ಸಾಹಿತಿಗಳಿಗೆ ವೈಜ್ಞಾನಿಕ ಒಳನೋಟ ಅರಿವಿರಲಿ

7
ಮನೆಮನೆ ಕವಿಗೋಷ್ಠಿಯಲ್ಲಿ ಎಚ್.ಆರ್.ಸ್ವಾಮಿ ಅಭಿಮತ

ಸಾಹಿತಿಗಳಿಗೆ ವೈಜ್ಞಾನಿಕ ಒಳನೋಟ ಅರಿವಿರಲಿ

Published:
Updated:
Deccan Herald

ಹಾಸನ : ಸಾಹಿತಿಗಳಿಗೆ ವೈಜ್ಞಾನಿಕ ಹಾಗೂ ವೈಚಾರಿಕ ಒಳನೋಟಗಳ ಅರಿವಿರಬೇಕು. ಇಲ್ಲವಾದರೆ ಸಾಮಾಜಿಕ ವಾಸ್ತವತೆಯನ್ನು ಲೇಖನಿಯಲ್ಲಿ ಹೇಳಲು ಸಾಧ್ಯವಿಲ್ಲ ಎಂದು ಸಾಹಿತಿ ಎಚ್.ಆರ್.ಸ್ವಾಮಿ ಅಭಿಪ್ರಾಯಪಟ್ಟರು.

ಭಾರತ ಜ್ಞಾನ ವಿಜ್ಞಾನ ಸಮಿತಿ ಆಶ್ರಯದಲ್ಲಿ ನಡೆದ ಮನೆ ಮನೆ ಕವಿಗೋಷ್ಠಿ ಕಾರ್ಯಕ್ರಮದಲ್ಲಿ “ವೈಜ್ಞಾನಿಕ ದೃಷ್ಠಿಕೋನದಲ್ಲಿ ಸಾಹಿತ್ಯ ಕಟ್ಟುವಿಕೆ” ಎಂಬ ವಿಷಯ ಕುರಿತು ಮಾತನಾಡಿದರು.

ಕನ್ನಡದಲ್ಲಿ ಮೊಟ್ಟ ಮೊದಲು ಶರಣರ ವಚನ ಸಾಹಿತ್ಯದಿಂದ ವೈಜ್ಞಾನಿಕ, ವೈಚಾರಿಕ ಸಾಹಿತ್ಯ ಹರಿದು ಬಂತು. ವಚನ ಚಳವಳಿ ಜನಸಾಮಾನ್ಯರೆಡೆಗೆ ಕೊಂಡೊಯ್ದಿತು. ಇಲ್ಲಿ ನೇರ, ಪ್ರಾಯೋಗಿಕ ಹಾಗೂ ವಸ್ತುನಿಷ್ಠ ಸಾಹಿತ್ಯ ಸೃಷ್ಠಿಯಾಯಿತು. ವೃತ್ತಿ ಗೌರವ, ಲಿಂಗ ಸಮಾನತೆ, ಸಾಮಾಜಿಕ ನ್ಯಾಯ ಅಂಶಗಳ ಮೇಲೆ ಬೆಳಕು ಚೆಲ್ಲಿತು. ಹಿಂದಿನ ಕಾಲದಲ್ಲಿ ಸಂಸ್ಕೃತ ನಾಟಕಗಳು ಬಹಳ ಪ್ರಚಲಿತದಲ್ಲಿದ್ದವು. ಇಲ್ಲಿ ಸಾಹಿತ್ಯ ಹಾಗೂ ಸಮಾಜಕ್ಕೆ ಗ್ರಹಣ ಬಡಿದಿರುವುದನ್ನು ಕಾಣುತ್ತೇವೆ. ಕವಿಗಳು ಕೆಲವೊಮ್ಮೆ ಉತ್ಪ್ರೇಕ್ಷೆ ಮಾಡುವ ಭರದಲ್ಲಿ ಸತ್ಯದಷ್ಠೆ ಹೊಳಪನ್ನು ಮಿಥ್ಯೆಕ್ಕೂ ನೀಡುತ್ತಾರೆ ಎಂದು ನುಡಿದರು.

ಆಧುನಿಕ ಸಾಹಿತ್ಯದಲ್ಲಿ ಕುವೆಂಪು ವೈಚಾರಿಕ ಸಾಹಿತಿಯಾಗಿ ಕಾಣಿಸುತ್ತಾರೆ. ನಂತರ ಬಂದ ದಲಿತ, ಬಂಡಾಯ ಸಾಹಿತ್ಯದಲ್ಲಿ ಲೇಖಕಿಯರು ಬೆಳಕಿಗೆ ಬಂದರು. ಇಲ್ಲಿ ಮುಖ್ಯವಾಗಿ ನೆಲದನಿ ಪಲ್ಲವಿಸಿತು ಎಂದರು.

ನಂತರ ಉಪನ್ಯಾಸದ ಮೇಲೆ ನಡೆದ ಚರ್ಚೆಯಲ್ಲಿ ಜಯದೇವಪ್ಪ, ಲಕ್ಷ್ಮೀದೇವಿದಾಸಪ್ಪ, ಶ್ರೀವಿಜಯಹಾಸನ, ಸುರೇಶ್ ಗುರೂಜಿ, ಅಹಮದ್ ಹಗರೆ, ಎಚ್.ಟಿ.ಗುರುರಾಜ್, ಎಚ್.ಎಸ್.ಬಸವರಾಜ್, ಎನ್.ಎಲ್. ಚನ್ನೇಗೌಡ ಪಾಲ್ಗೊಂಡರು.

ಕವಿಗೋಷ್ಠಿಯಲ್ಲಿ ವೈ.ಬಿ.ಕಾಂತರಾಜ್, ಲಕ್ಷ್ಮೀದೇವಿ ದಾಸಪ್ಪ, ಹೇಮಾವತಿ, ಬಸವರಾಜ್ ಎಚ್.ಎಸ್, ನೀಲಾವತಿ ಸಿ.ಎನ್, ಪಲ್ಲವಿ ಬೇಲೂರು, ಕೆ.ಸಿ.ಗೀತ, ಬಿ.ಎಸ್.ವನಜಾಕ್ಷಿ, ಕುಮಾರ್ ಛಲವಾದಿ, ಕೆ.ಸಿ.ರಘು ಹೊಸೂರ್, ವಸಂತ ಬಿದರೆ, ದೃವ ಟಿ, ರೇಖಾ ಪ್ರಕಾಶ್, ಪ್ರಮೀಳ, ಡಾ.ಶಾಲಿನಿ ವಿ.ಎಲ್, ಎನ್.ಎಲ್.ಚನ್ನೇಗೌಡ, ದ್ಯಾವನೂರು ಮಂಜುನಾಥ್ ಕಾವ್ಯ ವಾಚನ ಮಾಡಿದರು.

ರಾಜ್ಯ ಬಿಜಿವಿಎಸ್ ಉಪಾಧ್ಯಕ್ಷ ಅಹಮದ್ ಹಗರೆ, ಬಿಜಿವಿಎಸ್ ಜಂಟಿ ಕಾರ್ಯದರ್ಶಿ ಕಾಂತರಾಜ್ ಉಪಾಧ್ಯಕ್ಷ ಗೋಪಾಲಕೃಷ್ಣ, ಕವಯಿತ್ರಿ ಎಚ್.ವೇದಶ್ರೀರಾಜ್, ಸಿ.ವಿ.ಶಿವಾಗ್ನಿರಾಜ್, ಪ್ರಕಾಶ್, ಲಕ್ಷ್ಮೀ ಪ್ರಕಾಶ, ಬಿ.ವೇದಾವತಿ, ಸಿ.ಲಕ್ಷ್ಮಪ್ಪ, ಜಯದೇವಪ್ಪ, ಮಾರುತಿ ಬೇಲೂರು ಹಾಜರಿದ್ದರು.
ಸಂಚಾಲಕ ಕೊಟ್ರೇಶ್ ಎಸ್.ಉಪ್ಪಾರ್ ಸ್ವಾಗತಿಸಿ, ನಿರೂಪಿಸಿದರು, ಬಿಜಿವಿಎಸ್ ಕಾರ್ಯದರ್ಶಿ ಮಮತ ಶಿವು ವಂದಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !