ಸಕಲೇಶಫುರ: ತಾಲ್ಲೂಕಿನ ಶುಕ್ರವಾರಸಂತೆ ಸಮೀಪದ ಈಚಲಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಕಾಳಿಕಾ ದುರ್ಗಾಪರಮೇಶ್ವರಿ ವಿಶ್ವಕರ್ಮ, ಮಹಾಗಣಪತಿ, ನವಗ್ರಹ ದೇವತೆಗಳ ಪ್ರತಿಷ್ಠಾಪನಾ ಮಹೋತ್ಸವ ಏ.21ರಿಂದ ಏ.24ರ ವರೆಗೆ ನಡೆಯಲಿದೆ.

ಏ.22ರಂದು ಬೆಳಿಗ್ಗೆ 8ರಿಂದ ಮಧ್ಯಾಹ್ನ 12ರ ವರೆಗೆ ನವಗ್ರಹ ಹೋಮ, ಮೃತ್ಯುಂಜಯ ಹೋಮ, ವಿಶ್ವಕರ್ಮ ಹೋಮ, ದುರ್ಗಾಹೋಮ, ಮಹಾಗಣಪತಿ ಹೋಮ, ವಸ್ತ್ರಾಧಿವಾಸ, ಪುಷ್ಪಾಧಿಮಾಸ ನಡೆಯಲಿದೆ. ಸಂಜೆ 5 ರಿಂದ 9ರವರೆಗೆ ಬ್ರಹ್ಮ ಕಲಶ ಸ್ಥಾಪನೆ, ಅಧಿವಾಸ ಹೋಮಗಳು, ವಿಗ್ರಹಗಳಿಗೆ ಅಷ್ಟಬಂಧನ ನಡೆಯಲಿದೆ.

ಏ.23ರಂದು ಬೆಳಿಗ್ಗೆ 4ರಿಂದ ಬೆ.11ರ ವರೆಗೆ ನೇತ್ರೋನಿಲನ, ಪ್ರಾಣಪ್ರತಿಷ್ಠೆ, ಗೋ ಪೂಜೆ, ನಿರೀಕ್ಷಣೆ, ಮಹಾಗಣಪತಿ ಪ್ರಾರ್ಥನೆ, ಕರ್ಮಣ ಪುಣ್ಯಾಹ ವಾಚನ, ದೇವರ ಮೂಲಮಂತ್ರ ಹೋಮ, ಕಲಾ ಹೋಮ, ತತ್ವ ಹೋಮ, ಮಹಾಪೂರ್ಣಾಹುತಿ, ಪಂಚಾಮೃತ ಅಭಿಷೇಕ, ಪೂರ್ವಕ ಮಹಾಕುಂಭಾಭಿಷೇಕ, ಮಹಾಲಂಕಾರ, ಮಹಾ ಮಂಗಳಾರತಿ ನಡೆಯಲಿದೆ. ಬೆಳಿಗ್ಗೆ 11.30ರಿಂದ ಅರೆಮಾದನಹಳ್ಳಿ ವಿಶ್ವಕರ್ಮ ಜಗದ್ಗುರು ಶಿವಸುಜ್ಞಾನ ತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶಾಸಕ ಸಿಮೆಂಟ್ ಮಂಜು ದೇವಸ್ಥಾನ ಲೋಕಾರ್ಪಣೆ ಮಾಡುವರು. ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಎಚ್.ಪಿ. ಭೋಗರಾಜಾಚಾರ್ ಅಧ್ಯಕ್ಷತೆ ವಹಿಸುವರು. ಸಂಸ್ಥಾಪಕರಾದ ಪುಷ್ಪಾವತಿ ಮಂಜುನಾಥ್ ಆಚಾರ್ಯ ಭಾಗವಹಿಸಲಿದ್ದಾರೆ.

ಏ.24ರಂದು ಬೆಳಿಗ್ಗೆ 9ರಿಂದ 11ರ ವರೆಗೆ ಚಂಡಿಕಾ ಹೋಮ ನಡೆಯಲಿದೆ ಎಂದು ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಎಚ್.ಪಿ. ಭೋಗರಾಜಾಚಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260422-36-591813764

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.