ಆಲೂರು: ಹಿಂದೂಗಳ ನೂತನ ವರ್ಷಾರಂಭ ಆಗುವ ಯುಗಾದಿ ಹಬ್ಬದ ಆಚರಣೆಗೆ ಸಿದ್ಧತೆಗಳು ಭರದಿಂದ ಸಾಗಿವೆ. ಮಹಿಳೆಯರು ಮನೆಗಳನ್ನು ಸ್ವಚ್ಛಗೊಳಿಸಿ, ತಳಿರು ತೋರಣಗಳಿಂದ ಶೃಂಗರಿಸಿದ್ದಾರೆ. ಸಡಗರ, ಸಂಭ್ರಮ ಮತ್ತು ಭಕ್ತಿ ಭಾವದಿಂದ ಆಚರಿಸಲು ತಯಾರಿ ನಡೆಸಿದ್ದಾರೆ. ಪ್ರತಿಯೊಬ್ಬರೂ ಅಭ್ಯಂಜನ ಮಾಡಲು ತಯಾರಾಗಿದ್ದಾರೆ.

ಕೆಲ ದಶಕಗಳ ಹಿಂದೆ ಯುಗಾದಿ, ಗೌರಿ-ಗಣೇಶ, ದೀಪಾವಳಿ ಹಬ್ಬಗಳಲ್ಲಿ ಪ್ರತಿ ಮನೆಗಳಲ್ಲಿ ಹೊಸ ಬಟ್ಟೆ ಧರಿಸಿ, ಹಬ್ಬಕ್ಕೆಂದೇ ಮೀಸಲಾಗಿದ್ದ ಹೋಳಿಗೆ, ಪಾಯಸ ಅಡುಗೆ ಮಾಡುತ್ತಿದ್ದರು. ಆದರೆ ಇತ್ತೀಚೆಗೆ ಪಾಶ್ಚಿಮಾತ್ಯ ಸಂಸ್ಕೃತಿ ಮೊರೆ ಹೋಗಿದ್ದು, ಇತ್ತೀಚಿನ ವರ್ಷಗಳಲ್ಲಿ ಹಬ್ಬಗಳು ಕೇವಲ ನೆಪಮಾತ್ರಕ್ಕೆ ಎನ್ನುವಂತಾಗಿದೆ ಎಂದು ಪಟ್ಟಣದ ಹಿರಿಯರು ಹೇಳಿದರು.

ಹಬ್ಬದ ದಿನ ಪ್ರತಿಯೊಬ್ಬರೂ ಸಮೀಪದ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ. ಕೆಲ ಗ್ರಾಮಗಳಲ್ಲಿ ದೇವಸ್ಥಾನದಲ್ಲಿ ಹಬ್ಬದ ಹಿಂದಿನ ದಿನ ಪಂಚಾಂಗ ಪಠಣ ಮಾಡಲು ತಯಾರಿ ನಡೆದಿದೆ.

ಹಬ್ಬದ ಹಿಂದಿನ ದಿನವಾದ ಬುಧವಾರ ವಾರದ ಸಂತೆಯಲ್ಲಿ ಹಬ್ಬಕ್ಕೆ ಬೇಕಾಗುವ ಸರಕು ಸಾಮಗ್ರಿಗಳನ್ನು ಕೊಳ್ಳಲು ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.

ಸಂತೆಯಲ್ಲಿ ಯಾವುದೇ ವಸ್ತುಗಳ ಬೆಲೆ ಸದ್ಯಕ್ಕೆ ಏರಿಕೆಯಾದಂತೆ ಗೋಚರಿಸಿಲ್ಲ. ಮುಖ್ಯವಾಗಿ ಸೇವಂತಿಗೆ ಹೂ ಮಾರೊಂದಕ್ಕೆ ₹80-₹100, ಈರುಳ್ಳಿ ₹100 ಕ್ಕೆ 5-6 ಕೆ.ಜಿ.ಯಂತೆ ಮಾರಾಟವಾಯಿತು. ಅಕ್ಕಿ, ಬೇಳೆ ಇತರೆ ಕಾಳುಗಳ ಬೆಲೆ ತುಸು ಏರಿಕೆಯಾಗಿತ್ತು. ಯುಗಾದಿ ದವನ ಒಂದು ಕಡ್ಡಿಗೆ ₹10ರವರೆಗೂ ಮಾರಾಟವಾಗುತ್ತಿತ್ತು.

ಅಡುಗೆ ಅನಿಲ ಸಿಲಿಂಡರ್ ಕೊರತೆ ಕಾಣುತ್ತಿಲ್ಲ. ವಾಣಿಜ್ಯ ಬಳಕೆ ಗ್ಯಾಸ್ ಕೊರತೆಯಿಂದ ಅಗತ್ಯ ಇರುವೆಡೆ ಸೌದೆ ಬಳಸುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ನೂತನವಾಗಿ ಮನೆಗಳನ್ನು ನಿರ್ಮಾಣ ಮಾಡುವ ಸಂದರ್ಭದಲ್ಲಿ ಕಡ್ಡಾಯವಾಗಿ ಸೌದೆ ಒಲೆ ನಿರ್ಮಾಣ ಮಾಡಿಕೊಂಡಿದ್ದು, ಗ್ಯಾಸ್ ತೊಂದರೆ ಅಷ್ಟಾಗಿ ಪರಿಣಾಮ ಬೀರಿಲ್ಲ. ತೊಂದರೆಯಾದರೆ ಸೌದೆ ಒಲೆ ಮೊರೆ ಹೋಗುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.