ಶನಿವಾರ, ಜನವರಿ 16, 2021
22 °C

ಆಲೂರು: ಕಾರ್ಜುವಳ್ಳಿ ಮಠದ ಶಂಭುಲಿಂಗ ಸ್ವಾಮೀಜಿ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆಲೂರು: ತಾಲ್ಲೂಕಿನ ಬಾಳೆ ಹೊನ್ನೂರು ಶಾಖಾ ಮಠದ ಕಾರ್ಜುವಳ್ಳಿಯ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ (37) ಅವರು ಮಂಗಳವಾರ ರಾತ್ರಿ ತಮ್ಮ ಕೋಣೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಾರ್ಜುವಳ್ಳಿ ಗ್ರಾಮದಿಂದ ಒಂದು ಕಿ. ಮೀ. ದೂರದಲ್ಲಿ ಮಠ ಇದೆ. 2006 ರಿಂದ ಮಠಾಧೀಶರಾಗಿ ಕಾರ್ಯನಿರ್ವಹಿಸುತ್ತಿದ್ದರು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದರು.

‘ನನ್ನ ಸಾವಿಗೆ ನಾನೇ ಕಾರಣ’ ಎಂದು ಬರೆದಿರುವ ಮರಣ ಪತ್ರ ಸಿಕ್ಕಿದೆ. 

ಕಾರವಾರ ಜಿಲ್ಲೆ ಹಳಿಯಾಳ ಗ್ರಾಮದ ಸಂಗಮೇಶ್ವರ ದೇವರು, ಶಾರದಮ್ಮ ಪುತ್ರರಾದ ಇವರ ಪೂರ್ವಾಶ್ರಮದ ಹೆಸರು ಸತೀಶ್‌ ದೇವರು. 23ನೇ ವಯಸ್ಸಿನಲ್ಲಿ ಮಠಾಧೀಶರಾಗಿ ನೇಮಕ ಮಾಡಲಾಯಿತು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. 

ತೆಂಕಲಗೂಡು, ಸಂಕಲಾಪುರ, ನೊಣವಿನಕೆರೆ ಮಠಾಧೀಶರ ಸಮ್ಮುಖದಲ್ಲಿ ಗುರುವಾರ ಬೆಳಿಗ್ಗೆ 11 ಗಂಟೆಗೆ ಮಠದ
ಆವರಣದಲ್ಲಿ ಅಂತ್ಯ್ರಕ್ರಿಯೆ ನೆರವೇರಲಿದೆ. ಶ್ರೀಗಳ ಸಾವಿನ ಸುದ್ದಿ ತಿಳಿದು ಭಕ್ತರು ಆತಂಕ ಗೊಂಡಿದ್ದಾರೆ.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು