ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಸ್ಕೆಟ್‌ಬಾಲ್‌: ಭಾರತಕ್ಕೆ ಗೆಲುವಿನ ಜಪ

Last Updated 25 ಫೆಬ್ರುವರಿ 2018, 18:58 IST
ಅಕ್ಷರ ಗಾತ್ರ

ಬೆಂಗಳೂರು: ಉದ್ಯಾನನಗರಿಯಲ್ಲಿ ಮೂರು ದಿನಗಳ ಹಿಂದೆ ನಡೆದಿದ್ದ ಪಂದ್ಯದಲ್ಲಿ ನಿರಾಸೆ ಕಂಡಿರುವ ಭಾರತ ಪುರುಷರ ಬ್ಯಾಸ್ಕೆಟ್‌ಬಾಲ್‌ ತಂಡ ಈಗ ಜಯದ ಮಂತ್ರ ಜಪಿಸುತ್ತಿದೆ. ಫಿಬಾ ವಿಶ್ವಕಪ್‌ ಏಷ್ಯಾ ವಲಯದ ‘ಸಿ’ ಗುಂಪಿನ ಅರ್ಹತಾ ಪಂದ್ಯದಲ್ಲಿ ಭಾರತ ತಂಡ ಸೋಮವಾರ ಲೆಬ ನಾನ್‌ ಸವಾಲು ಎದುರಿಸಲಿದೆ. ಈ ಹೋರಾಟಕ್ಕೆ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ವೇದಿಕೆಯೂ ಸಿದ್ಧವಾಗಿದೆ.

ಗುಂಪು ಹಂತದಲ್ಲಿ ಇದುವರೆಗೂ ಮೂರು ಪಂದ್ಯಗಳನ್ನು ಆಡಿರುವ ಭಾರತ ತಂಡಕ್ಕೆ ಗೆಲುವು ಕೈಗೆಟುಕ ದಾಗಿದೆ. ಮೊದಲ ಎರಡು ಪಂದ್ಯಗಳಲ್ಲಿ ಲೆಬನಾನ್‌ ಮತ್ತು ಸಿರಿಯಾಕ್ಕೆ ಶರಣಾಗಿದ್ದ ತಂಡ ಹೋದ ವಾರ ನಡೆದಿದ್ದ ಹೋರಾಟದಲ್ಲಿ ಜೋರ್ಡನ್‌ ಎದುರು ಸೋತಿತ್ತು.

ತವರಿನ ಅಭಿಮಾನಿಗಳ ಬೆಂಬಲ ದೊಂದಿಗೆ ಕಣಕ್ಕಿಳಿದಿದ್ದ ಸತ್ನಾಮ್‌ ಸಿಂಗ್‌ ಬಳಗ ಉತ್ತಮ ಆರಂಭವನ್ನೇ ಪಡೆದಿತ್ತು. ಆದರೆ ನಂತರದ ಕ್ವಾರ್ಟರ್‌ಗಳಲ್ಲಿ ಜೋರ್ಡನ್‌ ತಂಡದ ಆಕ್ರಮಣಕಾರಿ ಆಟದ ಮುಂದೆ ಆತಿಥೇ ಯರು ಮಂಕಾಗಿದ್ದರು.

ನಾಯಕ ಸತ್ನಾಮ್‌, ಅರವಿಂದ್‌ ಅಣ್ಣಾದುರೈ ಮತ್ತು ಜಸ್ಟಿನ್‌ ಜೋಸೆಫ್‌, ಜೋರ್ಡನ್‌ ತಂಡದ ರಕ್ಷಣಾ ವಿಭಾ ಗಕ್ಕೆ ಸವಾಲಾಗಿದ್ದರು. ಉತ್ತಮ ಲಯದಲ್ಲಿರುವ ಇವರು ಲೆಬನಾನ್‌ ವಿರುದ್ಧವೂ ಮಿಂಚುವ ವಿಶ್ವಾಸ ಹೊಂದಿದ್ದಾರೆ.

ಅನುಭವಿಗಳಾದ ಅಮೃತ್‌ಪಾಲ್‌ ಸಿಂಗ್‌ ಮತ್ತು ಅಮ್ಜೋತ್‌ ಸಿಂಗ್‌ ಅವರ ಬಲವೂ ಆತಿಥೇಯರ ಬೆನ್ನಿಗಿದೆ.

ಲವನೀತ್‌ ಸಿಂಗ್‌, ಜೋಗಿಂದರ್‌ ಸಿಂಗ್‌, ಜೀವನಾಥಮ್‌ ಪಾಂಡಿ, ಯದ್ವಿಂದರ್‌ ಸಿಂಗ್‌ ಮತ್ತು ತುರುಥೆಲ್‌ ಐಸಾಕ್‌ ಅವರೂ ಗುಣಮಟ್ಟದ ಆಟ ಆಡುವ ಭರವಸೆ ಹೊಂದಿದ್ದಾರೆ.

ರವಿ ಭಾರದ್ವಾಜ್‌, ಕರ್ನಾಟಕದ ಅರವಿಂದ್‌ ಆರ್ಮುಗಂ ಮತ್ತು ಅನಿಲ್‌ ಕೃಷ್ಣೆ, ಅವಕಾಶದ ನಿರೀಕ್ಷೆಯಲ್ಲಿದ್ದಾರೆ.

ಗೆಲುವಿನ ವಿಶ್ವಾಸದಲ್ಲಿ ಲೆಬನಾನ್‌: ಬಲಿಷ್ಠ ಆಟಗಾರರನ್ನು ಹೊಂದಿರುವ ಲೆಬನಾನ್‌ ತಂಡ ಭಾರತವನ್ನು ಸುಲಭವಾಗಿ ಮಣಿಸುವ ವಿಶ್ವಾಸ ಹೊಂದಿದೆ. ಈ ಬಾರಿಯ ಚಾಂಪಿಯನ್‌ಷಿಪ್‌ನಲ್ಲಿ ಉಭಯ ತಂಡಗಳು ಒಮ್ಮೆ ಮುಖಾಮುಖಿಯಾಗಿದ್ದವು. ಜೌಕ್‌ ಮಿಕಾಯೆಲ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಲೆಬನಾನ್‌ ಗೆಲುವಿನ ತೋರಣ ಕಟ್ಟಿತ್ತು.

ಹಿಂದಿನ ಈ ಜಯದ ಬಲದೊಂದಿಗೆ ಕಣಕ್ಕಿಳಿಯಲಿರುವ ತಂಡ ಆಟದ ಎಲ್ಲಾ ವಿಭಾಗಗಳಲ್ಲೂ ಶ್ರೇಷ್ಠ ಸಾಮರ್ಥ್ಯ ತೋರುವ ತವಕ ಹೊಂದಿದೆ. ಅತೆರ್‌ ಮಜೊಕ್‌, ಜೀನ್‌ ಎಬಿಡಿ ಅಲ್‌ ನೌರ್‌, ಎಲಿ ಚಮೌನ್‌, ವಾಯೆಲ್‌ ಅರಾಕ್ಜಿ, ಎಲಿಯಸ್‌ ರುಸ್ತುಮ್‌ ಅವರು ಪ್ರವಾಸಿ ಪಡೆಯ ಬೆನ್ನೆಲುಬಾಗಿದ್ದಾರೆ.

ಲೆಬನಾನ್‌ ತಂಡ ಹೋದ ವಾರ ಆಡಿದ ಮೊದಲ ಪಂದ್ಯದಲ್ಲಿ ಸಿರಿಯಾ ತಂಡವನ್ನು ಸೋಲಿಸಿತ್ತು. ಹೀಗಾಗಿ ಭಾರತಕ್ಕೆ ಕಠಿಣ ಸವಾಲು ಎದುರಾಗುವ ನಿರೀಕ್ಷೆ ಇದೆ.

ಆರಂಭ: ರಾತ್ರಿ 7ಕ್ಕೆ.

ಸ್ಥಳ: ಕಂಠೀರವ ಕ್ರೀಡಾಂಗಣ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT