ಬಜೆಟ್‌ನಲ್ಲಿ ಸಾಲಮನ್ನಾ ಘೋಷಿಸದಿದ್ದರೆ ಹೋರಾಟ

7
ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ನಂಜುಂಡೇಗೌಡ ಎಚ್ಚರಿಕೆ

ಬಜೆಟ್‌ನಲ್ಲಿ ಸಾಲಮನ್ನಾ ಘೋಷಿಸದಿದ್ದರೆ ಹೋರಾಟ

Published:
Updated:
ನಂಜುಂಡೇಗೌಡ

ಹಾಸನ: ‘ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಜೆಟ್‌ನಲ್ಲಿಯೇ ಸಾಲಮನ್ನಾ ಘೋಷಿಸಬೇಕು’ ಎಂದು ಬಿಜೆಪಿ ರೈತಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಸ್.ನಂಜುಂಡೇಗೌಡ ಎಚ್ಚರಿಸಿದರು.

‘ಸದ್ಯ ರೈತರು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಈ ಸಂದರ್ಭದಲ್ಲಿ ಸಂಪೂರ್ಣ ಸಾಲಮನ್ನಾದ ಅವಶ್ಯಕತೆ ಹೆಚ್ಚಿದೆ. ಘೋಷಣೆ ಹೊರಬೀಳದಿದ್ದರೆ ಹೋರಾಟ ನಡೆಯಲಿದೆ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ‘ಜೆಡಿಎಸ್ ತನ್ನ ಪ್ರಣಾಳಿಕೆಯಲ್ಲಿ ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್‌ಗಳಲ್ಲಿನ ರೈತರ ಸಂಪೂರ್ಣ ಸಾಲಮನ್ನಾ ಭರವಸೆ ನೀಡಿದ್ದರು. ಪ್ರಣಾಳಿಕೆಗೆ ಆದ್ಯತೆ ನೀಡುವವರಿಗೆ ಬೆಂಬಲಿಸುವುದಾಗಿ ಹೇಳಿದ್ದರು’ ಎಂದು ನೆನಪಿಸಿದರು.

ಶಾಸಕ ಪ್ರೀತಂ ಜೆ.ಗೌಡ ಅವರು, ‘ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಾಲಮನ್ನಾ ವಿಷಯದಲ್ಲಿ ನುಡಿದಂತೆ ನಡೆಯಬೇಕು. ಅವರೇ ಕೊಟ್ಟಿರುವ ಮಾತು ಉಳಿಸಿಕೊಳ್ಳಲಿ’ ಎಂದು ಒತ್ತಾಯಿಸಿದರು. ಕೃಷಿ ಚಟುವಟಿಕೆಗೆ ಅನುವಾಗುವಂತೆ ಈಗ ಮನ್ನಾ ಘೋಷಿಸಿ, ಹೊಸದಾಗಿ ಸಾಲ ನೀಡಬೇಕು. ಪ್ರಸ್ತುತ ಬ್ಯಾಂಕ್‌ಗಳಲ್ಲಿ ರೈತರಿಗೆ ಸಾಲ ಸಿಗದೇ ಸಂಕಷ್ಟಕ್ಕೆ ಸಿಲುಕಿದಂತಾಗಿದೆ ಎಂದರು.

ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ರೇಣುಕುಮಾರ್, ಮುಖಂಡರಾದ ಎಂ.ಆರ್.ವೆಂಕಟೇಶ್, ಮಲ್ಲಪ್ರಸಾದ್, ಚನ್ನಕೇಶವ, ಪ್ರಸಾದ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !