ಕೊಣನೂರು: ತಂಬಾಕಿಗೆ ಉತ್ತಮ ಬೆಲೆ ನೀಡುವಂತೆ ಒತ್ತಾಯಿಸಿ ಸೋಮವಾರದಿಂದ ರಾಮನಾಥಪುರದ ತಂಬಾಕು ಹರಾಜು ಮಾರುಕಟ್ಟೆಯ ಆವರಣದಲ್ಲಿ ತಂಬಾಕು ಬೆಳೆಗಾರರು ಮತ್ತು ರೈತ ಸಂಘದವರು ಪ್ರಾರಂಭಿಸಿದ್ದ ಅಹೋರಾತ್ರಿ ಧರಣಿ ಮಂಗಳವಾರ ಮುಕ್ತಾಯವಾಗಿದೆ.

ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಕೆ.ಸಿ. ಸೌಮ್ಯಾ, ‘ತಂಬಾಕು ಕೊಳ್ಳುವ ಕಂಪನಿಗಳು, ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ಶಾಸಕರು, ತಂಬಾಕು ಮಂಡಳಿಯ ಅಧಿಕಾರಿಗಳ ಸಭೆಯನ್ನು ಏ.15 ರಂದು ಕರೆದು ನಿಮ್ಮ ಸಮಸ್ಯೆ ಬಗೆಹರಿಲಾಗುವುದು’ ಎಂದು ಭರವಸೆ ನೀಡಿದರು. ನಂತರ ಬೆಳೆಗಾರರ ಪ್ರತಿಭಟನೆ ಹಿಂಪಡೆದರು.

ಇದಕ್ಕೂ ಮೊದಲು ಮಂಗಳವಾರ ನಡೆದ 2 ನೇ ದಿನದ ಪ್ರತಿಭಟನೆಯಲ್ಲಿ ಪ್ರತಿಭಟನಕಾರರು, ತಲೆಯ ಮೇಲೆ ತಂಬಾಕು, ಕಲ್ಲನ್ನು ಹೊತ್ತು ಆಕ್ರೋಶ ವ್ಯಕ್ತಪಡಿಸಿದರು. ಬಸವೇಶ್ವರ ಸರ್ಕಲ್ನಲ್ಲಿ ಮಾನವ ಸರಪಳಿ ನಿರ್ಮಿಸಿ, ಟಯರ್ಗೆ ಬೆಂಕಿ ಹಾಕಿ, ತಂಬಾಕು ಕೊಳ್ಳುವ ಕಂಪನಿಗಳು, ಸರ್ಕಾರ ಮತ್ತು ತಂಬಾಕು ಮಂಡಳಿಯ ವಿರುದ್ಧ ಘೋಷಣೆ ಕೂಗಿದರು.

ಮಾರುಕಟ್ಟೆ ಪ್ರಾರಂಭದ ದಿನಗಳಲ್ಲಿ ಉತ್ತಮ ದರ್ಜೆಯ ತಂಬಾಕು ಪ್ರತಿ ಕೆ.ಜಿ.ಗೆ ₹320 ದರ ನೀಡುತ್ತಿದ್ದ ಕಂಪನಿಗಳು ದಿಢೀರ್ ಆಗಿ ಮನಸೋಇಚ್ಛೆ ಬೆಲೆ ಇಳಿಕೆ ಮಾಡಿದ್ದು, ಇದೀಗ ಕಡಿಮೆ ಗುಣಮಟ್ಟದ ತಂಬಾಕನ್ನೂ ಕೊಳ್ಳುತ್ತಿಲ್ಲ. ಶೇ 50 ಹೊಗೆಸೊಪ್ಪು ಮನೆಯಲ್ಲೇ ಉಳಿದಿದ್ದು, ಈಗ ಮಾರಾಟ ಮಾಡದಿದ್ದರೆ, ನಿಮ್ಮ ತಂಬಾಕನ್ನು ಕೊಳ್ಳುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ರೈತ ಸಂಘ ಘಟಕದ ತಾಲ್ಲೂಕು ಘಟಕದ ಅಧ್ಯಕ್ಷ ಬಂದಿಗನಹಳ್ಳಿ ರವಿ ತಿಳಿಸಿದರು.

ಭಾರತೀಯ ರೈತ ಸಂಘದ ತಾಲ್ಲೂಕು ಘಟಕದ ಗೌರವಾಧ್ಯಕ್ಷ ಸೀಬಳ್ಳಿ ಯೋಗಣ್ಣ ಮಾತನಾಡಿ, ‘ಐಟಿಸಿ ಕಂಪನಿಯು ತಂಬಾಕು ಮಾರುಕಟ್ಟೆಯಲ್ಲಿ ಏಕಸ್ವಾಮ್ಯ ಪಡೆದು ಬೆಳೆಗಾರರ ಕತ್ತು ಹಿಸುಕುತ್ತಿದೆ. ಇತರೆ ಕಂಪನಿಗಳೂ ಅನ್ಯಾಯ ಮಾಡುತ್ತಿವೆ. ಎಲ್ಲ ಬೆಳೆಗಳಂತೆ ತಂಬಾಕಿಗೂ ಮುಕ್ತ ಮಾರುಕಟ್ಟೆ ವ್ಯವಸ್ಥೆಗೆ ತಂದು, ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ಮಾಡಿಕೊಡುವವರೆಗೆ ತಂಬಾಕು ಬೆಳೆೆಗಾರರ ಬದುಕು ಅತಂತ್ರವಾಗಿ ಸಾಗುತ್ತದೆ’ ಎಂದರು.

ಭಾರತೀಯ ರೈತ ಸಂಘದ ಉಪಾಧ್ಯಕ್ಷ ಮಂಜೇಗೌಡ, ಹರಳಹಳ್ಳಿ ತಮ್ಮೇಗೌಡ, ಸಂಜು, ಜಗದೀಶ್, ರಮೇಶ್, ದೋರೆ, ವೇದಾನಂದ, ವೀರೇಂದ್ರ, ಮಂಜೇಗೌಡ, ಹಾಸನ ರೈತ ಮುಖಂಡ ಸಣ್ಣೇಗೌಡ, ರಮೇಶ್ ರಾಜು, ಸೋಮಶೇಖರ್, ಮಲ್ಲಪ್ಪ, ಚಂದ್ರಶೇಖರ್, ನಾರಾಯಣಸ್ವಾಮಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260408-36-1241457306

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.