ಸಕಲೇಶಪುರ: ‘ತಾಲ್ಲೂಕಿನ ಬೆಟ್ಟದ ಭೈರವೇಶ್ವರಸ್ವಾಮಿ ದೇವಸ್ಥಾನ ಆವರಣದಲ್ಲಿ ಇನ್ನು ಮುಂದೆ ಯಾವುದೇ ಪ್ರೀವೆಡ್ಡಿಂಗ್ ಶೂಟಿಂಗ್, ರೀಲ್ಸ್ ಮಾಡದಂತೆ ತಾಲ್ಲೂಕು ಆಡಳಿತ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮಸ್ಥರು ಆಗ್ರಹಿಸಿದರು.

ಬೆಟ್ಟದ ಭೈರವೇಶ್ವರಸ್ವಾಮಿ ದೇವಸ್ಥಾನ ಆವರಣದಲ್ಲಿ ದೇವಾಲದಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಶನಿವಾರ ತುರ್ತು ಸಭೆ ನಡೆಸಿದರು.

ಪ್ರಿ–ವೆಡ್ಡಿಂಗ್ ಫೋಟೋ ಶೂಟ್ ಮಾಡುತ್ತಿದ್ದ ಛಾಯಾಗ್ರಾಹಕರು ಹಾಗೂ ದೇವಸ್ಥಾನಕ್ಕೆ ಬಂದಿದ್ದ ಮೂಡಿಗೆರೆ ತಾಲ್ಲೂಕಿನ ಭಕ್ತರ ನಡುವೆ ನಡೆದ ವಾಗ್ವಾದ, ಹಲ್ಲೆಗೆ ಮುಜರಾಯಿ ಇಲಾಖೆಯೇ ನೇರ ಹೊಣೆ ಎಂದು ಮಂಜುನಾಥ್ ಸಂಘಿ ಹಾಗೂ ರೆಸಾರ್ಟ್ ಮಾಲೀಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮಸ್ತಾರೆ ಲೋಕೇಶ್ ಆರೋಪಿಸಿದರು.

ಪಶ್ಚಿಮಘಟ್ಟದ ನಿಸರ್ಗದ ಮಡಿಲಿನಲ್ಲಿರುವ ಬೆಟ್ಟದ ಭೈರವೇಶ್ವರಸ್ವಾಮಿ ದೇವಸ್ಥಾನಕ್ಕೆ ತನ್ನದೇ ಆದ ಐತಿಹಾಸಿಕ ಹಿನ್ನೆಲೆ ಇದೆ. ಹಾಸನ, ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಹಲವು ಕುಟುಂಬಗಳ ಮನೆ ದೇವರು. ಇಂತಹ ಪವಿತ್ರವಾದ ದೇವಾಲಯ ಆವರಣದಲ್ಲಿ ನಿನ್ನೆ ನಡೆದ ಘಟನೆ ಹಾಗೂ ಈ ಹಿಂದೆಯೂ ಇಂತಹ ಹಲವು ಘಟನೆಗಳು ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದರು.

ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಲೋಕೇಶ್ ಮಾತನಾಡಿ, ಮಂದಿರ, ಮಸೀದಿ, ಚರ್ಚ್ಗೆ ಹೋಗುವುದು ಭಕ್ತಿ, ಶ್ರದ್ಧೆ, ಪೂಜೆ ಪ್ರಾರ್ಥನೆಗಾಗಿ. ಆದರೆ ಮುಜರಾಯಿ ಇಲಾಖೆಗೆ ಸೇರಿರುವ ಭೈರವೇಶ್ವರಸ್ವಾಮಿ ದೇವಸ್ಥಾನದಲ್ಲಿ ಹೇಳುವವರು, ಕೇಳುವವರು ಯಾರೂ ಇಲ್ಲದಂಥ ಸ್ಥಿತಿ ನಿರ್ಮಾಣ ಆಗಿದೆ. ಸರ್ಕಾರದಿಂದ ಈ ದೇವಸ್ಥಾನಕ್ಕೆ ಒಬ್ಬರು ವಾಚ್ಮನ್ ಗೈಡ್ ನೇಮಕ ಮಾಡಬೇಕು. ಗೇಟ್ ಅಳವಡಿಸಿ, ಬರುವ ಭಕ್ತರು ಪ್ರವಾಸಿಗರ ಮೇಲೆ ನಿಗಾ ಇಡಬೇಕು. ದೇವಸ್ಥಾನದ ಆವರಣದಲ್ಲಿ ನೀತಿ ನಿಯಮಗಳನ್ನು ರೂಪಿಸಿ ಕಟ್ಟುನಿಟ್ಟಿನಿಂದ ಪಾಲನೆ ಮಾಡಬೇಕು. ಆದರೆ ಇದ್ಯಾವುದೂ ಇಲ್ಲದೇ ಇರುವುದೇ ಇಂತಹ ಘಟನೆಗಳಿಗೆ ಕಾರಣವಾಗಿದೆ ಎಂದರು.

ದೇವಸ್ಥಾನದ ಬಾಗಿಲಿನವರೆಗೂ ಚಪ್ಪಲಿ, ಶೂ ಧರಿಸಿಕೊಂಡು ಬರುತ್ತಾರೆ. ಚಡ್ಡಿ, ಮಿಡಿ ಹಾಕಿಕೊಂಡು ಹೇಗೆ ಬೇಕು ಹಾಗೆ ಬರುತ್ತಾರೆ. ನಮ್ಮ ಮನೆ ದೇವರು, ನಾವು ಪೂಜಿಸುವ ದೇವಸ್ಥಾನದಲ್ಲಿ ನಿತ್ಯ ಇಂತಹ ದೃಶ್ಯಗಳನ್ನು ನೋಡಿ ಸಿಟ್ಟು, ಬೇಸರ ಆಗಿದೆ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಹಲವು ಬಾರಿ ತಾಲ್ಲೂಕು ಆಡಳಿತಕ್ಕೆ ಮನವಿ ಮಾಡಿದರೂ ಎಚ್ಚೆತ್ತುಕೊಂಡಿಲ್ಲ. ಇನ್ನು ಮುಂದೆ ವಿಡಿಯೋ ಶೂಟಿಂಗ್ಗಳನ್ನು ನಡೆಸದಂತೆ ಸುತ್ತಲಿನ ಗ್ರಾಮಸ್ಥರೆಲ್ಲ ಸೇರಿ ಎಚ್ಚರಿಕೆ ನೀಡುತ್ತಿದ್ದೇವೆ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-36-1947083350

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.