ಎಸ್.ಪಿ. ಹುಟ್ಟಹಬ್ಬ ಆಚರಣೆ: ರಕ್ತದಾನ ಶಿಬಿರ, ಪ್ರತಿಭಾ ಪುರಸ್ಕಾರ

7

ಎಸ್.ಪಿ. ಹುಟ್ಟಹಬ್ಬ ಆಚರಣೆ: ರಕ್ತದಾನ ಶಿಬಿರ, ಪ್ರತಿಭಾ ಪುರಸ್ಕಾರ

Published:
Updated:
Deccan Herald

ಹಾಸನ : ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರವಾಡ್ ಅವರ ಹುಟ್ಟುಹಬ್ಬವನ್ನು ವಿವಿಧ ಸಂಘಟನೆಗಳು ನಗರದಲ್ಲಿ ಆಚರಿಸಿದವು.

ಕರ್ನಾಟಕ ರಕ್ಷಣಾ ವೇದಿಕೆಯು ವಿಶ್ವೇಶ್ವರಯ್ಯ ಭವನದಲ್ಲಿ ಏರ್ಪಡಿಸಿದ್ದ ಶಿಬಿರದಲ್ಲಿ ಹಲವು ಮಂದಿ ರಕ್ತದಾನ ಮಾಡಿದರು.

ಆದಿಚುಂಚನಗಿರಿ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಮಾತನಾಡಿ, ರಾಹುಲ್‌ ಅವರು ಮಹಾರಾಷ್ಟ್ರದಲ್ಲಿ ಜನಿಸಿದರೂ ದೇವರು ಕರ್ನಾಟಕದಲ್ಲಿ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾನೆ. ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಇತರೆ ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ ಎಂದರು.

ಜವೇನಹಳ್ಳಿ ಮಠದ ಸಂಗಮೇಶ್ವರ ಸ್ವಾಮೀಜಿ , ಧರ್ಮಗುರುಗಳಾದ ಮೌಲನಾ ಮುತಿಯಾರ್ ರೆಹಮನ್, ಸಂತೋಷ್ ಡಿಸೋಜ, ವೇದಿಕೆ ಜಿಲ್ಲಾಧ್ಯಕ್ಷ ಸಿ.ಡಿ. ಮನುಕುಮಾರ್, ಮಲ್ಲೇಶಗೌಡ, ಸಮೀರ್ ಅಹಮದ್ ಇದ್ದರು.
ರಾಷ್ಟ್ರೀಯ ಮಾನವ ಹಕ್ಕುಗಳ ವೇದಿಕೆ ಮತ್ತು ವೆಲ್ ಫೇರ್ ಟ್ರಸ್ಟ್ ಆಶ್ರಯದಲ್ಲಿ ಜೀವನ ಜ್ಯೋತಿ ಕಿವುಡ ಮತ್ತು ಮೂಕ ಮಕ್ಕಳೊಂದಿಗೆ ರಾಹುಲ್ ಅವರು ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದರು.

ವೇದಿಕೆ ಜಿಲ್ಲಾಧ್ಯಕ್ಷ ಸಯ್ಯಾದ್ ಇಜಾಜ್, ಮಂಜುನಾಥ್, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ. ಶಿವಣ್ಣ, ರೆಡ್‌ಕ್ರಾಸ್ ಸಂಸ್ಥೆಯ ಮಲ್ಲಿಕಾರ್ಜುನ್, ಮಾದಿಗ ದಂಡೋರ ಸಂಘಟನೆಯ ವಿಜಯಕುಮಾರ್ ಇದ್ದರು.

ಶಾಸಕ ಪ್ರೀತಂ ಜೆ.ಗೌಡ ಅವರು ರಾಹುಲ್‌ಅವರನ್ನು ಸನ್ಮಾನಿಸಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ಜಿಲ್ಲಾ ಯುವ ಮೋರ್ಚಾ ಮಾಜಿ ಅಧ್ಯಕ್ಷ ಚನ್ನಕೇಶವ, ಚಂದ್ರು ಇದ್ದರು.

ನಗರದ ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಸಮತಾ ಸೈನಿಕ ದಳದಿಂದ ರಾಹುಲ್‌ ಜನ್ಮ ದಿನದ ಅಂಗವಾಗಿ 2017–18ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಕರ್ನಾಟಕ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ  ನಾಯಕರಹಳ್ಳಿ ಮಂಜೇಗೌಡ, ರಿಪಬ್ಲಿಕ್ ಪಾರ್ಟಿಯ ಎಂ.ವೆಂಕಟಸ್ವಾಮಿ, ಸತೀಶ್, ದಂಡೋರ ಸೋಮು, ಶ್ಯಾಮಸುಂದರ್ ನಿಡೂಡಿ, ಮಧು ನಿಟ್ಟೂರು, ಹೇಮಂತ ಆಡುವಳ್ಳಿ, ರಂಗಸ್ವಾಮಿ ಗಂಗೂರು ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !