ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಸಬಲೀಕರಣಕ್ಕೆ ಆದ್ಯತೆ

Last Updated 8 ಮಾರ್ಚ್ 2018, 10:49 IST
ಅಕ್ಷರ ಗಾತ್ರ

ಬಿ.ಎಚ್.ಕೈಮರ(ಎನ್.ಆರ್.ಪುರ): ನೋರ್ಬಿ ಸೋಷಿಯಲ್ ವೆಲ್‌ಫೇರ್ ಸೊಸೈಟಿಯು ಗ್ರಾಮೀಣ ಭಾಗದ ಮಹಿಳೆಯರ ಸಬಲೀಕರಣಕ್ಕಾಗಿ ಶ್ರಮಿ ಸುತ್ತಿದೆ ಎಂದು ಸಂಸ್ಥೆಯ ನಿರ್ದೇಶಕ ಫಾದರ್ ಸೆಬಾಸ್ಟಿನ್ ತಿಳಿಸಿದರು.

ತಾಲ್ಲೂಕಿನ ಬಿ.ಎಚ್.ಕೈಮರದ ಆಲ್ಫೋನ್ಸ್ ಅವರ ಮನೆಯ ಆವರಣದಲ್ಲಿ ನೋರ್ಬಿ ಸೋಷಿಯಲ್ ವೆಲ್‌ ಫೇರ್‌ ಸೊಸೈಟಿಯ ಆಶ್ರಯದಲ್ಲಿ ಶನಿವಾರ ನಡೆದ 16 ಸ್ವಸಹಾಯ ಗುಂಪುಗಳ ವಲಯ ಮಟ್ಟದ ಸಭೆಗೆ ಚಾಲನೆ ನೀಡಿ ಮಾತನಾಡಿದರು.

‘ಸ್ವಸಹಾಯ ಗುಂಪುಗಳ ಗ್ರಾಮೀಣ ಭಾಗದಲ್ಲಿ ಬಲಿಷ್ಠವಾಗಬೇಕಾಗಿದ್ದು, ಸಂಸ್ಥೆಯು ನೀಡುವ ತರಬೇತಿಗಳನ್ನು ಪಡೆದುಕೊಂಡು ಬ್ಯಾಂಕಿನಿಂದ ಸಾಲ ಪಡೆದು ಸ್ವ ಉದ್ಯೋಗದಲ್ಲಿ ತೊಡಗಿಕೊಂಡರೆ ಆರ್ಥಿಕವಾಗಿ ಲಾಭಗಳಿಸಬಹುದು’ ಎಂದರು.

ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸುಧಾಕರ್ ಮಾತನಾಡಿ, ‘ಇತ್ತೀಚಿನ ವರ್ಷಗಳಲ್ಲಿ ಮೋಸ,ಕಳ್ಳತನ ಮಾಡುವವರ ಸಂಖ್ಯೆ ಜಾಸ್ತಿಯಾಗಿರುವುದರಿಂದ ಮಹಿಳೆಯರು ಜಾಗೃತರಾಗ ಬೇಕಾಗಿದೆ. ಅಪರಿಚಿತರು ಮನೆಗೆ ಬಂದರೆ ಮನೆಗೆ ಸೇರಿಸಿಕೊಳ್ಳಬಾರದು. ಅನುಮಾನ ಬಂದತೆ ತಕ್ಷಣ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ವಾಹನ ಚಾಲನೆ ಮಾಡುವಾಗ ಚಾಲನಾ ಪರವಾನಿಗೆ ಸೇರಿದಂತೆ ಎಲ್ಲಾ ದಾಖಲೆಗಳನ್ನು ಇಟ್ಟುಕೊಳ್ಳಬೇಕು.ದ್ವಿಚಕ್ರವಾಹನ ಸವಾರರು ಉತ್ತಮ ಗುಣಮಟ್ಟದ ಹೆಲ್ಮೆಟ್ ಧರಿಸಬೇಕು’ ಎಂದರು.

ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಬೇಬಿ ಮಾತನಾಡಿ, ಆರೋಗ್ಯ ಇಲಾಖೆಯಿಂದ ಸಿಗುವ ಸೌಲಭ್ಯಗಳು, ಮಾರಕ ರೋಗಗಳ ನಿಯಂತ್ರಣ ಮತ್ತು ರೋಗ ಬರದಂತೆ ಕೈಗೊಳ್ಳಬೇಕಾದ ಮುಂಜಾಗೃತ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಸೋಷಿಯಲ್ ವೆಲ್ ಫೇರ್ ಸೊಸೈಟಿಯ ಕಾರ್ಯಕ್ರಮ ಸಂಯೋಜಕ ಪ್ರಭಾಕರ್ ಸಂಸ್ಥೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಸ್ವಸಹಾಯ ಸಂಘಗಳ ಸಂಯೋಜಕಿ ಗೀತಾ ಮೈಕಲ್ ಬ್ಯಾಂಕಿನಿಂದ ಸದಸ್ಯರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಅಧ್ಯಕ್ಷತೆಯನ್ನು ಸ್ವಸಹಾಯ ಗುಂಪಿನ ಸದಸ್ಯ ರೋಜನಾ ಡಿಸೋಜ ವಹಿಸಿದ್ದರು. ಸ್ವಸಹಾಯ ಗುಂಪಿನ ಸದಸ್ಯರಾದ ಗಾಯಿತ್ರಿ, ಮೇರಿ,ಜಾನ್ಸಿ, ಶಿಬು, ಶೈನಿ, ಅಲ್ಫೋನ್ಸ್ .ಜಾನ್ಸಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT