ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಭಕ್ತರಿಗೆ ದರ್ಗಾದಲ್ಲಿ ವಾಸ್ತವ್ಯಕ್ಕೆ ಅವಕಾಶ!

Last Updated 28 ಫೆಬ್ರುವರಿ 2022, 16:34 IST
ಅಕ್ಷರ ಗಾತ್ರ

ಸಕಲೇಶಪುರ: ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ದೋಣಿಗಾಲ್‌ನ ಮಂಜರಬಾದ್ ದರ್ಗಾ, ಸತತ ಮೂರನೇ ವರ್ಷ ಧರ್ಮಸ್ಥಳ ಪಾದಯಾತ್ರಿಗಳಿಗೆ ವಿಶ್ರಾಂತಿ ಪಡೆಯಲು ಹಾಗೂ ರಾತ್ರಿ ವಾಸ್ತವ್ಯ ಮಾಡಲು ಅವಕಾಶ ಕಲ್ಪಿಸಿ ಗಮನ ಸೆಳೆದಿದೆ.

ಶಿವರಾತ್ರಿ ಆಚರಣೆಗೆ ಧರ್ಮಸ್ಥಳಕ್ಕೆ ನಾಡಿನ ವಿವಿಧೆಡೆಯಿಂದ ಸಹಸ್ರಾರು ಭಕ್ತರು ಶಿರಾಡಿ ಘಾಟ್‌ ಮಾರ್ಗವಾಗಿ ಪಾದಯಾತ್ರೆಯಲ್ಲಿ ಸಾಗುತ್ತಿದ್ದಾರೆ. ‘ಅಡುಗೆ ಕೋಣೆ, ಶೌಚಾಲಯ, ಸ್ನಾನಕ್ಕೆದರ್ಗಾದ ಸಮುದಾಯ ಭವನವನ್ನು ಪಾದಯಾತ್ರಿಗಳು ಬಳಸಿಕೊಳ್ಳಬಹುದು’ ಎಂದು ದರ್ಗಾ ಆಡಳಿತ ಮಂಡಳಿ ಫಲಕ ಹಾಕಿದೆ. ಆದರೆ, ಇದುವರೆಗೂ ಯಾರೂ ಭವನದ ಸೌಲಭ್ಯವನ್ನು ಬಳಸಿಕೊಂಡಿಲ್ಲ.

‘ಶಿವನ ಭಕ್ತರಿಗೆ ಸೌಲಭ್ಯ ಕಲ್ಪಿಸಲೆಂದೇ ಭಾನುವಾರ ಮತ್ತು ಸೋಮವಾರ ಸಮುದಾಯ ಭವನವನ್ನು ಬಾಡಿಗೆ ನೀಡಿರಲಿಲ್ಲ. ಆದರೆ ಯಾರೂ ವಾಸ್ತವ್ಯ ಮಾಡದ ಕಾರಣ ಭಾನುವಾರ ಕಾರ್ಯಕ್ರಮವೊಂದಕ್ಕೆಬಾಡಿಗೆಗೆ ನೀಡಲಾಗಿತ್ತು. ಈ ಬಾರಿ ಭಕ್ತರು ಹಳ್ಳಿಗಳಲ್ಲೇ ವಾಸ್ತವ್ಯ ಮಾಡುತ್ತಿದ್ದಾರೆ. ಬೆಳಿಗ್ಗೆಯಿಂದ ಸಂಜೆವರೆಗೆ ನೂರಾರು ಭಕ್ತರಿಗೆ ತಂಪು ಪಾನೀಯ, ಹಣ್ಣುಗಳನ್ನು ವಿತರಿಸಲಾಗಿದೆ ’ ಎಂದು ದರ್ಗಾ ಆಡಳಿತ ಮಂಡಳಿ ಅಧ್ಯಕ್ಷ ಮಲ್ನಾಡ್‌ ಮೆಹಬೂಬ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT