ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಡಿಒ ವರ್ಗಾವಣೆಗೆ ಆಗ್ರಹ, ಪ್ರತಿಭಟನೆ

Last Updated 23 ಜೂನ್ 2018, 14:27 IST
ಅಕ್ಷರ ಗಾತ್ರ

ಅರಕಲಗೂಡು: ತಾಲ್ಲೂಕಿನ ಮೋಕಲಿ ಗ್ರಾಮ ಪಂಚಾಯಿತಿ ಪಿಡಿಒ ಅಭಿವೃದ್ಧಿ ಕಡೆಗಣಿಸಿದ್ದು, ಸರಿಯಾಗಿ ಕಚೇರಿಗೆ ಬರುತ್ತಿಲ್ಲ. ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿ ಗ್ರಾಪಂ ಅಧ್ಯಕ್ಷೆ, ಮತ್ತು ಸದಸ್ಯರು ಪ್ರತಿಭಟಿಸಿದರು.

ಅಧ್ಯಕ್ಷೆ ಸರೋಜಾ ಅಧ್ಯಕ್ಷತೆಯಲ್ಲಿ ಶನಿವಾರ ಸಾಮಾನ್ಯಸಭೆ ಏರ್ಪಡಿಸಲಾಗಿತ್ತು. ಸದಸ್ಯ ವೀರಾಜ್, ‘ಆರು ತಿಂಗಳಿಂದ ಸಾಮಾನ್ಯ ಸಭೆ ನಡೆಸಿಲ್ಲ, ವಿವಿಧ ಕಾಮಗಾರಿ ಬಿಲ್ ಮಾಡಲಾಗಿದೆ,ವಿವಿಧ ಪರಿಕರ ಖರೀದಿಸಲಾಗಿದೆ. ಅಧ್ಯಕ್ಷರ ಗಮನಕ್ಕೂ ತಾರದೇ ಖರೀದಿ ಪಿಡಿಒ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ’ ಎಂದು ದೂರಿದರು.

ಅಧ್ಯಕ್ಷೆ ಅವರು ಇದಕ್ಕೆ ಪೂರಕವಾಗಿ ‘ಪಿಡಿಒ ಅವರು ಅಭಿವೃದ್ಧಿಗೆ ಪೂರಕವಾಗಿ ಕೆಲಸ ನಿರ್ವಹಿಸುತ್ತಿಲ್ಲ. ಹೆಬ್ಬಾಲೆ ಗ್ರಾಪಂನಲ್ಲಿಯೇ ಹೆಚ್ಚು ಸಮಯ ಇರುತ್ತಾರೆ. ಶೌಚಾಲಯ ಸಾಮಗ್ರಿ ಖರೀದಿಗೆ ₹ 20 ಸಾವಿರ ಬಿಲ್ ಮಾಡಲಾಗಿದೆ. ಸಹಿ ಹಾಕದಿರುವ ಬಗ್ಗೆ ಜೂನ್ 13ರಂದು ನೋಟಿಸ್ ನೀಡಿದ್ದಾರೆ’ ಎಂದು ಸಭೆಯಲ್ಲಿ ಪ್ರದರ್ಶಿಸಿದರು.

‘ಸಾಮಗ್ರಿಯನ್ನು ಖರೀದಿಸುವ ಮುನ್ನ ನನ್ನ ಜೊತೆಗೆ ಚರ್ಚಿಸಿಲ್ಲ. ಹೀಗಾಗಿ ನಾನು ಈ ಚೆಕ್‌ಗೆ ಸಹಿ ಹಾಕಿಲ್ಲ’ ಎಂದು ಸಮರ್ಥಿಸಿಕೊಂಡರು.

ಪಿಡಿಒ ಅವರನ್ನು ವರ್ಗಾವಣೆಗೆ ಒತ್ತಾಯಿಸಿ ಕಚೇರಿ ಮುಂದೆ ಜನಪ್ರತಿನಿಧಿಗಳು ಕೆಲಕಾಲ ಪ್ರತಿಭಟಿಸಿದರು. ಉಪಾಧ್ಯಕ್ಷೆ ಸುಕನ್ಯಾ ಸದಸ್ಯರಾದ ರುಕ್ಮಣಿ ವೀರಾಜ್, ಸ್ವಾಮಿ, ದೇವಯ್ಯ,ಶಿವಣ್ಣ, ಅನುರಾಧಾ, ಸೌಭಾಗ್ಯಾ, ಕಾಳಮ್ಮ ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.

ಪ್ರತಿಕ್ರಿಯೆ: ಮೋಕಲಿ ಗ್ರಾಮ ಪಂಚಾಯಿತಿಯಲ್ಲಿ ಅಕ್ರಮ ನಡೆದಿಲ್ಲ. ದಾಖಲೆ ಪರಿಶೀಲಿಸಬಹುದು ಎಂದು ಈ ಕುರಿತು ಪಿಡಿಒ ಮನು ಅವರು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT