ಹಳೇಬೀಡು: ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಗ್ರಾಮ ಪಂಚಾಯಿತಿಯ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಮಂಗಳವಾರ ಬೆಂಕಿ ಕಾಣಿಸಿಕೊಂಡು ಪ್ಯಾನಲ್ ಬೋರ್ಡ್ ಸುಟ್ಟುಹೋಗಿದೆ.
ಮುಂಜಾನೆ ನೀರಿನ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿತು. ಪ್ಯಾನಲ್ ಬೋರ್ಡ್ ಹೊತ್ತಿ ಉರಿಯುತ್ತಿದ್ದದ್ದನ್ನು ಗಮನಿಸಿದ ಗ್ರಾಮ ಪಂಚಾಯಿತಿ ಸಿಬ್ಬಂದಿ ಘಟಕದ ಬಾಗಿಲು ತೆರೆದು ಗೋಣಿ ಚೀಲದಿಂದ ಬೆಂಕಿಯನ್ನು ನಂದಿಸಿದರು. ಇದರಿಂದ ನೀರಿನ ಘಟಕದ ಶೆಡ್‌ಗೆ ಆಗುತ್ತಿದ್ದ ಹಾನಿ ತಪ್ಪಿದಂತಾಗಿದೆ.