ಬೇಲೂರು: ‘ಬೇಲೂರು - ಮೂಡಿಗೆರೆ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಬಸ್ಗಳ ಕೊರತೆ ಮತ್ತು ವಿಳಂಬ ನೀತಿಯಿಂದ ಸಾಕಷ್ಟು ತೊಂದರೆಯಾಗುತ್ತಿದೆ’ ಎಂದು ನಾಗೇನಹಳ್ಳಿ ಗ್ರಾಮದ ಎನ್. ಬಿ. ಯಶವಂತ್ ಗೌಡ ದೂರಿದರು.

‘ಬೇಲೂರು-ಚೀಕನಹಳ್ಳಿ -ಮೂಡಿಗೆರೆ ಮಾರ್ಗವಾಗಿ ಪ್ರತಿನಿತ್ಯ, ವಿದ್ಯಾರ್ಥಿಗಳು, ನೌಕರರು, ಸಾರ್ವಜನಿಕರು ನಾನಾ ಕೆಲಸಗಳಿಗೆ ಹೋಗಿ, ಬರಲು ಕರ್ನಾಟಕ ಸಾರಿಗೆಯ ಬಸ್ಗಳನ್ನು ಅವಲಂಬಿಸಿದ್ದಾರೆ. ಆದರೆ ಚಿಕ್ಕಮಗಳೂರು ವಿಭಾಗದ ಬೇಲೂರು ಮತ್ತು ಮೂಡಿಗೆರೆ ಘಟಕದ ವೇಗದೂತ ಬಸ್ಗಳ ಕೆಲ ಚಾಲಕರು ಮತ್ತು ನಿರ್ವಾಹಕರ ದುರ್ನಡತೆ ಮತ್ತು ನಿರ್ಲಕ್ಷ್ಯದಿಂದ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಉಂಟಾಗಿದೆ ಎಂದಿದ್ದಾರೆ .

‘ತಡೆರಹಿತ (ನಾನ್ ಸ್ಟಾಪ್) ಬಸ್ಗಳು ಪ್ರಾರಂಭವಾಗಿ ಸಾರ್ವಜನಿಕರಿಗೆ ಅನಾನುಕೂಲವಾಗಿರುತ್ತದೆ. ಬೆಳಿಗ್ಗೆ ಪ್ರಯಾಣಿಸಲು ಬಸ್ಗಳೇ ಇಲ್ಲ. ಬೇಲೂರು ಘಟಕ ವ್ಯವಸ್ಥಾಪಕಿ ಶಬಾನಭಾನು ನಿರ್ಲಕ್ಷ್ಯದಿಂದ ಪ್ರಯಾಣಿಕರು ಹೈರಾಣಾಗಿದ್ದು, ಇವರು ಪ್ರಯಾಣಿಕರೊಂದಿಗೆ ಉಡಾಫೆ ವರ್ತನೆ ಮಾಡುತ್ತಿದ್ದಾರೆ’ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಅವರು ದೂರಿದ್ದಾರೆ.

ಬಸ್ಗಳು ನಿಗದಿತ ಸಮಯವನ್ನು ಸಹ ಪಾಲನೆ ಮಾಡದಿರುವುದರಿಂದ ಸಾರ್ವಜನಿಕ ವಲಯದಲ್ಲಿ ಗೊಂದಲಗಳು ಮತ್ತು ತೊಂದರೆ ಉಂಟಾಗುತ್ತಿದ್ದು, ಆಟೋ ಮತ್ತು ಖಾಸಗಿ ವಾಹನಗಳಲ್ಲಿ ದುಪ್ಪಟ್ಟು ಹಣ ನೀಡಿ ಪ್ರಯಾಣಿಸುವ ಪರಿಸ್ಥಿತಿ ಉಂಟಾಗಿದೆ. ಚಿಕ್ಕಮಗಳೂರು ವಿಭಾಗದ ಡಿ.ಟಿ.ಒ ಮತ್ತು ಸಂಚಾರ ನಿಯಂತ್ರಕರು ಸ್ಪಂದಿಸುತ್ತಿದ್ದರೂ ಚಾಲಕ ಮತ್ತು ನಿರ್ವಾಹಕದಿಂದ ತೊಂದರೆಯಾಗುತ್ತಿದ್ದು, ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ವಿದ್ಯಾರ್ಥಿಗಳಿಗೆ, ನೌಕರರಿಗೆ ಹಾಗೂ ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.