ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂ ದಾಖಲೆ ಸಂರಕ್ಷಣೆಯ ಮಾದರಿ ಕಾರ್ಯ

ಬೇಲೂರು ತಹಶೀಲ್ದಾರ್ ಎನ್.ವಿ.ನಟೇಶ್ ಕಾಯಕಕ್ಕೆ ಸಿಬ್ಬಂದಿ ಸಹಕಾರ: ಸಾರ್ವಜನಿಕರ ಮೆಚ್ಚುಗೆ
Last Updated 24 ಡಿಸೆಂಬರ್ 2020, 2:33 IST
ಅಕ್ಷರ ಗಾತ್ರ

ಬೇಲೂರು: ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ಅಗತ್ಯ ಭೂ ದಾಖಲೆಗಳು, ಕೇಳಿದಾಕ್ಷಣ ಸಿಗುವಂತೆ ವೃತ್ತವಾರು, ಗ್ರಾಮವಾರು ಜೋಡಿಸಿ ಪೆಟ್ಟಿಗೆಯೊಳಗೆ ಸಂರಕ್ಷಿಸಿಡಲಾಗಿದೆ.

ಈವರೆಗೆ ದಾಖಲೆಪತ್ರಗಳು ಕಚೇರಿಯ ಕಾರಿಡಾರ್, ಹೊರಭಾಗದ ಕಬ್ಬಿಣದ ರ‍್ಯಾಕ್‌ಗಳಲ್ಲಿ ಹೀಗೆ ಎಲ್ಲೆಂದರಲ್ಲಿ ಬಟ್ಟೆಯಲ್ಲಿ ಕಟ್ಟಿ ರಾಶಿ ರಾಶಿ ಹಾಕಲಾಗಿತ್ತು. ಇದನ್ನು ಕಂಡ ತಹಶೀಲ್ದಾರ್ ಎನ್.ವಿ.ನಟೇಶ್ ಅವರು ದಾಖಲೆಗಳನ್ನು ಸಂರಕ್ಷಿಡಬೇಕೆಂಬ ಬಗ್ಗೆ ಮಾಹಿತಿ ನೀಡಿದರು. ಅಲ್ಲದೇ ಸಂರಕ್ಷಿಸುವ ಅನುಭವ ಇರುವ ಅವರು ಬೇಲೂರಿನಲ್ಲಿಯೂ ಕಾರ್ಯೋನ್ಮುಖರಾಗಿ 2019 ನವೆಂಬರ್‌ದಿಂದ ದಾಖಲೆಗಳ ಪ್ರತ್ಯೇಕಗೊಳಿಸಲು ಆರಂಭಿಸಿದರು.

ಕಚೇರಿಯ ಪ್ರತಿಯೊಬ್ಬ ಸಿಬ್ಬಂದಿಯಲ್ಲದೆ, ಗ್ರಾಮ ಲೆಕ್ಕಾಧಿಕಾರಿಗಳು ತಹಶೀಲ್ದಾರ್‌ರು ಇವರ ಕಾರ್ಯಕ್ಕೆ ಸಾಥ್ ನೀಡಿದರು. ಕೆಲ ಭಾನುವಾರವೂ ಬೇಸರವಿಲ್ಲದೆ ಸಿಬ್ಬಂದಿ ಕರ್ತವ್ಯ ನಿರ್ವಹಿಸಿದರು. ಪರಿಣಾಮ ಇಂದು 40 ವರ್ಷದ ದಾಖಲೆಗಳು ಗ್ರಾಮವಾರು, ವೃತ್ತವಾರು, ಪ್ರತ್ಯೇಕಗೊಂಡು ಸುಭದ್ರವಾಗಿದೆ. ದಾಖಲೆಗಳು ಪುಡಿಯಾಗದಂತೆ ಜೋಪಾನವಾಗಿ ಇಡಲಾಗಿದೆ. ದೆಹಲಿಯಿಂದ ತರಿಸಲಾದ ವಿಶೇಷ ತಂತ್ರಜ್ಞಾನವುಳ್ಳ ಏರಿಯೇಷನ್ ಒಳಗೊಂಡ 320ಕ್ಕೂ ಹೆಚ್ಚು ಬಾಕ್ಸ್ ಹಾಗೂ 4 ರ‍್ಯಾಕ್‌ಗಳನ್ನು ದಾನಿಗಳ ನೆರವಿನೊಂದಿಗೆ ಸುಮಾರು ₹ 4.15 ಲಕ್ಷಗಳಲ್ಲಿ ಖರೀದಿಸಲಾಗಿದೆ.

‘40 ವರ್ಷದ ಹಿಂದಿನ ಹಲವು ದಾಖಲೆಗಳು ಹಾಗೂ ಭೂನ್ಯಾಯ ಮಂಡಳಿಗೆ ಸೇರಿದ ಸುಮಾರು 4 ಸಾವಿರ ಸೇರಿ ಒಟ್ಟು 60 ಸಾವಿರ ದಾಖಲೆಗಳ್ನು ಸಂರಕ್ಷಿಸಿದ್ದಾರೆ. ಕೆಲವೊಂದು ಕಣ್ಮರೆಯಾಗಿವೆ. ಇನ್ನೂ ಶೇ 10 ರಷ್ಟು ಜೋಡಣಾ ಕಾರ್ಯ ಬಾಕಿಯಿದ್ದು ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು. ನಂತರ ಕಂಪ್ಯೂಟರ್‌ನಲ್ಲಿ ನಮೂದಿ ಸಲು ಯೋಚಿಸಲಾಗಿದೆ. ಇದಕ್ಕಾಗಿ ಕಂಪ್ಯೂಟರ್ ಇನ್ನಿತರ ಉಪಕರಣಗಳನ್ನು ದಾನಿಗಳಿಂದ ಪಡೆಯಲಾಗಿದೆ’ ಎಂದು ತಹಶೀಲ್ದಾರ್ ಎನ್.ವಿ.ನಟೇಶ್ ಹೇಳಿದರು.

ಸ್ಫೂರ್ತಿ: ಹಾಸನ ಜಿಲ್ಲಾಧಿಕಾರಿಯಾಗಿದ್ದ ನವೀನ್‌ರಾಜ್‌ಸಿಂಗ್ ಅವರು ನನಗೆ ಸ್ಫೂರ್ತಿಯಾಗಿದ್ದಾರೆ. ಈ ಹಿಂದೆ ಬೆಂಗಳೂರಿನಲ್ಲಿ ಕಾರ್ಯನಿಮಿತ್ತ ತೆರಳಿದ್ದಾಗ ಮತ್ತು ಮೈಸೂರಿಗೆ ದಾಖಲೆಗಳ ಹುಡುಕಲು ತೆರಳಿದ್ದ ವೇಳೆ ಅಲ್ಲಿನ ವ್ಯವಸ್ಥೆಯನ್ನು ನೋಡಿದೆ. ರೈತರಿಗೆ ದಾಖಲೆಗಳೇ ಮುಖ್ಯ ಎನ್ನುವುದನ್ನು ಮನಗಂಡು ಇಲ್ಲಿ ಕಾರ್ಯೋನ್ಮುಖನಾಗಿದೆ. ಕಚೇರಿಯ ನೌಕರರೆಲ್ಲರೂ ಸಹಕರಿಸಿದ್ದಾರೆ. ಇದಕ್ಕಾಗಿ ಮೇಲಧಿಕಾರಿಗಳಿಂದ ಅನುಮತಿ ಪಡೆದಿದ್ದೇನೆ. ದಾನಿಗಳು ಸ್ವಯಂಪ್ರೇರಿತರಾಗಿ ಸಹಕರಿಸಿದ್ದಾರೆಂದು ಕೃತಜ್ಞತೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT