ಬಡ್ತಿ ಮೀಸಲಾತಿ ವಿಚಾರ: ರಾಜ್ಯದ ವಿಳಂಬ ಧೋರಣೆಗೆ ಖಂಡನೆ

7

ಬಡ್ತಿ ಮೀಸಲಾತಿ ವಿಚಾರ: ರಾಜ್ಯದ ವಿಳಂಬ ಧೋರಣೆಗೆ ಖಂಡನೆ

Published:
Updated:
Deccan Herald

ಹಾಸನ: ‘ಬಡ್ತಿ ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ’ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿತು.

‘2018ರ ಫೆ. 9ರಂದು ಸುಪ್ರಿಂ ಕೋರ್ಟ್ ರಾಜ್ಯ ಸರ್ಕಾರದ ಬಡ್ತಿ ಮೀಸಲಾತಿ ರದ್ದುಪಡಿಸಿ ತೀರ್ಪು ನೀಡಿತ್ತು. ಇದರಿಂದ ಪರಿಶಿಷ್ಟ ಜಾತಿ ಮತ್ತು ವರ್ಗದ ನೌಕರರಲ್ಲಿ ಅಭದ್ರತೆ, ಆತಂಕ ಉಂಟಾಗಿತ್ತು. ಇದನ್ನು ನಿವಾರಿಸುವ ಉದ್ದೇಶದಿಂದ ನೌಕರರ ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿರುವ ಎಸ್ಸಿ, ಎಸ್ ಟಿ ಸರ್ಕಾರಿ ನೌಕರರಿಗೆ ತತ್ಪರಿಣಾಮದ ಜೇಷ್ಠತೆ ವಿಸ್ತರಿಸಿ ಕಾಯ್ದೆ ರೂಪಿಸಿತು. ವಿಧಾನ ಮಂಡಲದಲ್ಲಿ ಅನುಮೋದನೆಗೊಂಡು ರಾಷ್ಟ್ರಪತಿಯಿಂದ ಅಂಕಿತಗೊಂಡು ಜಾರಿಯಾಗಿದೆ. ಆದರೆ, ಇದನ್ನು ಅನುಷ್ಠಾನಗೊಳಿಸಲು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರ ಮೀನಮೇಷ ಎಣಿಸುತ್ತಿದೆ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಮುಖಂಡರಾದ ಕೃಷ್ಣದಾಸ್, ಕೆ. ಈರಪ್ಪ, ಎಚ್.ಕೆ. ಸಂದೇಶ್, ಶಂಕರ್, ನಾಗರಾಜ್ ಹೆತ್ತೂರು, ಕ್ರಾಂತಿಪ್ರಸಾದ್ ತ್ಯಾಗಿ, ಕೆ. ಪ್ರಕಾಶ್, ನಿಂಗರಾಜು ಅರೇಹಳ್ಳಿ, ರಂಗಸ್ವಾಮಿ, ಕೃಷ್ಣ ಪೆನ್‌ಷನ್ ಮೊಹಲ್ಲಾ, ರಾಜು, ರಮೇಶ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !