಷ , ಅತ್ತೆ ಅನುಸೂಯ ಮಂಜುನಾಥ್ ಅವರ ಬಳಿ ₹ 22 ಲಕ್ಷ ಸಾಲ ಇರುವ ಮಾಹಿತಿ ನೀಡಿದ್ದಾರೆ.

ಅಲ್ಲದೇ, ಅಣ್ಣ ಸೂರಜ್‌ಗೆ ₹ 37.20 ಲಕ್ಷ, ಅಜ್ಜಿ ಚನ್ನಮ್ಮಗೆ ₹ 23 ಲಕ್ಷ, ಇತರೆ ₹ 25 ಲಕ್ಷ ಸಾಲ ನೀಡಿದ್ದಾರೆ. ₹ 91.10 ಲಕ್ಷ ವಿವಿಧೆಡೆ ಬಂಡವಾಳ ಹೂಡಿಕೆ ಮಾಡಿದ್ದಾರೆ. ವಿವಿಧ ಬ್ಯಾಂಕ್‌ನಲ್ಲಿ ₹ 11 ಲಕ್ಷ ಠೇವಣಿ ಇರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT