ಸಕಲೇಶಪುರ: ತಾಲ್ಲೂಕಿನ ಸುಳ್ಳಕ್ಕಿ ಗ್ರಾಮದ ಭದ್ರಕಾಳಿ ಸಮೇತ ಕುದುರಂಗಿ ವೀರಭದ್ರಸ್ವಾಮಿ ಬ್ರಹ್ಮ ರಥೋತ್ಸವ ಸಾವಿರಾರು ಭಕ್ತರ ನಡುವೆ ಮಂಗಳವಾರ ಅದ್ಧೂರಿಯಾಗಿ ನಡೆಯಿತು.

ಬೆಳಿಗ್ಗೆ 8.30ಕ್ಕೆ ಪುಷ್ಪರಥೋತ್ಸವ, 11ಕ್ಕೆ ರಾಜ್ಯೋತ್ಸವ ನಡೆಯಿತು. ಮಧ್ಯಾಹ್ನ 12ರಿಂದ ಉತ್ಸವ ಮೂರ್ತಿಗಳನ್ನು ದೇವಸ್ಥಾನದಿಂದ ವಾದ್ಯಗೋಷ್ಠಿಗಳೊಂದಿಗೆ ಭಕ್ತರು ರಥದ ಮುಂಭಾಗಕ್ಕೆ ತಂದರು. ಉತ್ಸವ ಮೂರ್ತಿಗಳನ್ನು ಇಬ್ಬಡಿ ಗ್ರಾಮದ ರೈತ ಧರಣೇಶ್, ತಲೆಯ ಮೇಲೆ ಹೊತ್ತು ರಥದೊಳಗೆ ಇಟ್ಟರು.

ಭಕ್ತರು ರಥವನ್ನು ದೇವಸ್ಥಾನದ ಎಡಭಾಗದಿಂದ ಬಲಭಾಗಕ್ಕೆ ಹರ್ಷೋದ್ಗಾರದೊಂದಿಗೆ ಎಳೆದರು. ರಥ ಎಳೆಯುವ ಸಂದರ್ಭದಲ್ಲಿ ಮಹಿಳೆಯರು ಮಕ್ಕಳೂ ಸೇರಿದಂತೆ ಭಕ್ತರು ರಥದ ಕಳಸಕ್ಕೆ ಬಾಳೆಹಣ್ಣು ಎಸೆದರು.

ಶಾಸಕ ಸಿಮೆಂಟ್ ಮಂಜು ಪೂಜೆ ಸಲ್ಲಿಸಿದರು. ದೇವಸ್ಥಾನದ ಒಳಭಾಗದಲ್ಲಿಯೂ ಭಕ್ತರು ಸಾಲುಗಟ್ಟಿ ನಿಂತು ದೇವರ ದರ್ಶನ ಪಡೆದರು. ವಾಹನಗಳ ಗಿ ನಿಲುಗಡೆ ಮಾಡುವುದಕ್ಕೆ ಪೊಲೀಸರು ಹರಸಾಹಸ ಮಾಡುತ್ತಿದ್ದದ್ದು ಕಂಡು ಬಂತು. ಗ್ರಾಮಾಂತರ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಪಾಟೀಲ್ ಹಾಗೂ ಸಿಬ್ಬಂದಿ ಬಂದೋಬಸ್ತ್ ಮಾಡಿದ್ದರು.

ಸಕಲೇಶಪುರ, ಶುಕ್ರವಾರಸಂತೆ ಕಡೆಯ ಭಕ್ತರ ಅನುಕೂಲಕ್ಕಾಗಿ ಕೆಎಸ್ಆರ್ಟಿಸಿಯಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿತ್ತು.

ರಥೋತ್ಸವಕ್ಕೂ ಮೊದಲು ಸೋಮವಾರ ತಡರಾತ್ರಿ 12ಕ್ಕೆ ದೇವರಿಗೆ ಗಂಗಾಸ್ನಾನ ಹಾಗೂ ಕಂಕಣಧಾರಣ ನಡೆಯಿತು. ಏ.8ರಂದು ಬೆಳಿಗ್ಗೆ 11ಕ್ಕೆ ಪಲ್ಲಕ್ಕಿ ಉತ್ಸವ ಹಾಗೂ ಮಧ್ಯಾಹ್ನ 1ಕ್ಕೆ ಈಡುಗಾಯಿ ಸಮರ್ಪಣೆ ನಡೆಯಿತು.2 ದಿನಗಳ ಮಹೋತ್ಸವದಲ್ಲಿ ಭಕ್ತರಿಗೆ ಅರೆಕೆರೆಯ ಪುನೀತ್ ಬನ್ನಳ್ಳಿ ಅನ್ನಸಂತರ್ಪಣೆ ವ್ಯವಸ್ಥೆ ಮಾಡಿದ್ದರು.

ಕುದರಂಗಿ, ಸುಳ್ಳಕ್ಕಿ, ಅರೆಕೆರೆ, ಬ್ಯಾಕರವಳ್ಳಿ, ನಲ್ಲೂಳ್ಳಿ, ಕಾಮನಹಳ್ಳಿ, ನಡಹಳ್ಳಿ ಸೇರಿದಂತೆ ಸುತ್ತಲಿನ ಗ್ರಾಮಗಳ ಜನರು ಒಟ್ಟಾಗಿ ಈ ಜಾತ್ರೆಯನ್ನು ಆಚರಿಸುವುದು ವಿಶೇಷವಾಗಿದೆ.

ಬೆತ್ತದಿಂದ ರಥ ಎಳೆಯುವ ಪರಂಪರೆ: ಜಾತ್ರೆಯ ವಿಶಿಷ್ಟ ಸಂಪ್ರದಾಯವೆಂದರೆ ಪುಷ್ಪರಥ ಮತ್ತು ಬ್ರಹ್ಮರಥವನ್ನು ಬೆತ್ತದಿಂದ ಎಳೆಯುವ ಪದ್ಧತಿ. ಪಶ್ಚಿಮಘಟ್ಟದ ಅರಣ್ಯ ಪ್ರದೇಶಗಳಿಂದ ಉದ್ದನೆಯ ಬೆತ್ತವನ್ನು ಸಂಗ್ರಹಿಸಿ ತರುವ ಸಂಪ್ರದಾಯ ಇಂದಿಗೂ ಜೀವಂತವಾಗಿದ್ದು, ಕಾಮನಹಳ್ಳಿ ಗ್ರಾಮಸ್ಥರು ಪ್ರತಿ ಬಾರಿ ಭಕ್ತಿಯಿಂದ ನಿರ್ವಹಿಸುತ್ತಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260408-36-1255212191

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.