ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚನ್ನರಾಯಪಟ್ಟಣ | ಪ್ರಸನ್ನ ಕೈಯಲ್ಲಿ ಅರಳಿದ ರಾಮಲಲ್ಲಾ ಗಣಪ

Published 3 ಸೆಪ್ಟೆಂಬರ್ 2024, 14:11 IST
Last Updated 3 ಸೆಪ್ಟೆಂಬರ್ 2024, 14:11 IST
ಅಕ್ಷರ ಗಾತ್ರ

ಚನ್ನರಾಯಪಟ್ಟಣ: ಕಲಾವಿದ ಸಿ.ವಿ. ಪ್ರಸನ್ನ, ಪ್ರತಿವರ್ಷ ವಿಶಿಷ್ಟವಾಗಿ ಗಣಪತಿ ತಯಾರಿಸುತ್ತಿದ್ದಾರೆ.

ತಂದೆ ವೀರಭದ್ರಚಾರಿ ಅವರಿಂದ ಗಣಪತಿ ತಯಾರಿಸುವ ಕಲೆಯನ್ನು ಕಲಿತಿರುವ ಪ್ರಸನ್ನ ಅವರು ಇದುವರೆಗೆ ಪಂಚಮುಖಿ, ಪದ್ಮಾಸನ, ಆಂಜನೇಯ ಮತ್ತು ರಾಶಿ ಗಣಪತಿ ಸೇರಿ ಭಾರತದ ಪರಂಪರೆ ಬಿಂಬಿಸುವ ರೀತಿಯಲ್ಲಿ ಗಣಪತಿ ಮೂರ್ತಿ ತಯಾರಿಸಿದ ಹೆಗ್ಗಳಿಕೆ ಇವರದು.

ಉದಯ್ ಮಾಡೆಲ್ ವ ರ್ಕ್ಸ್‌ ಸಂಘಟನೆಯಡಿ ಗಣಪತಿ ತಯಾರಿಸಲಾಗುತ್ತದೆ. ಪ್ರಸನ್ನ ಅವರ ಜತೆ ಮೂವರು ಕಲಾವಿದರು ಸಹಾಯಕರಾಗಿ ದುಡಿಯುತ್ತಿದ್ದು, ಎರಡು ತಿಂಗಳಿಂದ ಮೂರ್ತಿ ತಯಾರಿಸುವಲ್ಲಿ ಮಗ್ನರಾಗಿದ್ದಾರೆ. ಈ ಸಾಲಿಗೆ ರಾಮಲಲ್ಲಾ ಗಣಪತಿ ತಯಾರಿಸಲಾಗಿದೆ. ಅದೇ ರೀತಿ ಚನ್ನರಾಯಪಟ್ಟಣದ ಇತಿಹಾಸ ಪ್ರಸಿದ್ದ ಪ್ರಸನ್ನ ಗಣಪತಿ ಆಸ್ಥಾನ ಮಂಟಪದಲ್ಲಿ ಪ್ರತಿಷ್ಟಾಪಿಸಲು 9 ಅಡಿ ಎತ್ತರದ ನವಗ್ರಹ ಗಣಪತಿ ತಯಾರಿಸಲಾಗಿದೆ. ಗಣಪತಿಯ ಕಿರೀಟದಲ್ಲಿ ಸೂರ್ಯ, ಚಂದ್ರ, ರಾಹು, ಕೇತು, ಮಂಗಳ, ಬುಧ, ಗುರು ಮತ್ತು ಶುಕ್ರ ಗ್ರಹಗಳ ಚಿತ್ರ ಬಿಡಿಸಲಾಗಿದೆ.

‘ತಾಲ್ಲೂಕಿನ ದೊಡ್ಡೇರಿ ಕೆರೆಯಲ್ಲಿ ಜೇಡಿ ಮಣ್ಣನ್ನು ತಂದು ಅದನ್ನು ಹದಮಾಡಿ ಮೂರ್ತಿಗಳನ್ನು ತಯಾರಿಸಲಾಗುತ್ತದೆ. ಅರ್ಧ ಅಡಿಯಿಂದ 10 ಅಡಿವರೆಗೆ ಮೂರ್ತಿಗಳು ಲಭ್ಯವಿವೆ. ಈ ವರ್ಷ ಗೌರಿ, ಗಣಪ ಸೇರಿ ಈ ವರ್ಷ 300 ಮೂರ್ತಿಗಳನ್ನು ತಯಾರು ಮಾಡಲಾಗಿದೆ. ಪ್ರತಿವರ್ಷ ಪರಿಸರ ಸ್ನೇಹಿ ಗಣಪತಿ ತಯಾರಿಸುವುದು ವಿಶೇಷ ಎನ್ನುತ್ತಾರೆ’ ಕಲಾವಿದ ಪ್ರಸನ್ನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT