ಬುಧವಾರ, ಜನವರಿ 19, 2022
23 °C
ಕಚೇರಿ ಕರೆತಂದ ತಹಶೀಲ್ದಾರ್‌ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ

ಕೊಣನೂರು: ಭಿಕ್ಷೆ ಬೇಡುತ್ತಿದ್ದ ಅಂಗವಿಕಲನಿಗೆ ವೇತನ ಮಂಜೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಣನೂರು: ರಸ್ತೆಯಲ್ಲಿ ಭಿಕ್ಷೆ ಬೇಡುತ್ತಿದ್ದ ಅಂಗವಿಕಲನಿಗೆ ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ತಾವೇ ಖುದ್ದು ನಾಡ ಕಚೇರಿಗೆ ಕರೆದುಕೊಂಡು ಹೋಗಿ ಅಂಗವಿಕಲರ ವೇತನ ಆದೇಶ ಪತ್ರವನ್ನು ತಕ್ಷಣವೇ ನೀಡಿದರು.

ವಿವರ: ರಾಮನಾಥಪುರ ನಿವಾಸಿ ಜಾನಿ ಬಿನ್ ಮಣಿ ಅವರು ರಾಮೇಶ್ವರ ದೇವಸ್ಥಾನದ ಬಳಿಯಲ್ಲಿ ನಿತ್ಯ ಭಿಕ್ಷೆ ಬೇಡುತ್ತಿದ್ದು ಶನಿವಾರ ಕೊಣನೂರು ಹೋಬಳಿಯ ಅರಸೀಕಟ್ಟೆಯಮ್ಮ ದೇವಾಲಯದ ಬಳಿ ಬಳಿ ಭಿಕ್ಷೆ ಬೇಡುವುದನ್ನು ಕಂಡು ಸ್ಥಳಕ್ಕೆ ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ಹೋಗಿ ಜಾನ್ ಅವರನ್ನು ಮಾತನಾಡಿಸಿದರು. ಆತನಿಗೆ ಯಾವುದೇ ವೇತನ ಬರುತಿಲ್ಲ ಎಂಬುದಾಗಿ ತಿಳಿದ ತಕ್ಷಣ ಅಲ್ಲಿಂದಲೇ ಆಟೊ ಮೂಲಕ ರಾಮನಾಥಪುರ ನಾಡ ಕಚೇರಿಗೆ ಕರೆತಂದಿದ್ದಾರೆ.

ಕಂದಾಯ ನಿರೀಕ್ಷಕ ಸಿ.ಸ್ವಾಮಿ ಅವರಿಗೆ ಈ ತಕ್ಷಣ ಅಂಗವಿಕಲ ವೇತನ ಮಂಜೂರು ಮಾಡಲು ಕಡತ ತಯಾರಿಸಲು ತಿಳಿಸಿ ಅಲ್ಲಿನ ಯೂನಿಯನ್ ಬ್ಯಾಂಕ್‌ಗೆ ಜಾನ್ ಅವರನ್ನು ಕರೆದುಕೊಂಡು ಹೋಗಿ ಬ್ಯಾಂಕ್ ಖಾತೆ ತೆರೆದು ಕೆಲ ಹೊತ್ತಿನಲ್ಲಿ ಅಲ್ಲೇ ಅಂಗವಿಕಲವೇತನ ಮಂಜೂರು ಆದೇಶ ಪತ್ರವನ್ನು ನೀಡಿದ್ದಾರೆ.

ಕಂದಾಯ ನಿರೀಕಕ ಸ್ವಾಮಿ, ಗ್ರಾಮ ಲೆಕ್ಕಾಧಿಕಾರಿ ಜೊತೆಯಲ್ಲೇ ಇದ್ದು ಸಹಕರಿಸಿದರು. ಅಂಗವಿಕಲ ಜಾನ್ ಆದೇಶ ಪತ್ರ ಸ್ವೀಕರಿಸಿ ಅಧಿಕಾರಿಗಳಿಗೆ ಧನ್ಯವಾದ ಹೇಳಿದರು.

ತಹಶೀಲ್ದಾರ್‌ ಅವರ ಮಾನವೀಯ ಕಳಕಳಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು