ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವೇಗೌಡರ ಭಾವಚಿತ್ರ ತೆರವು: ಬಿಜೆಪಿಯಿಂದ ಚಿಲ್ಲರೆ ರಾಜಕಾರಣ; ಸ್ವರೂಪ್‌

Last Updated 21 ಆಗಸ್ಟ್ 2021, 14:27 IST
ಅಕ್ಷರ ಗಾತ್ರ

ಹಾಸನ: ‘ನಗರಸಭೆ ಅಧ್ಯಕ್ಷರ ಕೊಠಡಿಯಲ್ಲಿದ್ದ ಎಚ್‌.ಡಿ.ದೇವೇಗೌಡರ ಭಾವಚಿತ್ರ ತೆರವು ಮಾಡಿ, ಅದೇಜಾಗದಲ್ಲಿ ಕ್ಷೇತ್ರದ ಶಾಸಕ ಪ್ರೀತಂ ಗೌಡರ ಭಾವಚಿತ್ರ ಹಾಕುವ ಮೂಲಕ ಬಿಜೆಪಿ ಚಿಲ್ಲರೆ ರಾಜಕೀಯಮಾಡಿದೆ’ ಎಂದು ಸಂಜೀವಿನಿ ಸಹಕಾರಿ ಆಸ್ಪತ್ರೆ ಅಧ್ಯಕ್ಷ ಎಚ್.ಪಿ. ಸ್ವರೂಪ್ ಆರೋಪಿಸಿದರು.

‘ದೇವೇಗೌಡರ ಭಾವಚಿತ್ರ ತೆರವು ಮಾಡಿದ್ದರ ಬಗ್ಗೆ ನಗರಸಭೆ ಸಾಮಾನ್ಯ ಸಭೆಯಲ್ಲಿ ವಾಗ್ವಾದನಡೆದಿದೆ. ನಗರಸಭೆ ಅಧ್ಯಕ್ಷ ಮೋಹನ್ ಅವರು ಕೊಠಡಿ ನವೀಕರಣಕ್ಕಾಗಿತೆಗೆಯಲಾಗಿತ್ತು ಎಂದು ಹೇಳಿದ್ದಾರೆ. ಜೆಡಿಎಸ್‌ ಸದಸ್ಯರು ಪ್ರಶ್ನಿಸಿದಾಗಲೇಮತ್ತೆ ಅದೇ ಸ್ಥಳದಲ್ಲಿ ಭಾವಚಿತ್ರ ಅಳವಡಿಸಿದ್ದರೆಸಭೆಯ ಸಮಯ ವ್ಯರ್ಥ ಮಾಡುತ್ತಿರಲಿಲ್ಲ. ಪದೇ ಪದೇ ದೇವೇಗೌಡರಿಗೆ ಅಪಮಾನ ಮಾಡುವುದು ಮುಂದುವರಿದರೇ ಜೆಡಿಎಸ್ ಪಕ್ಷದಿಂದ ಪ್ರತಿಭಟನೆ ಮಾಡಲಾಗುವುದು’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

‘ಹಾಸನ ಕ್ಷೇತ್ರದಲ್ಲಿ ಶಾಸಕರಾಗಿದ್ದ ಹನುಮೇಗೌಡ, ಎಚ್‌.ಎಸ್‌. ಪ್ರಕಾಶ್‌, ಬಿ.ಪಿ. ಕರಿಗೌಡ ಅವರು ಈ ರೀತಿಯ ರಾಜಕಾರಣ ಮಾಡಿರಲಿಲ್ಲ. ಪ್ರಥಮ ಬಾರಿಗೆ ಶಾಸಕರಾಗಿರುವ ಪ್ರೀತಂ ಜೆ. ಗೌಡ ಅವರ ಆಸ್ತಿ ಎಷ್ಟು ಎಂಬುದು ತನಿಖೆಯಾಗಲಿ. ಆದಾಯದ ಮೂಲ ಯಾವುದು ಎಂಬುದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲಿ. ಸಣ್ಣ ಸೊಸೈಟಿ ಚುನಾವಣೆ ನಡೆದರೂ ಒಂದು ಮತಕ್ಕೆ ₹ 2 ಸಾವಿರ ನೀಡಲಾಗುತ್ತಿದೆ. ಇಷ್ಟೊಂದು ಹಣ ಹೇಗೆ ಬಂತು’ ಎಂದು ಪ್ರಶ್ನಿಸಿದರು.

‘ಜಿಲ್ಲೆಯಲ್ಲಿ ಜೆಡಿಎಸ್‌, ಕಾಂಗ್ರೆಸ್‌ ತ್ಯಜಿಸಿ ಬಿಜೆಪಿ ಸೇರಿದ್ದಾರೋ ಅವರು ಯಾರು ಮನಪೂರ್ವಕವಾಗಿಹೋಗಿಲ್ಲ’ ಎಂದರು.

ನಗರಸಭೆ ಸದಸ್ಯ ಕ್ರಾಂತಿ ಪ್ರಸಾದ್ ತ್ಯಾಗಿ ಮಾತನಾಡಿ, ‘ನಗರದ ಮಹಾರಾಜ ಉದ್ಯಾನದ ಬಳಿನಿರ್ಮಿಸಿರುವ ಫುಡ್‌ಕೋರ್ಟ್, ಆಟೊ, ಟ್ಯಾಕ್ಸಿ ನಿಲ್ದಾಣಗಳಲ್ಲಿಶೆಡ್‌ನಿರ್ಮಿಸಲಾಗಿದೆ. ಸಾರ್ವಜನಿಕರತೆರಿಗೆ ಹಣದಿಂದ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಆದರೆ, ಶಾಸಕರ ಕೊಡುಗೆ ಎಂದು ಅವರಭಾವಚಿತ್ರ ಹಾಕಿಸಿಕೊಂಡಿದ್ದಾರೆ. ಆಟೊ, ಟ್ಯಾಕ್ಸಿ ನಿಲ್ದಾಣ ನಿರ್ಮಾಣಕ್ಕೆ ನಗರಸಭೆಯಿಂದ ಅನುಮತಿ ಪಡೆದಿಲ್ಲ. ಜಿಲ್ಲಾಡಳಿತಕ್ಕೆ ಈ ಬಗ್ಗೆ ಲಿಖಿತ ದೂರು ನೀಡಲಾಗಿದೆ. ಜಿಲ್ಲಾಧಿಕಾರಿ ಕಾಲಾವಕಾಶಕೇಳಿದ್ದಾರೆ’ ಎಂದರು.

‘ಶಾಸಕ ಪ್ರೀತಂ ಅವರಂತೆ ಕಾಂಕ್ರೀಟ್‌ ರಸ್ತೆ, ಚರಂಡಿ ನಿರ್ಮಿಸಿರುವ ಕಡೆ ನಗರಸಭೆ ಸದಸ್ಯರ ಕೊಡುಗೆ ಎಂದು ಅವರ ಫೋಟೊ ಹಾಕಲು ಸಾಧ್ಯವೆ’ ಎಂದು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ನಗರಸಭೆ ಸದಸ್ಯರಾದ ವಾಸುದೇವ್, ಪ್ರಶಾಂತ್ ನಾಗರಾಜ್‌, ರಫೀಕ್, ಮಾಜಿಸದಸ್ಯ ಮಹೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT