ರಾಮನಾಥಪುರದಲ್ಲಿ ಮನೆಗಳಿಗೆ ನುಗ್ಗಿದ ನೀರು

7

ರಾಮನಾಥಪುರದಲ್ಲಿ ಮನೆಗಳಿಗೆ ನುಗ್ಗಿದ ನೀರು

Published:
Updated:
Deccan Herald

ಕೊಣನೂರು: ಸತತ ಮಳೆಯಿಂದ ಕಾವೇರಿ ನದಿದಂಡೆಯಲ್ಲಿನ ರಾಮನಾಥಪುರದ ಆರು ಮನೆಗಳಿಗೆ ನೀರು ನುಗ್ಗಿದೆ.

30 ವರ್ಷಗಳ ಬಳಿಕ ಮೊದಲ ಬಾರಿಗೆ ಕಾವೇರಿನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಗಾಯಿತ್ರಮ್ಮ, ಸೋಮಣ್ಣ, ರಿಯಾಜ್, ಗೌರಮ್ಮ, ಕೃಷ್ಣನಾಯ್ಕ ಎಂಬುವವರ ಮನೆಗಳಿಗೆ ನೀರು ನುಗ್ಗಿದ್ದು, ಆತಂಕಕ್ಕೆ ಒಳಗಾಗಿದ್ದಾರೆ. ಮನೆಯ ಆಹಾರ ಪದಾರ್ಥಗಳು ನೀರಿನಲ್ಲಿ ತೇಲಿ ಹೋದವು. ಕೆಲ ಸಾಮಾನುಗಳನ್ನು ಹೊರಕ್ಕೆ ತೆಗೆದರು. ಸ್ಥಳಕ್ಕೆ ತಹಶೀಲ್ದಾರ್ ನಂದೀಶ್ ಭೇಟ ನೀಡಿ, ಪರಿಶೀಲಿಸಿದರು.

ನೀರಿನ ಮಟ್ಟ ಏರುತ್ತಿದ್ದು, ಲಕ್ಷ್ಮಣೇಶ್ವರ ದೇವಾಲಯದ ಹೊಸ್ತಿಲನ ಮಟ್ಟ ತಲುಪಿದೆ.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !