ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ರಸ್ತೆ ಬದಿ ಕಸ ತೆರವಿಗೆ ಆಗ್ರಹ

ರಾಜಘಟ್ಟ ಬಳಿ ಜೆಡಿಎಸ್‌ ಕಾರ್ಯಕರ್ತರ ಪ್ರತಿಭಟನೆ
Last Updated 7 ಫೆಬ್ರುವರಿ 2022, 5:11 IST
ಅಕ್ಷರ ಗಾತ್ರ

ಹಾಸನ: ರಸ್ತೆಬದಿ ಹಾಕಿರುವ ಕಸ ತೆರವು ಮಾಡಿ, ಮತ್ತೆ ಕಸ ಹಾಕದಂತೆ ನಗರಸಭೆ ಹಾಗೂ ಶಾಸಕರು ಗಮನಹರಿಸಬೇಕು ಎಂದು ಆಗ್ರಹಿಸಿ ಜೆಡಿಎಸ್‌ ಮುಖಂಡ ಪ್ರಸಾದ್‌ಗೌಡ ನೇತೃತ್ವದಲ್ಲಿ ರಾಜಘಟ್ಟ ನಿವಾಸಿಗಳು ಭಾನುವಾರ ಪ್ರತಿಭಟನೆ ನಡೆಸಿದರು.

ಜೆಡಿಎಸ್‌ ಮುಖಂಡ ಪ್ರಸಾದ್‌ ಗೌಡ ಮಾತನಾಡಿ, ‘ನಗರಸಭೆ 1ನೇ ವಾರ್ಡ್‌ ಗೆ ಸೇರುವ ರಾಜಘಟ್ಟದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಕಾಣುತ್ತಿದ್ದೇವೆ. ಪೃಥ್ವಿ ಚಿತ್ರ ಮಂದಿರದಿಂದ ಹೊಸ ಬಸ್‌ ನಿಲ್ದಾಣದ ಅಂಡರ್ ಪಾಸ್‌ ವರೆಗೂ ರಸ್ತೆಯ ಎರಡೂ ಬದಿಯಲ್ಲಿ ಕೋಳಿ ಅಂಗಡಿ ತ್ಯಾಜ್ಯ, ಹಳೆ ಕಟ್ಟಡ ತ್ಯಾಜ್ಯ ಹಾಗೂ ಇತರೆ ಕಸಗಳನ್ನು ಸುರಿಯುತ್ತಿದ್ದಾರೆ’ ಎಂದರು.

‘ರಾಜಘಟ್ಟ ಬಡಾವಣೆಯಪ್ರವೇಶ ದ್ವಾರದಲ್ಲಿಯೇಈ ರೀತಿ ಕಸ ಸುರಿದಿರುವುದರಿಂದ ಅಲ್ಲಿನ ನಾಗರಿಕರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ರಾತ್ರಿ ವೇಳೆಯಲ್ಲಿ ಈ ಸ್ಥಳಕ್ಕೆ ಕಿಡಿಗೇಡಿಗಳು ಕಸ ತಂದು ಸುರಿದು ಹೋಗುತ್ತಿದ್ದಾರೆ. ಅಂಥವರನ್ನು ಪತ್ತೆ ಮಾಡಿ ನಗರಸಭೆ ಅಧಿಕಾರಿಗಳು ದಂಡ ವಿಧಿಸಬೇಕು’ ಎಂದು ಆಗ್ರಹಿಸಿದರು.

‘ನಗರಸಭೆ 1ನೇ ವಾರ್ಡ್‌ನಿಂದ ಬಿಜೆಪಿ ಅಭ್ಯರ್ಥಿ ಆಯ್ಕೆಯಾಗಿದ್ದಾರೆ. ಹಾಸನ ಕ್ಷೇತ್ರದಲ್ಲಿಯೂ ಬಿಜೆಪಿಯ ಶಾಸಕರೇ ಇದ್ದು, ಈ ವಾರ್ಡ್‌ನ ಕಸದ ಸಮಸ್ಯೆಗೆ ಪರಿಹಾರ ನೀಡಬೇಕು. ಅಭಿವೃದ್ಧಿ ಕೆಲಸಗಳ ಜೊತೆಗೆ ಜನರ ಆರೋಗ್ಯವೂ ಮುಖ್ಯವಾಗಿದೆ. ಹಾಗಾಗಿ ಕೂಡಲೇ ರಸ್ತೆ ಬದಿ ಇರುವ ಕಸವನ್ನು ತೆರವು ಮಾಡಬೇಕು’ ಎಂದು ಒತ್ತಾಯಿಸಿದರು.

‘ನಗರಸಭೆಯಿಂದ ಕಸ ನಿರ್ವಹಣೆ ಮಾಡಲಿ ಆಗದಿದ್ದರೆ ಖಾಸಗಿ ಕಂಪನಿಗಳಿಗೆ ಗುತ್ತಿಗೆ ನೀಡಲಿ. ಕಸವನ್ನು ಬೇರ್ಪಡಿಸಿ, ಗೊಬ್ಬರ ಬಯೋ ಗ್ಯಾಸ್‌ ತಯಾರು ಮಾಡಬಹುದು’ ಎಂದರು.

ರಾಜಘಟ್ಟ ಜೆಡಿಎಸ್‌ ಕಾರ್ಯಕರ್ತ ಜಗದೀಶ್‌ ಮಾತನಾಡಿ, ‘ಕಳೆದ 6 ವರ್ಷಗಳಿಂದ ಹೋರಾಟ ಮಾಡಿದರೂ ಈ ಭಾಗದಲ್ಲಿ ಕಸ ಹಾಕುವುದು ನಿಂತಿಲ್ಲ. ಸಾರ್ವಜನಿಕರು ಸಂಚಾರಕ್ಕೆ ಸಮಸ್ಯೆ ಆಗುತ್ತಿದೆ. ರಾಜಘಟ್ಟದಲ್ಲಿ ಇರುವ ಲಾರಿ ನಿಲ್ದಾಣದಿಂದ ತುಂಬಾ ಸಮಸ್ಯೆ ಉಂಟಾಗುತ್ತಿದೆ. ಬೇಸಿಗೆಯಲ್ಲಿ ದೂಳು ಹಾಗೂ ಮಳೆಗಾಲದಲ್ಲಿ ಕೆಸರುಮಯವಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಸೇರಿದಂತೆ ಹಲವು ಅಧಿಕಾರಿಗಳಿಗೆ ಮನವಿ ಕೊಟ್ಟರೂ ಲಾರಿ ನಿಲ್ದಾಣ ಸ್ಥಳಾಂತರಕ್ಕೆ ಕ್ರಮ ಕೈಗೊಂಡಿಲ್ಲ’ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಸೈನಿಕ ಸಂಘದ ಜಿ.ಎನ್. ನಾಗರಾಜು, ಜೆ.ಡಿ ಬಸವರಾಜು, ಕಾಳೇಗೌಡ ಹಾಗೂ ರಾಜಘಟ್ಟ ನಿವಾಸಿಗಳಾದ ಮಂಜುನಾಥ, ಧರ್ಮೇಶ್, ಚಂದ್ರಗೌಡ, ಅವಿನಾಶ್, ನಿಂಗೇಗೌಡ ರಮೇಶ್ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT