ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಿಯ ರಥ ಎಳೆದ ಮಹಿಳೆಯರು

Last Updated 20 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಹಿರಿಯೂರು: ತಾಲ್ಲೂಕಿನ ವಾಣಿವಿಲಾಸ ಜಲಾಶಯದ ಅಣೆಕಟ್ಟೆಯ ರಕ್ಷಕಿ ಎಂದೇ ಖ್ಯಾತಿ ಪಡೆದಿರುವ ವಾಣಿವಿಲಾಸಪುರ ಗ್ರಾಮದ ಕಣಿವೆ ಮಾರಮ್ಮ ದೇವಿಯ ಬ್ರಹ್ಮರಥವನ್ನು ಶುಕ್ರವಾರ ಮೊದಲ ಬಾರಿಗೆ ಮಹಿಳೆಯರಿಂದ ಎಳೆಸಲಾಯಿತು.

ಒಂದೆಡೆ ಬದುಕಿಗೆ ವ್ಯವಸಾಯವನ್ನೇ ನಂಬಿರುವ ರೈತರು ಎತ್ತಿನಗಾಡಿಗಳಲ್ಲಿ ಕುಟುಂಬ ಸಮೇತ ಬಂದು, ಒಳ್ಳೆಯ ಮಳೆ-ಬೆಳೆಗೆ ಪ್ರಾರ್ಥಿಸುವ ದೃಶ್ಯ. ಮತ್ತೊಂದೆಡೆ ನವ ವಿವಾಹಿತೆಯರು ತವರಿನವರಿಂದ ಹಸಿರು ಬಳೆ-ಮಡಿಲಕ್ಕಿ ಉಡುಗೊರೆ ಸ್ವೀಕರಿಸುವ ದೃಶ್ಯ. ಮಗದೊಂದು ಕಡೆ ಎಳೆಯ ಮಕ್ಕಳು ಬೆಂಡು-ಬತ್ತಾಸು ಚಪ್ಪರಿಸುತ್ತ ಜಗತ್ತನ್ನೇ ಮರೆತವರಂತೆ ಜಾತ್ರಾ ಸ್ಥಳದಲ್ಲಿ ಓಡಾಡುತ್ತಿದ್ದ ನೋಟ ಶುಕ್ರವಾರ ತಾಲ್ಲೂಕಿನ ವಾಣಿವಿಲಾಸ ಜಲಾಶಯದ ಕೆಳಭಾಗದಲ್ಲಿರುವ ಕಣಿವೆ ಮಾರಮ್ಮ ದೇವಿಯ ರಥೋತ್ಸವದಲ್ಲಿ ಕಂಡುಬಂದಿತು.

ಮರಳಿ ಹೋಗುವಾಗ ರಥವನ್ನು ಎಂದಿನಂತೆ ಪುರುಷರೇ ಎಳೆದರು. ಸ್ಥಳೀಯರಲ್ಲದೆ ತಮಿಳುನಾಡು, ಆಂಧ್ರಪದೇಶದಿಂದ ನೂರಾರು ರೈತರು ಈ ಜಾತ್ರೆಗೆ ಬಂದು ಹರಕೆ ಸಲ್ಲಿಸುವುದು ವಾಡಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT