ನಂಜದೇವರ ಕಾವಲು ಗ್ರಾಮ: ರಾಮರಸ ಕುಡಿದು ಒಂಬತ್ತು ಮಂದಿ ಅಸ್ವಸ್ಥ

ಶನಿವಾರ, ಏಪ್ರಿಲ್ 20, 2019
27 °C
ಜಿಲ್ಲಾಸ್ಪತ್ರೆಗೆ ದಾಖಲು, ಪ್ರಾಣಾಪಾಯದಿಂದ ಪಾರು

ನಂಜದೇವರ ಕಾವಲು ಗ್ರಾಮ: ರಾಮರಸ ಕುಡಿದು ಒಂಬತ್ತು ಮಂದಿ ಅಸ್ವಸ್ಥ

Published:
Updated:
Prajavani

ಹಾಸನ: ರಾಮನವಮಿ ಅಂಗವಾಗಿ ತಯಾರಿಸಿದ್ದ ರಾಮರಸ ಕುಡಿದು ಅಸ್ವಸ್ಥಗೊಂಡಿದ್ದ ಒಂಬತ್ತು ಮಂದಿಯನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ತಾಲ್ಲೂಕಿನ ಕಸಬಾ ಹೋಬಳಿಯ ನಂಜದೇವರ ಕಾವಲು ಗ್ರಾಮದಲ್ಲಿ ಶನಿವಾರ ರಾಮನವಮಿ ಆಚರಣೆ ವೇಳೆ ರಾಮರಸ ಕುಡಿದ ಹಲವರಿಗೆ ಹೊಟ್ಟೆ ನೋವು ಕಾಣಿಸಿಕೊಂಡು ವಾಂತಿಯಾಗಿದೆ. ಇವರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ, ಚಿಕಿತ್ಸೆ ಕೊಡಿಸಲಾಗಿದೆ.

‘ಆರಂಭದಲ್ಲಿ ರಾಮರಸ ಕುಡಿದವರಿಗೆ ಯಾವುದೇ ತೊಂದರೆ ಆಗಿಲ್ಲ. ಕೊನೆಯಲ್ಲಿ ಕುಡಿದವರಿಗೆ ಹೊಟ್ಟೆ ನೋವು, ಸುಸ್ತು ಕಾಣಿಸಿಕೊಂಡಿದೆ, ಕೆಲವರಿಗೆ ವಾಂತಿಯಾಗಿದೆ. ಎಲ್ಲರಿಗೂ ಚಿಕಿತ್ಸೆ ನೀಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾಮರಸವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದು ಜಿಲ್ಲಾ ಶಸ್ತ್ರಚಿಕಿತ್ಸ ಡಾ.ಶಂಕರ್‌ ತಿಳಿಸಿದರು.

 

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !