ಸಕಲೇಶಪುರ: ‘ಸಾಮಾಜಿಕ ಹೋರಾಟಗಾರ ಎಂದು ಹೇಳಿಕೊಂಡು ಪುರಸಭಾ ಕಚೇರಿಗೆ ನುಗ್ಗಿ ಅಧಿಕಾರಿ ಹಾಗೂ ಸಿಬ್ಬಂದಿಗೆ ಬೆದರಿಕೆ ಒಡ್ಡಿ ಚಪ್ಪಲಿ ತೋರಿಸಿ ಕತ್ಯವ್ಯಕ್ಕೆ ಅಡ್ಡಿಪಡಿಸಿರುವ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿ ಪುರಸಭಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಗುರುವಾರ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.

‘ಮೇ 15ರಂದು ಮಧ್ಯಾಹ್ನ ಪ್ರೀತಂ ಹಾಗೂ ಇತರರ ಗುಂಪು ಕಚೇರಿಯಲ್ಲಿ ಗದ್ದಲ ಎಬ್ಬಿಸಿದ್ದಾರೆ. ಕತ್ಯವ್ಯದಲ್ಲಿದ್ದ ಸಮುದಾಯ ಸಂಘಟನಾಧಿಕಾರಿ ನಟರಾಜ್ ಅವರ ಮೇಲೆ ಏರು ಧ್ವನಿಯಲ್ಲಿ ಬೆದರಿಕೆ ಒಡ್ಡಿ ಚಪ್ಪಲಿ ತೋರಿಸಿದ್ದಾರೆ. ಅಲ್ಲದೆ ಸಾರ್ವಜನಿಕ ಕೆಲಸಕ್ಕೆ ಅಡ್ಡಿಪಡಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಪ್ರೀತಂ ಹಾಗೂ ಅವರೊಂದಿಗೆ ಕಚೇರಿಗೆ ಬಂದು ಕೂಗಾಟ ನಡೆಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಪುರಸಭಾ ಮುಖ್ಯಾಧಿಕಾರಿ ಮಹೇಶ್ವರಪ್ಪ ಹಾಗೂ ಸಿಬ್ಬಂದಿ ಒತ್ತಾಯಿಸಿದರು.

ಪುರಸಭಾ ಅಧಿಕಾರಿ ಶ್ರೀನಿವಾಸ್, ಪುರಸಭೆ ವ್ಯವಸ್ಥಾಪಕ ಮಹೇಶ್, ಸಮುದಾಯ ಸಂಘಟನಾ ಅಧಿಕಾರಿ ನಟರಾಜ್, ಕಂದಾಯ ಅಧಿಕಾರಿ ಮಂಜೇಗೌಡ, ಜೆಇ ಸಚಿನ್, ನೌಕರರ ಸಂಘದ ಕಾರ್ಯದರ್ಶಿ ಬಸವರಾಜ, ಸಿಬ್ಬಂದಿಗಳಾದ ಸುಂದರೇಶ್, ಗಂಗಾಧರ್, ರೇವಣ್ಣ, ವರದರಾಜು ಹಾಗೂ ಪೌರಕಾರ್ಮಿಕರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-36-1005772499

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.