ಏಳು ರೌಡಿಗಳ ಗಡಿಪಾರು: ಶಾಂತಿಯುತ ಚುನಾವಣೆ ನಡೆಸಲು ಡಿ.ಸಿ ಆದೇಶ

ಶುಕ್ರವಾರ, ಏಪ್ರಿಲ್ 26, 2019
35 °C

ಏಳು ರೌಡಿಗಳ ಗಡಿಪಾರು: ಶಾಂತಿಯುತ ಚುನಾವಣೆ ನಡೆಸಲು ಡಿ.ಸಿ ಆದೇಶ

Published:
Updated:

‌ಹಾಸನ: ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಹಾಗೂ ಶಾಂತಿಯುತ ಚುನಾವಣೆ ನಡೆಸುವ ಹಿನ್ನಲೆಯಲ್ಲಿ ಏಳು ಮಂದಿ ರೌಡಿಗಳನ್ನು ಗಡಿಪಾರು ಮಾಡಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಆದೇಶ ಹೊರಡಿಸಿದ್ದಾರೆ.

ಸಕಲೇಶಪುರದ ಸರಸ್ವತಿಪುರಂ ನಿವಾಸಿ ಧರ್ಮೇಶ್ (40), ಎಸ್.ಪಿ.ರಸ್ತೆಯ ಗುರುಮೂರ್ತಿ (35), ಕುಶಾಲನಗರ ಬಡಾವಣೆಯ ಹೌಸಿಂಗ್‌ ಬೋರ್ಡ್ ನಿವಾಸಿ ಮಲ್ನಾಡ್ ಮೆಹಬೂಬ್(41), ಮುಫೀಜ್ (44), ಲಕ್ಷ್ಮೀಪುರಂ ಬಡಾವಣೆಯ ರಘು (35) , ಹಾಸನದ ವಿಜಯನಗರ ಬಡಾವಣೆಯ ಕೆ.ಎಂ.ರವಿಕುಮಾರ್ ಅಲಿಯಾಸ್ ಚೈಲ್ಡ್ ರವಿ (34) ಹಾಗೂ ಶಾಂತಿಗ್ರಾಮ ಹೋಬಳಿ ಸಮುದ್ರವಳ್ಳಿಯ ಸಂತೋಷ್ ಅಲಿಯಾಸ್ ಸಂತು ( 32) ಎಂಬುವರನ್ನು ಜಿಲ್ಲೆಯಿಂದ ಗಡಿಪಾರು ಮಾಡುವಂತೆ ‍ಪೊಲೀಸ್‌ ವರಿಷ್ಠಾಧಿಕಾರಿ ಶಿಫಾರಸ್ಸು ಮಾಡಿದ್ದರು.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !